ಹುಮನಾಬಾದ: ಭಾರತ ಬಂದ್ ಬೆಂಬಲಿಸಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 65 ತಡೆದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಸಂಯುಕ್ತ ಪ್ರಗತಿಪರ ಸಂಘಟನೆಗಳ ಹೋರಾಟ ಸಮನ್ವಯ ಸಮಿತಿ, ಭೀಮ ಆರ್ಮಿ, ಸಿಐಟಿಯು ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳು ಜಾರಿಮಾಡದಂತೆ ಒತ್ತಾಯಿಸಿದ್ದು, ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರಗಳು ನೀತಿಗಳು ರಚಿಸಬೇಕು. ಮೊದಲು ದೇಶದಲ್ಲಿ ಹೆಚ್ಚಿದ ಬೆಲೆ ಏರಿಕೆ ಕಡಿಮೆ ಮಾಡುವ ಕೆಲಸ ಸರ್ಕಾರ ಮಾಡಲಿ ಎಂದು ಒತ್ತಾಯಿಸಿದರು.
ರೈತ ಮುಖಂಡ ಖಾಸಿಂ ಅಲಿ ಮಾತನಾಡಿ, ಸಂಸದರೊಬ್ಬರು ರೈತರ ಹೋರಾಟದ ಕುರಿತು ಮಾತನಾಡಿ ನಮ್ಮ ಹೋರಾಟಕ್ಕೆ ಕಾಂಗ್ರೇಸ್ ಬೆಂಬಲ ನೀಡಿದೆ ಎಂದು ಆರೋಪಿಸುತ್ತಿದ್ದಾರೆ. ಅಂತಹ ನಾಲಾಯಕ ಸಂಸದನಿಗೆ ಸಮಯಕ್ಕೆ ಉತ್ತರ ನೀಡುತ್ತೇವೆ. ರೈತರ ಬೇಡಿಕೆಗಳು ಈಡೇರಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ದಾಂಡೇಲಿಯಲ್ಲಿ ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನೆ
ಈ ಸಂದರ್ಭದಲ್ಲಿ ರೇಷ್ಮಾ ಹಂಸರಾಜ, ಇಸಾಬೇಗಂ, ಸರಸ್ವತಿ ಬನ್ನೆ, ಅಂಬುಬಾಯಿ ಮಾಳೆ, ಅನಿಲ ದೊಡ್ಡಿ, ಎಮ್.ಡಿ. ಬಾಬಾ ಪಾಟೇಲ, ಉಷಾ ಗುತ್ತೆದಾ ವಿಜಯಲಕ್ಷ್ಮಿ ಕಲ್ಲೂರ, ಸುನಿತಾ ಭೋಲಾ, ರೇಖಾ ಹಮಿಲಮುರಕರ, ಬಸವರಾಜ ಮಾಳೆ ಮುಂತಾದವರು ಉಪಸ್ಥಿತರಿದ್ದರು.