Advertisement
ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ರಿಬ್ಬನ್ ಬಿಡಿಸಿ ಶಾಖೆಗೆ ಚಾಲನೆ ನೀಡಿದರು. ಬಿಲ್ಲವರ ಅಸೋಸಿಯೇಶನ್ ಚಿಂಚಾÌಡ್ ಇದರ ಅಧ್ಯಕ್ಷ ಎಸ್. ಟಿ. ಸಾಲ್ಯಾನ್ ಮತ್ತು ಬಂಟರ ಸಂಘ ಚಿಂಚಾÌಡ್ ಇದರ ಅಧ್ಯಕ್ಷ ಮಹೇಶ್ ಹೆಗ್ಡೆ ಕಟ್ಟಿಂಗೇರಿ ದೀಪ ಪ್ರಜ್ವಲಿಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಬ್ಯಾಂಕಿನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್ ಎಟಿಎಂ ಸೇವೆ ಯನ್ನೂ, ಬ್ಯಾಂಕಿನ ನಿರ್ದೇಶಕ ಚಂದ್ರಶೇಖರ ಎಸ್. ಪೂಜಾರಿ ಸೇಫ್ ಲಾಕರ್ ಸೇವೆಗಳಿಗೆ ಹಾಗೂ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್. ಮೂಲ್ಕಿ ಬ್ಯಾಂಕಿನ ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆ ನೀಡಿ ಶುಭ ಹಾರೈಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಂಗಳೂರು ತಾ.ಪ ಉಪ ಕಾರ್ಯಾಧ್ಯಕ್ಷೆ ಪೂರ್ಣಿಮಾ ಗಣೇಶ್ ಪೂಜಾರಿ ಮಾತನಾಡಿ, ಮನುಕುಲದ ಮುನ್ನಡೆಗೆ ಹಿರಿಯರ ಆಶೀರ್ವಾದ ಬೇಕೇ ಬೇಕು. ಜಯ ಸುವರ್ಣ ಅವರಂತಹ ಮಾರ್ಗ ದರ್ಶನ, ಅನುಗ್ರಹದಿಂದ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸಮಗ್ರ ಬಿಲ್ಲವ ಸಮಾಜಕ್ಕೆ ಜಯ ಸುವರ್ಣರು ಕುಲ ಶಕ್ತಿಯಿದ್ದಂತೆ. ಕಾರಣ ಅವರ ಕೊಡುಗೆ ಮಹತ್ವವಾದದ್ದು. ಅವರಂತಹ ಶಕ್ತಿ ದೇವರು ಎಲ್ಲಾ ಸಮಾಜಕ್ಕೂ ಪ್ರಾಪ್ತಿಯಾಗಬೇಕು. ದೇಶ ವಿದೇಶಗಳಲ್ಲಿರುವ ನಮ್ಮವರು ಈ ಬ್ಯಾಂಕಿನೊಂದಿಗೆ ವ್ಯವಹರಿಸಿ ಆ ಮೂಲಕ ಬ್ಯಾಂಕ್ ಮಿಲಿಯನ್ ಡಾಲರ್ ಕ್ಷೇತ್ರದಲ್ಲಿ ವ್ಯವಹಾರಿಸುವಂತಾಗಬೇಕು. ಹಿರಿ ಯರ ಆಶೀರ್ವಾದ ಭಾರತ್ ಬ್ಯಾಂಕ್ 3000 ಕ್ಕೂ ಮಿಕ್ಕಿದ ಶಾಖೆ ಗಳನ್ನು ತೆರೆಯುವಂತಾಗಲಿ ಎಂದು ಹಾರೈಸಿದರು. ಶಿವಸೇನಾ ಪಕ್ಷದ ನೇತಾರ ಸಂಜಯ್ ಸಾಳ್ವಿ, ಸ್ಥಾನೀಯ ಸಮಾಜ ಸೇವಕರುಗಳಾದ ನ್ಯಾಯವಾದಿ ಅಪ್ಪು ಮೂಲ್ಯ, ರವೀಂದ್ರ ಪೂಜಾರಿ, ಕಿರಣ್ ಸುವರ್ಣ, ನಾಗಯ್ಯ ವಿ. ಪೂಜಾರಿ, ಅಶೋಕ್ ಶೆಟ್ಟಿ, ಸತೀಶ್ ರಾಜು ಸಾಲ್ಯಾನ್, ಅಯ್ಯಪ್ಪ ಸೇವಾ ಸಮಿತಿಯ ಕಾರ್ಯದರ್ಶಿ ಗಣೇಶ್ ಅಂಚನ್, ಜಗನ್ನಾಥ ಎಂ. ಅಮೀನ್ ಕೊಂಡೆವೂರು, ಉದ್ಯಮಿಗಳಾದ ಇಂದು ರಾವ್ ಮೋಹಿತ್, ನೀತ್‌ರಾಜ್ ಬಾಯ್, ಶೇಖರ್ ಚಿತ್ರಾಪುರ, ನಿಯಾಜ್ ಅಹ್ಮದ್ ಸಿದ್ಧಿಕಿ, ಪಂಕಜ್ ನಿಖಾಮ್, ರವಿ ಕೋಟ್ಯಾನ್, ಭಾರತ್ ಬ್ಯಾಂಕಿನ ನಿರ್ದೇಶಕರಾದ ನ್ಯಾಯವಾದಿ ಎಸ್. ಬಿ. ಅಮೀನ್, ರೋಹಿತ್ ಎಂ. ಸುವರ್ಣ, ಗಂಗಾಧರ್ ಜೆ. ಪೂಜಾರಿ, ಮಾಜಿ ನಿರ್ದೇಶಕ ಎನ್. ಎಂ. ಸನೀಲ್, ಧಣRವಾಡಿ ಶಾಖೆಯ ರವೀಂದ್ರ ಕೆ. ಕೋಟ್ಯಾನ್, ಶಿವಾಜಿ ನಗರ ಶಾಖೆಯ ಪ್ರಬಂಧಕ ಸುಧೀರ್ ಎಸ್. ಪೂಜಾರಿ ಸೇರಿದಂತೆ ಬ್ಯಾಂಕಿನ ಅನೇಕ ಷೇರುದಾರರು, ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು ಶಾಖೆಯ ಸರ್ವೋನ್ನತಿಗೆ ಹಾರೈಸಿದರು.
Related Articles
Advertisement
ಸಹಕಾರಿ ವಲಯದಲ್ಲಿ ಸರ್ವೋನ್ನತ ಸ್ಥಾನವನ್ನು ಅಲಂಕರಿ ಸುತ್ತಿರುವ ಭಾರತ್ ಬ್ಯಾಂಕ್ ಇನ್ನಷ್ಟು ಶಾಖೆ ಗಳೊಂದಿಗೆ ವಿರಾಜ ಮಾನವಾಗಲಿ. ಇಲ್ಲಿನ ಮೊದಲ ಶಾಖೆಯೂ ಉತ್ತಮ ವಾಗಿತ್ತು. ಈ ಶಾಖೆ ಯು ವಾಸ್ತುಯುತವಾಗಿ ಇನ್ನಷ್ಟು ಯಶ ಕಾಣಲಿ. ಮಹೇಶ್ ಹೆಗ್ಡೆ ಕಟ್ಟಿಂಗೇರಿ,ಅಧ್ಯಕ್ಷರು , ಪಿಂಪ್ರಿ-ಚಿಂಚಾÌಡ್ ಬಂಟ್ಸ್ ಸಂಘ ನಾನು ಕಳೆದ 37 ವರ್ಷಗಳಿಂದ ಈ ಬ್ಯಾಂಕ್‌ನೊಂದಿಗೆ ವ್ಯವ ಹರಿಸುತ್ತಿದ್ದೇನೆ. ಶಾಖೆಯ ಮೊದಲ ದಿನದಿಂದ ವ್ಯವಹಾರಿಸಿ ಮನ ಮತ್ತು ಹಣ ಸಮೃದ್ಧಿ ಪಡೆದ ಗ್ರಾಹಕನಾಗಿದ್ದೇನೆ. ಬ್ಯಾಂಕಿನ ಸಿಬಂದಿ ಗಳ ಸಹಕಾರ ಮನೋಭಾವ ಇತರರಿಗೆ ಮಾದರಿಯಾಗಿದೆ
ಇಂದು ರಾವ್ ಮೋಹಿತೆ ,
ಸ್ಥಳೀಯ ಉದ್ಯಮಿ ಗಿಡವಾಗಿದ್ದ ಭಾರತ್ ಬ್ಯಾಂಕ್ ಸದ್ಯ ಮರವಾಗಿ ಬೆಳೆದಿದೆ. ಗ್ರಾಹಕರಿಗೆ ಫಲದಾಯಕ ಆರ್ಥಿಕ ಸೇವೆ ಯ ನೆರಳನ್ನು ನೀಡಿದ ಕೀರ್ತಿ ಈ ಬ್ಯಾಂಕ್‌ಗೆ ಇದೆ. ಭಾರತ್ ಬ್ಯಾಂಕ್ ದೇಶವ್ಯಾಪಿಯಾಗಿ ಶಾಖೆಗಳನ್ನು ತೆರೆದು ಪ್ರತಿಷ್ಠಿತ ಬ್ಯಾಂಕ್ ಆಗಿ ಕಂಗೊಳಿಸಲಿ
ಸಂಜಯ್,ಶಿವಸೇನಾ ನೇತಾರ ವರ್ಲ್ಡ್ ಬ್ಯಾಂಕ್ ಸದಸ್ಯತ್ವ ಪಡೆಯುವ ಅರ್ಹತೆ ಈ ಬ್ಯಾಂಕ್‌ಗಿದೆ. ಆ ಕನಸು ಶೀಘ್ರದಲ್ಲೇ ನೆರ ವೇರಲಿ. ಸ್ಥಳಾಂತರಿತ ಶಾಖೆಯು ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿಯ ಪಥದತ್ತ ಸಾಗಲಿ
ನ್ಯಾಯವಾದಿ ಅಪ್ಪು ಮೂಲ್ಯ ,
ಸ್ಥಳೀಯ ಸಮಾಜ ಸೇವಕರು ಚಿತ್ರ- ವರದಿ : ರೋನ್ಸ್ ಬಂಟ್ವಾಳ್