Advertisement
ಬಹುತೇಕರಿಗೆ ನಿಕೊಲಸ್ ಜೆಮ್ಸ್ ಬಗ್ಗೆ ತಿಳಿದಿರಬಹುದು. ಕೈ ಇಲ್ಲ, ಕಾಲು ಇಲ್ಲ , ಚಿಂತೆಯೂ ಇಲ್ಲ ಎಂಬ ಅವರ ನಡೆ ವಿಶ್ವಕ್ಕೆ ಒಂದು ಪ್ರೇರಣೆ ಇದ್ದಂತೆ. ಅದರಂತೆ ಭಾರತದಲ್ಲಿಯೂ ಅಂಗವೈಕಲ್ಯ ಹೊಂದಿದ ಅನೇಕರ ಸಾಧನೆ ನಮ್ಮ ನಿಮ್ಮಂತವರಿಗೆ ಹೆಮ್ಮೆಯ ವಿಚಾರವೂ ಆಗಿದೆ. ಜೀವನ ಸವಾಲುಗಳನ್ನು ಎದುರಿಸಿದ ಹೆಮ್ಮೆಯ ಸಾಧಕರಲ್ಲಿ ಭರತ್ ಕುಮಾರ್ ಒಬ್ಬರು.
ತಂದೆ ತಾಯಿ ಕೂಲಿ ಕಾರ್ಮಿಕರಾದ ಕಾರಣ ಭರತ್‌ಗೆ ಆರ್ಥಿಕ ಸಂಕಷ್ಟ ಇತ್ತು. ಪಾಲಕರಿಗೆ ಮಗನ ಕನಸಿನ ಅರಿವಿದ್ದರೂ ಅದಕ್ಕೆ ಪೂರಕ ವಾತಾವರಣ ಕಲ್ಪಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು. ಹೀಗಿದ್ದರೂ ಈಜು ಪಟುವಾಗುವ ಕನಸನ್ನು ಬೆನ್ನಟ್ಟಿದ ಭರತ್ ಈಜು ಕಲಿತದ್ದು ವಿಶೇಷ. ಎಮ್ಮೆಯ ಬಾಲವನ್ನು ಬಲಗೈಯಲ್ಲಿ ಹಿಡಿದು ಈಜಿನ ಅಭ್ಯಾಸ ಮಾಡಿದರು. 2004ರಲ್ಲಿ ದೆಹಲಿಯ ಜವಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಈಜು ಸೇರಿದಂತೆ ಇತರ ಕ್ರೀಡೆಯನ್ನು ಅಭ್ಯಾಸ ಮಾಡಿದರು. ಆದರೆ ವಯಸ್ಸಾದ ತಂದೆ ತಾಯಿ, ಜತೆಗೆ ಸರಕಾರದ ಸೌಲಭ್ಯದ ಅಲಭ್ಯತೆ ಇವರ ಕನಸನ್ನು ಸ್ವಲ್ಪ ಮಟ್ಟಿಗೆ ಅಡ್ಡಿಪಡಿಸಿತ್ತು. ಕಾರು ತೊಳೆಯುವ, ಸಣ್ಣ ಪುಟ್ಟ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಭರತ್, ಬಳಿಕ ಪ್ಯಾರಾ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ ಪದಕಕ್ಕೆ ಕೊರಳೊಡ್ಡಿದರು. 2010ರಲ್ಲಿ 40 ದೇಶೀಯ ಮತ್ತು 2 ಅಂತಾಷ್ಟ್ರೀಯ ಪದೆಸಸ್ತಿ ಪಡೆದರು.
Related Articles
Advertisement
-ರಾಧಿಕಾ, ಕುಂದಾಪುರ