Advertisement

ಅಮಿತ್ ಶಾ ಮತ್ತವರ ಬಳಗವನ್ನು ನಾನು ನಂಬುವುದಿಲ್ಲ : ಉದ್ಭವ್ ಕಿಡಿ

09:35 AM Nov 09, 2019 | Hari Prasad |

ಮುಂಬಯಿ: ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮಿತ್ರಪಕ್ಷಗಳ ಮುನಿಸು ತಣಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಮಹಾರಾಷ್ಟ್ರದಲ್ಲಿ ಸತತ ಎರಡನೇ ಬಾರಿಗೆ ಸರಕಾರವನ್ನು ರಚಿಸುವ ಅವಕಾಶವನ್ನು ಉಭಯ ಪಕ್ಷಗಳು ಕೈಚೆಲ್ಲಿದಂತೆ ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ.

Advertisement

ಈ ನಡುವೆ ಮಹಾರಾಷ್ಟ್ರ ವಿಧಾನಸಭೆಯ ಅವಧಿ ಮುಕ್ತಾಯಗೊಂಡ ಕಾರಣ ಮುಖ್ಯಮಂತ್ರಿ ಪದಕ್ಕೆ ದೇವೇಂದ್ರ ಫಡ್ನವೀಸ್ ಅವರು ಇಂದು ರಾಜೀನಾಮೆ ಸಲ್ಲಿಸಿದ್ದಾರೆ.

ಈ ನಡುವೆ ತನ್ನ ದೀರ್ಘಕಾಲದ ರಾಜಕೀಯ ಮಿತ್ರ ಭಾರತೀಯ ಜನತಾ ಪಕ್ಷದ ವಿರುದ್ಧ ಶಿವಸೇನೆ ಹಿಗ್ಗಾಮುಗ್ಗ ಹರಿಹಾಯಲಾರಂಭಿಸಿದೆ. ಲೋಕಸಭಾ ಪೂರ್ವದಲ್ಲಿ ಎರಡೂ ಪಕ್ಷಗಳ ನಾಯಕರ ನಡುವೆ ಆಗಿತ್ತು ಎನ್ನಲಾಗುತ್ತಿರುವ 50:50 ಅಧಿಕಾರ ಹಂಚಿಕೆ ಸೂತ್ರಕ್ಕೆ ಬಿಜೆಪಿ ಒಪ್ಪದೇ ತಟಸ್ಥವಾಗಿರುವ ಹಿನ್ನಲೆಯಲ್ಲಿ ಶಿವಸೇನೆಯ ಪಟ್ಟು ಈಡೇರಲೇ ಇಲ್ಲ. ಇದರಿಂದ ಕ್ರುದ್ಧರಾಗಿರುವ ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಸರಿ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

ಕೇಂದ್ರ ಬಿಜೆಪಿ ನಾಯಕರು ಸುಳ್ಳಿನ ಸರದಾರರು ಎಂದು ಜರೆದಿರುವ ಉದ್ಭವ್ ಕೇಸರಿ ಪಕ್ಷ ನಮಗೆ ನಂಬಿಸಿ ಮೋಸ ಮಾಡಿದೆ ಎಂದು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ. ‘ನಾನು ಬಿಜೆಪಿವಾಲಾ ಅಲ್ಲ. ನಾನೆಂದೂ ಸುಳ್ಳನ್ನು ಹೇಳುವುದಿಲ್ಲ. ನಮಗೆ ಅವರು ಭರವಸೆ ನೀಡಿದ್ದರು ಆದರೆ ಅದರಿಂದ ಅವರೀಗ ಹಿಂದೆ ಸರಿದಿದ್ದಾರೆ’ ಎಂದು ಮುಂಬಯಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಉದ್ಭವ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next