Advertisement

ಹಿರಿಯೂರಲ್ಲಿ ಬಂದ್‌ಗಿಲ್ಲ ಸ್ಪಂದನೆ

01:40 PM Sep 28, 2021 | Team Udayavani |

ಹಿರಿಯೂರು: ಕೇಂದ್ರ ಸರ್ಕಾರದ ಬೆಲೆಏರಿಕೆ ಹಾಗೂ ರೈತ ವಿರೋ ಧಿ ಕಾಯ್ದೆಗಳವಿರುದ್ಧ ವಿವಿಧ ಸಂಘಟನೆಗಳುಸೋಮವಾರ ಕರೆ ನೀಡಿದ್ದ ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ಕಳೆದರೆಡು ವರ್ಷದಿಂದಕೊರೊನಾದಿಂದ ವ್ಯಾಪಾರ-ವಹಿವಾಟುಬಂದ್‌ ಆಗಿ ನಷ್ಟ ಅನುಭವಿಸಿದ್ದ ವ್ಯಾಪಾರಸ್ಥರು ಬಂದ್‌ಗೆ ಮಹತ್ವ ನೀಡದೆತಮ್ಮ ಅಂಗಡಿ ಮುಂಗಟ್ಟಗಳನ್ನು ತೆರೆದುವ್ಯಾಪಾರ ನಡೆಸಿದರು. ವಾಹನಗಳ ಸಂಚಾರ ಎಂದಿನಂತಿತ್ತು. ಹೋಟೆಲ್‌,ಬ್ಯಾಂಕ್‌, ಶಾಲಾ-ಕಾಲೇಜುಗಳು,ಕಚೇರಿಗಳು ತೆರೆದಿದ್ದವು.

ರೈತಸಂಘಟನೆಗಳು, ಕಾಂಗ್ರೆಸ್‌ ಪಕ್ಷದವರು,ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರುಗಾಂಧಿ ವೃತ್ತ ಹಾಗೂ ಡಾ| ರಾಜ್‌ಕುಮಾರ್‌ ವೃತ್ತದಲ್ಲಿ ಪ್ರತಿಭಟನೆನಡೆಸಿದರು. ನಂತರ ತಾಲೂಕುಕಚೇರಿಗೆ ತೆರಳಿ ತಹಶೀಲ್ದಾರ್‌ಗೆ ಮನವಿಸಲ್ಲಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷಕೆ.ಟಿ. ತಿಪ್ಪೇಸ್ವಾಮಿ, ಜಿಲ್ಲಾ ರೈತ ಸಂಘದಮುಖಂಡ ಕೆ.ಸಿ. ಹೊರಕೇರಪ್ಪ,ಕಾರ್ಮಿಕ ಮುಖಂಡ ಎಸ್‌.ಸಿ.ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಮೇಶ್‌ ಖಾದಿ, ಎಸ್‌ಸಿ ಘಟಕದಅಧ್ಯಕ್ಷ ಜಿ.ಎಲ್‌. ಮೂರ್ತಿ, ರೈತಮುಖಂಡರಾದ ಸಿದ್ದರಾಮಣ್ಣ, ಸಂಸದ ಜೀವೇಶ್‌. ಶಿವಣ್ಣ,ಮಂಜುನಾಥ್‌ ಮೊದಲಾದವರುಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next