ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರ ಚಾರ್ತುಮಾಸ ವ್ರತಾಚರಣೆಯ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ನೃತ್ಯ ವಿದುಷಿಯರಾದ ಅರ್ಥಾ ಪೆರ್ಲ ಹಾಗೂ ಆಯನಾ ಪೆರ್ಲ ಇವರಿಂದ ಭರತನಾಟ್ಯ ಪ್ರದರ್ಶಿಸಲ್ಪಟ್ಟಿತು. ಮೊದಲಿಗೆ “ಅಲರಿಪು’ ಭರತನಾಟ್ಯ ಮೊದಲ ನೃತ್ತಬಂಧ ಇಲ್ಲಿ ಪ್ರಸ್ತುತ ಪಡಿಸಿದುದು ಪಂಚಭೂತ ಅಲರಿಪು ಇದರಲ್ಲಿ ಪಂಚಭೂತ ಶಿವನನ್ನು ವರ್ಣಿಸಲಾಗಿದೆ. ಎಡನೆಯದಾಗಿ ಜತಿಸ್ವರ, ವಿವಿಧ ಸ್ವರಗಳ ಜೋಡಣೆ ಇರುವ ಸಂಗೀತದ ಜತಿಸ್ವರವನ್ನೇ ಇಲ್ಲಿ ಅಳವಡಿಸಲಾಗಿದೆ. ಇದನ್ನು ಪೆರ್ಲ ಸಹೋದರಿಯರು ಬಹಳ ಮಾರ್ಮಿಕವಾಗಿ ಸಾದರಪಡಿಸಿದರು. ನಂತರ ಶಿವಪಂಚಾಕ್ಷರಿ ನೃತ್ಯ, ಮುಂದೆ ಪದವರ್ಣ ಇದರಲ್ಲಿ ನಂದಗೋಪಾಲನನ್ನು ಹೊಗಳುವ ಸಾಧ್ಯತೆ ಹೊಂದಿದೆ. ನೃತ್ತ ಹಾಗೂ ಸಾಹಿತ್ಯ ಎರಡಕ್ಕೂ ಸಮಾನ ಪ್ರಧಾನ್ಯವನ್ನು ಇಲ್ಲಿ ಕಾಣಬಹುದಾಗಿತ್ತು. ಮುಂದೆ ಮೊಮುಚುಪುರಾ ಎಂಬ ತೆಲುಗು ದೇವರ ನಾಮವನ್ನು ಪ್ರಸ್ತುತಪಡಿಸಿದರು. ಮುದ್ದು ಕೃಷ್ಣನ ತುಂಟಾಟದ ಚಿತ್ರಣ ಸೊಗಸಾಗಿ ಮೂಡಿಬಂತು. ಕೊನೆಯ ಪ್ರಸ್ತುತಿ ದಿಕ್ಕು ತೆರಿಯಾದ ಕಾಟಿಲ್ ನಾಟ್ಯಾಭಿನಯ ಆಮೋಘವಾಗಿತ್ತು.
ಪ್ರಸಾದ್ ಮೈರ್ಕಳ