Advertisement
ಮುಷ್ಕರದ ದಿನ ರಾಜ್ಯದಲ್ಲಿ ತುರ್ತು ಸೇವೆಗಳಾದ ಆಸ್ಪತ್ರೆ, ಔಷಧ ಮಳಿಗೆ, ಆ್ಯಂಬುಲೆನ್ಸ್ ಸೇವೆ ಗಳನ್ನು ಹೊರತುಪಡಿಸಿ ಉತ್ಪಾ ದನ ವಿಭಾಗ, ಅಸಂಘಟಿತ ಕಾರ್ಮಿಕ ವಲಯಗಳ ಸೇವೆಗಳಲ್ಲಿ ವ್ಯತ್ಯಯ ವಾಗುವ ಸಾಧ್ಯತೆಯಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಐಟಿಯು ರಾಜ್ಯ ಮುಖ್ಯಸ್ಥೆ ವರಲಕ್ಷಿ$¾à, ನಾಲ್ಕು ತಿಂಗಳ ಹಿಂದೆಯೆ ಹೋರಾಟದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಗಮನಕ್ಕೆ ತರಲಾಗಿತ್ತು. ಆದರೆ ಈಗ ನಾನಾ ಮಾರ್ಗಗಳ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. ಈ ಮಧ್ಯೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಭಟನ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಿದ್ದಾರೆ. ಹೀಗಾಗಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾಮೂಹಿಕ ಮುಷ್ಕರ ನಡೆಸುತ್ತೇವೆ ಎಂದು ವರಲಕ್ಷ್ಮೀ ತಿಳಿಸಿದ್ದಾರೆ.
Related Articles
ಬೆಂಗಳೂರು ನಗರದಲ್ಲಿ ಭಾರೀ ಸಂಚಾರ ಸಮಸ್ಯೆ ಇರುವುದರಿಂದ ಜ.8ರಂದು ಕಾರ್ಮಿಕ ಸಂಘಟನೆ ಗಳು ಹಮ್ಮಿಕೊಂಡಿರುವ ಬಂದ್ ಹಿನ್ನೆಲೆ ಯಲ್ಲಿ ಮೆರವಣಿಗೆ ನಡೆ ಸಲು ಅವಕಾಶ ನೀಡಿಲ್ಲ. ಒಂದು ವೇಳೆ ಮೆರವಣಿಗೆ ನಡೆದರೆ ಆಯೋಜಕರ ಮೇಲೆ ಸಿಆರ್‌ಪಿಸಿ 107 ಅಡಿ ಪ್ರಕರಣ ದಾಖಲಿಸ ಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
Advertisement
ಬ್ಯಾಂಕಿಂಗ್ ಸೇವೆಗೆ ಅಡ್ಡಿಮುಷ್ಕರಕ್ಕೆ ಬ್ಯಾಂಕಿಂಗ್ ವಲಯದ ಹಲವಾರು ಕಾರ್ಮಿಕ ಸಂಘ ಟನೆಗಳು ಬೆಂಬಲ ನೀಡಿದ್ದು, ಬುಧವಾರ ಸೇವೆಯಲ್ಲಿ ಅಡಚಣೆ ಯಾಗುವ ಸಂಭವವಿದೆ. ಆದರೆ ಆನ್‌ಲೈನ್ ಬ್ಯಾಂಕಿಂಗ್ ಇರಲಿದೆ. ಬಂದ್‌ಗೆ ಕರೆ ನೀಡಿದ್ದು ಯಾರು?
ಸಿಐಟಿಯು, ಎಐಯುಟಿಸಿ, ಹಿಂದೂ ಮಜ್ದೂರ್ ಸಭಾ, ಸೆಲ್ಫ್ ಎಂಪ್ಲಾಯ್ಡ ವುಮೆನ್ಸ್ ಅಸೋಸಿ ಯೇಶನ್, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ , ಇಂಡಿಯನ್ ನ್ಯಾಶನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್, ಬ್ಯಾಂಕ್ ನೌಕರರ ಸಂಘ ಸೇರಿ ರಾಜ್ಯ ಮತ್ತು ಕೇಂದ್ರದ ಸುಮಾರು 40ಕ್ಕೂ ಅಧಿಕ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಸಹಿತ 60ಕ್ಕೂ ಹೆಚ್ಚು ವಿದ್ಯಾರ್ಥಿ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಗ್ರಾಮೀಣ ಭಾರತ ಬಂದ್
ದೇಶದಲ್ಲಿನ ಸುಮಾರು 175 ರೈತ ಮತ್ತು ಕೃಷಿ ಸಂಬಂಧಿತ ಕಾರ್ಮಿಕ ಸಂಘಟನೆಗಳು ಬುಧವಾರವೇ ಗ್ರಾಮೀಣ ಭಾರತ ಬಂದ್‌ಗೆ ಕರೆ ನೀಡಿವೆ. ಇದಕ್ಕೂ ನಮ್ಮ ಬೆಂಬಲವಿದೆ ಎಂದು ಮುಷ್ಕರ ನಡೆಸುತ್ತಿರುವ ಕಾರ್ಮಿಕ ಸಂಘಟನೆ ಗಳು ಹೇಳಿವೆ. ಪ್ರಮುಖವಾಗಿ ಅಖೀಲ ಭಾರತ ಕಿಸಾನ್ ಸಂಘರ್ಷ ಸಹಕಾರ ಸಮಿತಿ ಈ ಬಂದ್‌ಗೆ ಕರೆ ನೀಡಿದೆ. ಏನೆಲ್ಲ ಇರುವುದಿಲ್ಲ?
ಬ್ಯಾಂಕ್, ಅಂಚೆ ಕಚೇರಿ, ಎಲ್‌ಐಸಿ, ಎಪಿಎಂಸಿ ಮಾರುಕಟ್ಟೆ, ಖಾಸಗಿ ಬಸ್‌ಗಳ ಸೇವೆ, ಕೇಂದ್ರ ಸರಕಾರಿ ಸ್ವಾಮ್ಯದ ಕಚೇರಿಗಳು ಹಾಗೂ ರಾಜ್ಯ ಮತ್ತು ಕೇಂದ್ರ ಸೇವೆಗಳು. ಏನೆಲ್ಲ ಇರುತ್ತವೆ?
ಆ್ಯಪ್ ಆಧಾರಿತ ಕ್ಯಾಬ್‌ಗಳು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಹಾಲು, ಪೇಪರ್, ಆಟೋ ಸೇವೆಗಳು ದೊರೆಯಲಿವೆ. ಸದ್ಯದ ಮಟ್ಟಿಗೆ ಶಾಲಾ ಕಾಲೇಜುಗಳು ಎಂದಿನಂತೆ ನಡೆಯಲಿವೆ.