Advertisement

ಮೈಸೂರಿಂದ ಬೆಂಗಳೂರಿಗೆ ಬಂದಿಳಿದ ಭಾರತಿ ವಿಷ್ಣುವರ್ಧನ್‌

10:01 AM Apr 18, 2020 | Suhan S |

ಕೋವಿಡ್ 19 ವೈರಸ್‌ಹರಡುವಿಕೆ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಣೆ ಆಗಿರುವುದರಿಂದ ಬಹುತೇಕರು ಎಲ್ಲೆಲ್ಲಿ ಇದ್ದರೋ, ಅಲ್ಲಲ್ಲೇ ಇದ್ದಾರೆ. ಹಲವರು ಈಗಾಗಲೇ ತಮ್ಮ ಮನೆ ಸೇರೋಕೆ ಹರಸಾಹಸ ಪಡುತ್ತಿದ್ದಾರೆ. ಇತ್ತೀಚೆಗೆ ಹಿರಿಯ ಕಲಾವಿದೆ ಜಯಂತಿ ಅವರು ಕೂಡ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲೇ ಇದ್ದ ವಿಷಯ ಗೊತ್ತೇ ಇದೆ. ಈಗ ಹಿರಿಯ ನಟ ಭಾರತಿ ವಿಷ್ಣುವರ್ಧನ್‌ ಅವರು ಸಹ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ 21 ದಿನಗಳ ಕಾಲ ಮೈಸೂರಲ್ಲಿದ್ದರು. ಬೆಂಗಳೂರಿಗೆ ಬರಬೇಕುಅಂದುಕೊಂಡರೂ ಅವರಿಗೆ ಸಾಧ್ಯವಾಗಿರಲಿಲ್ಲ. ಇದೀಗ ಅವರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಅವರು ಮೈಸೂರಿನಿಂದ ಬೆಂಗಳೂರಿಗೆ ಬರಲು ಕಾರಣವಾಗಿದ್ದು, ಸಚಿವ ಸೋಮಣ್ಣ.

Advertisement

ಹೌದು, ನಟಿ ಭಾರತಿ ವಿಷ್ಣುವರ್ಧನ್‌ ಅವರು, ಕೆಲಸದ ನಿಮಿತ್ತ ಮೈಸೂರಿಗೆ ಹೋಗಿದ್ದರು. ಇನ್ನೇನು ತಮ್ಮ ಕೆಲಸಗಳನ್ನು ಪೂರೈಸಿಕೊಂಡು ಹಿಂದಿರುಗಬೇಕು ಅಂದುಕೊಂಡಾಗಲೇ, ಭಾರತ ಲಾಕ್‌ಡೌನ್‌ ಆಯ್ತು. ಹಾಗಾಗಿ ಅವರು ಮೈಸೂರಿನ ಮನೆಯಲ್ಲೇ ಇದ್ದರು.ಅವರು ಸೇವಿಸುತ್ತಿದ್ದ ಹೋಮಿಯೋಪತಿ ಔಷಧ ಖಾಲಿಯಾಗಿದೆ. ಮೈಸೂರಲ್ಲಿ ಆ ಔಷಧ ಸಿಗದ ಕಾರಣ, ಬೆಂಗಳೂರಲ್ಲೇ ಔಷಧ ಪಡೆಯಬೇಕಿತ್ತು. ಹಾಗಾಗಿ, ಬೆಂಗಳೂರಿಗೆ ಬರಲು ಅವರು ನಿರ್ಧರಿಸಿದ್ದಾರೆ. ಆದರೆ, ಲಾಕ್‌ಡೌನ್‌ ಉಲ್ಲಂಘನೆ ಮಾಡುವಂತಿಲ್ಲ. ಹೀಗಾಗಿ, ಅವರು ಸಚಿವ ಸೋಮಣ್ಣ ಅವರ ಬಳಿ ಇರುವ ಸಮಸ್ಯೆ ಹೇಳಿಕೊಂಡಿದ್ದಾರೆ. ಅವರ ಹೋಮಿಯೋಪತಿ ಔಷಧ ಅಲ್ಲಿ ಸಿಗಲ್ಲ ಎಂಬುದನ್ನು ದೃಢಪಡಿಸಿಕೊಂಡ ಸೋಮಣ್ಣ ಅವರು, ಭಾರತಿ ವಿಷ್ಣುವರ್ಧನ್‌ ಅವರನ್ನು ಬೆಂಗಳೂರಿಗೆ ಕರೆಸಿಕೊಳ್ಳಲು ಮುಂದಾಗಿದ್ದಾರೆ. ಅಲ್ಲಿಂದ ಬರಲು ಸೋಮಣ್ಣ ಅವರೇ ಕಾರು ವ್ಯವಸ್ಥೆ ಮಾಡಿ, ಪಾಸ್‌ ಕಲ್ಪಿಸಿಕೊಟ್ಟು, ಬೆಂಗಳೂರಿಗೆ ಬರಲು ಕಾರಣರಾಗಿದ್ದಾರೆ. ಸದ್ಯಕ್ಕೆ ಬೆಂಗಳೂರಿನ ಮನೆ ಸೇರಿರುವ ಅವರು, ಕುಟುಂಬದವರ ಜೊತೆ ಸಮಯ ಕಳೆಯುತ್ತಿದ್ದಾರೆ.

ಇನ್ನು, ಈ ಸಮಯದಲ್ಲಿ ಕುಟುಂಬದವರ ಜೊತೆ ಸೇರಿ ಒಂದಷ್ಟು ಸಿನಿಮಾ ನೋಡುವುದರ ಜೊತೆಗೆ ಕೋವಿಡ್ 19 ಸಮಸ್ಯೆಗೆ ಸಿಲುಕಿದವರ ಬಗ್ಗೆ ಕಾಳಜಿ ತೋರಿ, ಕೈಲಾದ ಸಹಾಯ ಮಾಡುವಂತೆಯೂ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next