Advertisement

ಭಾರತ್ ಮಾತಾಕಿ ಜೈ ಎನ್ನುತ್ತಲೇ ಬಿಜೆಪಿಯವರಿಂದ ಮಹಿಳೆಯರ ಮೇಲೆ ದೌರ್ಜನ್ಯ: ಪುಷ್ಪಾ ಅಮರನಾಥ್

03:10 PM Dec 01, 2020 | Mithun PG |

ಬೆಂಗಳೂರು: ತೆರದಾಳದಲ್ಲಿ ಮಹಿಳೆಯ ಮೇಲೆ ನಡೆದಿರುವ ದೌರ್ಜನ್ಯಕ್ಕೆ ಆ ಮಹಿಳೆಗೆ ಗರ್ಭಪಾತವಾಗಿದೆ. ಬಿಜೆಪಿಯವರು ಮಹಿಳೆಯರ ಬಗ್ಗೆ ಗೌರವ ತೋರುವುದಾಗಿ ಭಾರತ ಮಾತಾಕಿ ಜೈ ಅಂತ ಹೇಳುತ್ತಾರೆ.  ಅದರೆ, ಮಹಿಳೆಯರ ಮೇಲೆ ಅಮಾನುಷವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಕಿಡಿಕಾರಿದ್ದಾರೆ.

Advertisement

ಸರ್ಕಾರ ಸಿದ್ದು ಸವದಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅವರ ವಿರುದ್ಧ ಎಫ್ ಐ ಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದರು. ಪ್ರಕರಣ ದಾಖಲಿಸಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಏನೂ ಮಾತನಾಡುತ್ತಿಲ್ಲ. ಸಿದ್ದು ಸವದಿಯನ್ನು ಬಿಜೆಪಿಯಿಂದ ಅಮಾನತು ಮಾಡಿ, ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು.

ಬಿಜೆಪಿ ಮಹಿಳಾ ನಾಯಕಿಯರಾಗಿರುವ ಶೋಭಾ, ಶಶಿಕಲಾ ಜೊಲ್ಲೆ, ತಾರಾ ಏನು ಮಾಡುತ್ತಿದ್ದಾರೆ. ಈ ಪ್ರಕರಣವನ್ನು ಯಾಕೆ ಖಂಡಿಸುತ್ತಿಲ್ಲ. ನೀವು ಮಹಿಳೆಯರಾಗಿ ಒಬ್ಬ ಮಹಿಳೆಯ ಬಗ್ಗೆ ಮಾತನಾಡುವ ಧೈರ್ಯವೂ ನಿಮಗಿಲ್ಲವೇ. ನೀವು ಬಿಜೆಪಿ ಪುರುಷ ನಾಯಕರ ಜೊತೆ ಸೇರಿರುವ ಕೀಚಕರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದ ನಟಿ ಊರ್ಮಿಳಾ ಮಾತೋಂಡ್ಕರ್ ಶಿವಸೇನೆ ಸೇರ್ಪಡೆ

ಭೇಟಿ ಬಚಾವೊ ಭೇಟಿ ಪಡಾವೊ ಅಂತ ಹೇಳಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಸಲಾಗುತ್ತಿದೆ. ಮೊದಲು ಆ ಬೋಗಸ್ ಕಾಯ್ದೆಯನ್ನು ರದ್ದು ಮಾಡಿ.  ಸಿದ್ದು ಸವದಿ ತಾವು ಮಾಡಿರುವ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರನ್ನು ಶೀಘ್ರವೆ ಬಂಧಿಸಬೇಕು ಎಂದರು.

Advertisement

ಅಕಾಯ್ ಪದ್ಮಶಾಲಿ ಮಾತನಾಡಿ, ಮಹಿಳೆಯ ಬಗ್ಗೆ ಮಾತನಾಡುವ ಬಿಜೆಪಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ನೋಡಿದರೆ ಇದು ಕೊಲೆ ಎಂದು ಹೇಳಬೇಕಾಗುತ್ತದೆ. ಸಿದ್ದು ಸವದಿ ಸ್ವಯಂ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕು. ಬಿಜೆಪಿ ಸವದಿಯವನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ:  ಬೆಳಗಾವಿಯಲ್ಲಿ 17 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ: ಸಚಿವ ಬೊಮ್ಮಾಯಿ

ನಂತರ ಮಾತನಾಡಿದ ವೀಣಾ ಕಾಶಪ್ಪನವರ್, ಸಿದ್ದು ಸವದಿಯವರನ್ನು ಶೀಘ್ರವೇ ಬಂಧಿಸಬೇಕು. ಸವಿತ ಎನ್ನುವ ಮಹಿಳೆ ಮೇಲೆ ಹಲ್ಲೆಯಾಗಿದೆ ಅವರು ಭಯಭೀತಗೊಂಡಿದ್ದಾರೆ. ನಮ್ಮದು ಬಸವಣ್ಣನವರು ನಡೆದಾಡಿದ, ಅಕ್ಕಮಹಾದೇವಿ ನಡೆದಾಡಿದ ನಾಡು. ಅಂತಹ ನಾಡಿನಲ್ಲಿ ಈ ರೀತಿ.ದೌರ್ಜನ್ಯ ನಡೆಸಲಾಗಿದೆ. ಒಟ್ಟು ಮೂವರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಬಾಗಲಕೋಟೆ ಜಿಲ್ಲೆಯವರಾದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ್ ಏನು ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಎಂದು ಕಿಡಿಕಾರಿದರು.

ಇದನ್ನೂ ಓದಿ:  ತಳ್ಳಾಟದಿಂದ ಪುರಸಭೆ ಸದಸ್ಯೆಗೆ ಗರ್ಭಪಾತ: ಏಳು ವರ್ಷದ ಬಳಿಕ ಗರ್ಭಿಣಿಯಾಗಿದ್ದ ಸದಸ್ಯೆ

ಈ ಕುರಿತು ಪ್ರತಿಕ್ರಿಯಿಸಿದ ಸೌಮ್ಯಾ ರೆಡ್ಡಿ, ಒಬ್ಬ ಜನಪ್ರತಿನಿಧಿ ಒಬ್ಬ ಮಹಿಳೆಯ ಮೇಲೆ ಹೇಗೆ ದೌರ್ಜನ್ಯ ಮಾಡಿದರು ಎನ್ನುವುದು ಇಡೀ ಜಗತ್ತು ನೋಡಿದೆ.  ನಾವು ದೇಶದಲ್ಲಿ ದುರ್ಗೆ, ಲಕ್ಷ್ಮಿ ಸರಸ್ವತಿ ಅಂತ ಪೂಜೆ ಮಾಡುತ್ತೇವೆ. ನಾವು  49% ಜನ ಸಂಖ್ಯೆ ಇದ್ದೇವೆ. ನಮಗೆ ರಾಜಕೀಯ ಮಾಡಲು ಯಾವುದೇ ಹಕ್ಕಿಲ್ವಾ. ಎಫ್ ಐ ಆರ್  ಆದರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.  ಅವರಿಗೆ ಗರ್ಭಪಾತ ಆಗಿದೆ ಎನ್ನುವ ಸುದ್ದಿ ಕೇಳಿ ಬೇಸರವಾಯಿತು ಎಂದರು.

ಇದನ್ನೂ ಓದಿ:  ಶಿಕ್ಷಣಕ್ಕೆ ಒತ್ತು;ಹರ್ಯಾಣ ಸರ್ಕಾರದಿಂದ 8-12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್

Advertisement

Udayavani is now on Telegram. Click here to join our channel and stay updated with the latest news.

Next