Advertisement

ಶ್ರೀರಾಮನ ಶಾಪದಿಂದಲೇ ಕಾಂಗ್ರೆಸ್ ಸರ್ವನಾಶವಾಗಲಿದೆ : ಶಾಸಕ ಡಾ.ಭರತ್‌ ಶೆಟ್ಟಿ ವೈ ಆಕ್ರೋಶ

10:47 PM Jun 18, 2022 | Team Udayavani |

ಮಂಗಳೂರು : ಸಾಮಾಜಿಕ ಜಾಲತಾಣ ಕ್ಲಬ್‌ ಹೌಸ್ ಚರ್ಚೆಯೊಂದರಲ್ಲಿ ಸೀತೆ,ರಾಮ,ಹನುಮಂತನ ಬಗ್ಗೆ ಕೀಳು ಶಬ್ದಗಳಿಂದ ಮಾತನಾಡಿರುವ ಪುತ್ತೂರಿನ ಕಾಂಗ್ರೆಸ್ ನಾಯಕಿಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತ ಪಡಿಸಿರುವ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಶ್ರೀರಾಮನ ಶಾಪದಿಂದಲೇ ಕಾಂಗ್ರೆಸ್ ಪಕ್ಷ ಸರ್ವನಾಶವಾಗಲಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Advertisement

ಕೋಟಿ ಕೋಟಿ ಹಿಂದೂಗಳು ಪೂಜಿಸುವ ಹಿ೦ದೂ ದೇವರಾದ ಶ್ರೀರಾಮನ ಬಗ್ಗೆ  ,ಹಿಂದೂ ಪರಂಪರೆಯನ್ನು ಅವಹೇಳನ ಮಾಡಿದರೆ ಯಾರೂ ಪ್ರಶ್ನಿಸಲಾರರು ಎಂಬ ಭಂಡ ಧೈರ್ಯವನ್ನು ಕಾಂಗ್ರೆಸ್‌ ಇಟ್ಟುಕೊಳ್ಳುವುದು ಬೇಡ. ಈ ಹುಚ್ಚಾಟದ ಚರ್ಚೆಯಿಂದ ಹಿಂದೂಗಳ ಸ್ವಾಭಿಮಾನವನ್ನು ಕೆಣಕಿದ್ದೀರಿ.ಇದು ದೊಡ್ಡ ಪ್ರಮಾದಲ್ಲಿ ಮುಂದೊಂದು ದಿನ ಕಾಂಗ್ರೆಸ್ ಮುಕ್ತ ಭಾರತದ ಹೋರಾಟಕ್ಕೆ ನಾಂದಿ ಆಗಲಿದೆ .

ಮತಕ್ಕಾಗಿ ಚುನಾವಣೆ ಬಂದಾಗ ನಾನಾ ನಾಟಕ ಮಾಡುವ ನಿಮ್ಮ ಪಕ್ಷದ ಹಿ೦ದೂ ವಿರೋಧಿ ಎ೦ಜೆ೦ಡಾ ಬಟಾಬಯಲಾಗಿದೆ. ಅನ್ಯಧರ್ಮದ ಮತಗಳ ಬಗ್ಗೆ ಆಕಸ್ಮಿಕವಾಗಿ ವಿವಾದವಾದಾಗ ಮುಂಚೂಣಿಯಲ್ಲಿನಿಂತು ಖ೦ಡಿಸಿ, ಬೀದಿಗಿಳಿದು ಹೋರಾಡುವ ನಿಮ್ಮ ಪಕ್ಷ ಇದೀಗ ನಿಮ್ಮದೇ ಪಕ್ಷದ ಹಿಂದೂ ಎಂದು ಕರೆಸಿಕೊಳ್ಳಲು ನಾಲಾಯಕ್ ಆಗಿರುವ ಮಹಿಳಾ ನಾಯಕಿಯೊಬ್ಬಳು  ಹಿ೦ದೂ ದೇವರನ್ನು ಕೀಳಾಗಿ ಕಂಡು ಮಾತನಾಡಿದ ಬಗ್ಗೆ ಯಾವ ಕ್ರಮ  ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಹುಣಸೂರು : ಕಾರಿನ ಟೈರ್ ಪಂಚರ್ ಆಗಿ ಟ್ಯಾಂಕರ್ ಗೆ ಢಿಕ್ಕಿ; ಯುವತಿಯರಿಬ್ಬರ ಸಾವು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next