Advertisement
ಭಾರತ್‌ಮಾಲಾ ಯೋಜನೆಯ ಮೊದಲ ಹಂತದಲ್ಲಿ 20,000 ಕಿಲೋ ಮೀಟರ್ ಹೆದ್ದಾರಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಹಿಂದೆಯೇ ಘೋಷಿಸಿದ್ದರು. ಈಗ ಈ ಪ್ರಸ್ತಾವಕ್ಕೆ ಕೇಂದ್ರ ಸಂಪುಟದ ಒಪ್ಪಿಗೆ ದೊರೆತಿದ್ದು, ಭಾರತ್‌ಮಾಲಾ ಯೋಜನೆ ಯಡಿ ಒಟ್ಟು 34,800 ಕಿಲೋ ಮೀಟರ್ ಹೆದ್ದಾರಿ ನಿರ್ಮಾಣ ಆಗಲಿದೆ. ಉಳಿದ ಹೆದ್ದಾರಿ ಯೋಜನೆಗಳೂ ಸೇರಿ ಒಟ್ಟು 83,677 ಕಿಲೋ ಮೀಟರ್‌ನಷ್ಟು ದೂರದ ಹೆದ್ದಾರಿ ನಿರ್ಮಾಣವು ಸರಕಾರದ ಗುರಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎನ್‌ಎಚ್‌ಡಿಪಿ) ಬಳಿಕ ಅತೀ ದೊಡ್ಡ ಹೆದ್ದಾರಿ ನಿರ್ಮಾಣ ಯೋಜನೆ ಇದಾಗಿದೆ.
ಅಷ್ಟಕ್ಕೂ ಈ ಯೋಜನೆಗೆ ಸಲಹೆ ನೀಡಿದ್ದು ಜಾಗತಿಕ ಸಲಹಾ ಸಂಸ್ಥೆ ಎಟಿ ಕೀಯರ್ನಿ. ಭಲೇ ಇತಿಹಾಸ ಹೊಂದಿರುವ ಏಳೆಂಟು ದಶಕಗಳ ಹಿಂದಿನ ಅಮೆರಿಕ ಮೂಲದ ಕಂಪೆನಿ ಇದಾಗಿದ್ದು, ಭಾರತದಲ್ಲಿಯೂ ಶಾಖೆ ಹೊಂದಿದೆ. 2014ರ ಅಂಕಿ-ಅಂಶದ ಪ್ರಕಾರ ಈ ಸಂಸ್ಥೆಯ ವಾರ್ಷಿಕ ಆದಾಯ ಅಂದಾಜು 7,200 ಕೋಟಿ. ರೂ. ಕಂಪೆನಿ 3,500 ಸಿಬಂದಿ ಹೊಂದಿದೆ. ಚಿಕಾಗೋದ ಫ್ರಾಂಕ್ಲಿನ್ ಸೆಂಟರ್‌ನಲ್ಲಿ ಪ್ರಧಾನ ಕಚೇರಿ ಹೊಂದಿದೆ.
Related Articles
ಅನುತ್ಪಾದಕ ಆಸ್ತಿಯ ಬಿಕ್ಕಟ್ಟಿನಲ್ಲಿ ಸಿಲುಕಿ ರುವ ಸಾರ್ವಜನಿಕ ವಲಯದ ಬ್ಯಾಂಕು (ಪಿಎಸ್‌ಯು)ಗಳಿಗೆ ಮರುಜೀವ ತುಂಬಲು ನಿರ್ಧರಿಸಿರುವ ಕೇಂದ್ರ ಸರಕಾರವು, ಮುಂದಿನ 2 ವರ್ಷಗಳಲ್ಲಿ 2.11 ಲಕ್ಷ ಕೋಟಿ ರೂ.ಗಳ ಬಂಡವಾಳವನ್ನು ಪೂರೈಸಲಿದೆ. ಈ ಪೈಕಿ 1.35 ಲಕ್ಷ ಕೋಟಿಯನ್ನು ಮರುಬಂಡವಾಳೀಕರಣ ಬಾಂಡ್‌ಗಳ ರೂಪದಲ್ಲಿ ಹಾಗೂ ಉಳಿದ 76 ಸಾವಿರ ಕೋಟಿಯನ್ನು ಬಜೆಟ್ ನೆರವಿನ ರೂಪದಲ್ಲಿ ನೀಡಲಿದೆ ಎಂದು ಹಣಕಾಸು ಸೇವಾ ಕಾರ್ಯದರ್ಶಿ ರಾಜೀವ್ ಕುಮಾರ್ ಘೋಷಿಸಿದ್ದಾರೆ. ಮಂಗಳವಾರ ದಿಲ್ಲಿಯಲ್ಲಿ ದೇಶದ ಆರ್ಥಿಕತೆಗೆ ಸಂಬಂಧಿಸಿ ವಿವರ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ. ಬಾಂಡ್‌ಗಳ ಸ್ವರೂಪ ಮತ್ತಿತರ ವಿವರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದೂ ಕುಮಾರ್ ಹೇಳಿದ್ದಾರೆ. ಜತೆಗೆ, ಇಂಧ್ರಧನುಷ್ ಯೋಜನೆಯನ್ವಯ ಬ್ಯಾಂಕುಗಳು 18 ಸಾವಿರ ಕೋಟಿ ರೂ.ಗಳನ್ನು ಪಡೆಯಲಿದೆ ಎಂದು ವಿತ್ತ ಸಚಿವ ಜೇಟಿÉ ತಿಳಿಸಿದ್ದಾರೆ.
Advertisement
ಜಿಎಸ್‌ಟಿ ದಂಡದಿಂದ ವಿನಾಯಿತಿಇನ್ನೊಂದೆಡೆ ಕೇಂದ್ರ ಸರಕಾರವು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ನಿಯಮವನ್ನು ಇನ್ನಷ್ಟು ಸಡಿಲಿಕೆ ಮಾಡಿದೆ. ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ವಿಳಂಬ ಮಾಡಿದವರಿಗೆ ದಂಡದಿಂದ ವಿನಾಯಿತಿ ನೀಡಲಾಗಿದೆ. ಅಲ್ಲದೆ ಈಗಾಗಲೇ ಪಡೆಯಲಾಗಿರುವ ದಂಡದ ಮೊತ್ತವನ್ನು ಮರುಪಾವತಿ ಮಾಡುವುದಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟಿÉ ತಿಳಿಸಿದ್ದಾರೆ. ಈ ಹಿಂದೆ ಜುಲೈ ತಿಂಗಳ ದಂಡಕ್ಕೂ ವಿನಾಯಿತಿ ನೀಡಲಾಗಿತ್ತು. ಜಿಎಸ್‌ಟಿ ಕಾನೂನಿನನ್ವಯ ರಿಟರ್ನ್ಸ್ ಸಲ್ಲಿಕೆ ವಿಳಂಬವಾದರೆ ದಿನಕ್ಕೆ 100 ರೂ.ಗಳಂತೆ ದಂಡ ಪಡೆಯಲಾಗುತ್ತಿತ್ತು.