Advertisement
ಇದು ಹೊಸಾಡು ಗ್ರಾ.ಪಂ. ವ್ಯಾಪ್ತಿಯ ಕಂಚುಗೋಡು ಸಮೀಪದ ಭಗತ್‌ನಗರದ ಸ್ಥಿತಿ. ಕಂಚುಗೋಡಿನಲ್ಲಿ ಅಂಗನವಾಡಿ ಕೇಂದ್ರವಿದ್ದರೂ ಭರತ್‌ನಗರದವರಿಗೆ ಇದು ದೂರವಾಗಿದೆ. ಭವಿಷ್ಯದಲ್ಲಿ ಇಲ್ಲಿ ಕಂಚುಗೋಡಿನ ಪ್ರಾಥಮಿಕ ಶಾಲೆಗೆ ದಾಖಲಾತಿ ಕಡಿಮೆಯಾಗಬಾರದು ಎಂಬ ಉದ್ದೇಶದಿಂದಲೂ ಇಲ್ಲಿನ ಹಳೆ ವಿದ್ಯಾರ್ಥಿಗಳೇ ಅಂಗನವಾಡಿ ನಿರ್ವಹಣೆಗೆ ಮುಂದೆ ಬಂದಿದ್ದಾರೆ.
ಕಟ್ಟಡವೂ ಶಾಲೆಯದ್ದು
ಸದ್ಯ ಕಂಚುಗೋಡು ಸರಕಾರಿ ಹಿ. ಪ್ರಾ. ಶಾಲೆಯ ಕಂಪ್ಯೂಟರ್ ಕೊಠಡಿಯಲ್ಲಿ ಅಂಗನವಾಡಿ ನಡೆಯುತ್ತಿದೆ. ಇಲ್ಲಿ ಶಾಶ್ವತ ಕಟ್ಟಡದೊಂದಿಗೆ, ರಸ್ತೆ ಬದಿ ಆಗಿರುವುದ ರಿಂದ ಸುತ್ತಲೂ ಆವರಣಗೋಡೆ ನಿರ್ಮಿ ಸಲು ಊರವರು ಒತ್ತಾಯಿಸಿದ್ದಾರೆ. ತಾತ್ಕಾಲಿಕ ಅಡುಗೆ ಕೋಣೆ
ಇದು ಕಂಚುಗೋಡು ಅಂಗನವಾಡಿಯ ವಿಸ್ತರಣಾ ಕೇಂದ್ರವಾಗಿರುವುದರಿಂದ ಮಕ್ಕಳಿಗೆ ಆಹಾರವೆಲ್ಲ ಅಲ್ಲಿಂದಲೇ ಪೂರೈಕೆಯಾಗುತ್ತಿತ್ತು. ಆದರೆ ಈಗ ಮಳೆಗಾಲದಲ್ಲಿ ಸಾಗಾಟ ಕಷ್ಟ ಎಂದು ಈ ಶಾಲೆಯ ಹಳೆ ವಿದ್ಯಾರ್ಥಿಗಳೇ ಅಂಗನವಾಡಿ ಕೇಂದ್ರದ ಕೋಣೆಯಲ್ಲಿಯೇ ತಾತ್ಕಾಲಿಕ ಅಡುಗೆ ಕೋಣೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ.
Related Articles
ಅಂಗನವಾಡಿಯ ಕಾರ್ಯರ್ತೆ,ಸಹಾಯಕಿಯ ವೇತನ, ಮಕ್ಕಳನ್ನು ಕರೆ ತರಲು ವಾಹನದ ವ್ಯವಸ್ಥೆ ಮಾಡಿದ್ದು, ಒಟ್ಟು ತಿಂಗಳಿಗೆ 10 ಸಾವಿ ರೂ. ಗೂ. ಅಧಿಕ ಹಣವನ್ನು ಊರವರೇ ಭರಿಸುತ್ತಿದ್ದಾರೆ. ಪ್ರತಿ ತಿಂಗಳು ಇವರಿಗೆ ವೇತನ, ವಾಹನದ ವೆಚ್ಚ ನೀಡುವುದು ಹೊರೆ ಯಾಗುತ್ತಿದೆ. ಸಂಬಂಧಪಟ್ಟವರು ಇದಕ್ಕೆ ಸ್ಪಂದಿಸಲಿ ಎಂದು ಊರವರು ಆಗ್ರಹಿಸಿದ್ದಾರೆ.
Advertisement
ಶಾಶ್ವತ ಕೇಂದ್ರ ಆಗಲಿಕೆಲವೆಡೆ 3-4 ಮಕ್ಕಳಿದ್ದರೂ ಅಂಗನ ವಾಡಿಗಳನ್ನು ನಡೆಸಲಾಗುತ್ತಿದೆ. ಆದರೆ ಇದು ಈಗ ವಿಸ್ತರಣಾ ಕೇಂದ್ರ
ವಾಗಿದ್ದರೂ, ಇಲ್ಲಿ 21 ಮಕ್ಕಳಿದ್ದಾರೆ. ಇದನ್ನೇ ಶಾಶ್ವತ ಅಂಗನವಾಡಿ ಕೇಂದ್ರ ವಾಗಿಸಲಿ. ಆಗ ಸರಕಾರ ದಿಂದಲೇ ಎಲ್ಲ ಸವಲತ್ತುಗಳು ಸಿಗಲಿದೆ. ನಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ನೆರವು ನೀಡುತ್ತಿದ್ದೇವೆ. ಆದರೆ ಪ್ರತಿ ತಿಂಗಳು ನೀಡುವುದು ನಮ್ಮಿಂದ ಕಷ್ಟವಾಗುತ್ತಿದೆ.
– ಸುರೇಶ್ ವಿ.ಕೆ.ಕಂಚುಗೋಡು ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಸ್ತಾವನೆ ಸಲ್ಲಿಕೆ
ಭಗತ್‌ನಗರದಲ್ಲಿ ಶಾಶ್ವತ ಅಂಗನವಾಡಿ ಆರಂಭಿಸಲು ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರದೇ ಆದ ಪ್ರಕ್ರಿಯೆಗಳಿವೆ. ಕೇಂದ್ರ ಸರಕಾರದ ಅನುಮೋದನೆ ಕೂಡ ಬೇಕಿದೆ. ಅಲ್ಲಿಯವರೆಗೆ ಸಹಾಯಕಿ, ಕಾರ್ಯಕರ್ತೆಯರ ವೇತನ ನೀಡಲು ಸಾಧ್ಯವಿಲ್ಲ. ಆದರೆ ಕಂಚುಗೋಡು ಅಂಗನವಾಡಿಯಿಂದಲೇ ಆಹಾರದ ವ್ಯವಸ್ಥೆ ಮಾಡಲಾಗುತ್ತಿದೆ.
– ನಿರಂಜನ್ ಭಟ್,
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಅಧಿಕಾರಿ