Advertisement

ಉಡುಪಿ ಶ್ರೀಕೃಷ್ಣ ಸನ್ನಿಧಾನ; ಗಮನಸೆಳೆದ ಸಂಕೀರ್ಣ ದುಬೈಯ ಭರತನಾಟ್ಯ

03:45 PM Aug 02, 2018 | Sharanya Alva |

ಉಡುಪಿ: ಇತ್ತೀಚೆಗೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪಲಿಮಾರು ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದುಬೈಯ ಸಂಕೀರ್ಣ ಗ್ರೂಪ್ ಅವರಿಂದ ಭರತನಾಟ್ಯ ನಡೆಯಿತು.

Advertisement

ಉಡುಪಿ ಪರ್ಯಾಯ ಪೀಠದ ಪಲಿಮಾರುಶ್ರೀಗಳು ಹಾಗೂ ಪೇಜಾವರ ಮಠದ ಕಿರಿಯ ಸ್ವಾಮಿಗಳಾದ ಶ್ರೀವಿಶ್ವಪ್ರಸನ್ನ ಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ,ಪುಷ್ಪಾಂಜಲಿ, ಗಣಪತಿವಂದನೆ ಮೂಲಕ ಕಾರ್ಯಕ್ರಮ ನಡೆಯಿತು.

ಸಂಕೀರ್ಣದ ಪ್ರತಿಭಾನ್ವಿತ ಕಿರಿಯ ವಿದ್ಯಾರ್ಥಿನಿಯರು ವಿಷಮಕಾರಿ ಕಣ್ಣನ್ ಆಗಿ ಬಾಲಕೃಷ್ಣನ ಚೆಲ್ಲಾಟದ ಮೂಲಕ ಪ್ರೇಕ್ಷಕರಲ್ಲಿ ಮಂದಹಾಸ ಮೂಡಿಸಿದರು .

ನಂತರ ಸಂಕೀರ್ಣ ತಂಡದಿಂದ ಕಾಳಿಕೌಥುವಾ ,  ಅಯಗಿರಿ ನಂದಿನಿ ನಾಟ್ಯದಿಂದ ಶಕ್ತಿಸ್ವರೂಪಿಣಿಗೆ ನೃತ್ಯ ಅರ್ಪಣೆ ನೀಡಿದರು . ಭೋ ಶಂಭೋ ,ಕೋಲಾಟ ಮುಂತಾದ ವೈವಿಧ್ಯಮಯ ನೃತ್ಯನೆರವೇರಿತು .

Advertisement

ಈ ಕಾರ್ಯಕ್ರಮದಲ್ಲಿ ಗುರು ಸಪ್ನಾ ಕಿರಣ್ ಜೊತೆಗೆ  ನೃತ್ಯ ಸಂಕೀರ್ಣದ ಕಲಾವಿದರಾದ ಅದಿತಿಕಿರಣ್,  ಆಜ್ನ್ಯಾಆದೇಶ್ , ಅಹಂತಿ ಸಂಕಮೇಶ್ವರನ್, ಅವನಿ ಶ್ರೀನಿವಾಸಮೂರ್ತಿರಾವ್, ಯಶ್ವಿಪಾಠಕ್, ತೇಜಸ್ವಿನಿ ಭಟ್, ಶರಣ್ಯ ಭಟ್, ನಿರ್ವಿಶೆಟ್ಟಿ, ಗ್ರೇಸ್ಸ್ಟೀಪನ್ರೋಡ್ರಿಗಸ್, ತನ್ವಿಪ್ರಸನ್ನ, ಹಂಸಿನಿ ಪ್ರಸನ್ನ,  ಪ್ರಜ್ಞಾ ಅನಂತ್, ದೀಕ್ಷಾರಾಜ್, ಅಧಿತ್ರಿ ಸಂಕಮೇಶ್ವರನ್,  ದಿವ್ಯ ನರಸಿಂಹನ್, ಯಾಶ್ನ ಶೆಟ್ಟಿ,  ಪ್ರಾಪ್ತಿಪಾಠಕ್, ಮತ್ತು ಪ್ರಿಯವಿಜಯ ಕುಮಾರ್ ಪಾಲ್ಗೊಂಡಿದ್ದರು.

ಅನಂತ್ ರಘುನಾಥ್ ದುಬೈಯ ಶಾಸ್ತ್ರೀಯ ನೃತ್ಯ ಶಾಲೆ “ಸಂಕೀರ್ಣ”ದ ಪರಿಚಯ ನೀಡಿದರು, ಅನಿಲ್ ರಾವ್, ಶ್ರೀಮತಿ ಚಂದ್ರ ಕಲಾರಾವ್, ಜಯರಾಮ್ ಅವರು ಪೇಜಾವರ ಕಿರಿಯ ಸ್ವಾಮೀಜಿಗೆ ಫಲಕಾಣಿಕೆ ನೀಡಿ ಗೌರವಾರ್ಪಣೆ ಸಲ್ಲಿಸಿದರು .

ಶ್ರೀಮತಿ ಶ್ರೀಲೇಖಾಅನಂತ್ ,ಅನಂತ್ ರಘುನಾಥ್ ಮತ್ತು ವೇದವ್ಯಾಸ್ ಪುರಾಣಿಕ್ ಅವರು ಪರ್ಯಾಯ ಪೀಠದ ಪಲಿಮಾರುಶ್ರೀಗೆ ಗೌರವಾರ್ಪಣೆ ಸಲ್ಲಿಸಿದರು .ನರಸಿಂಹನ್ ಕಾರ್ಯಕ್ರಮ ನಿರೂಪಿಸಿದರು .ಶ್ರೀಲೇಖಾಅನಂತ್ ವಂದಿಸಿದರು .

2 ಗಂಟೆಗಳ ಕಾಲ ಪ್ರದರ್ಶನಗೊಂಡ ನೃತ್ಯಾರ್ಪಣೆ ಕಾರ್ಯಕ್ರಮದ ನೇತೃತ್ವ ಅನಂತ್ ರಘುನಾಥ್ ಹಾಗೂ ಶ್ರೀಲೇಖಾಅನಂತ್ ವಹಿಸಿದ್ದರು. ಇವರಿಗೆ ವಿಜಯಲಕ್ಷ್ಮಿ ,ಶ್ರೀನಿವಾಸ್ ಮೂರ್ತಿ ,  ಕಮಲಾಆಚಾರ್ ,ಪ್ರಸನ್ನಆಚಾರ್  ಹಾಗೂ ಪ್ರಿಯಾ ವಿಜಯ್ ಕುಮಾರ್ ಸಹಕರಿಸಿದ್ದರು.

ವರದಿ: ಆರತಿ ಅಡಿಗ , ದುಬೈ

Advertisement

Udayavani is now on Telegram. Click here to join our channel and stay updated with the latest news.

Next