Advertisement

ಐಶಾನಿ ಶೆಟ್ಟಿಯ ಭರತನಾಟ್ಯ ಅಭ್ಯಾಸ

12:21 PM Apr 17, 2020 | Suhan S |

ಕೋವಿಡ್ 19 ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಟ, ನಟಿಯರೂ ಒಂದಲ್ಲೊಂದು ಚಟುವಟಿಕೆಯಲ್ಲಿ ತೊಡಗಿದ್ದಾರೆ. ಆ ನಿಟ್ಟಿನಲ್ಲೀಗ ನಟಿ ಐಶಾನಿ ಶೆಟ್ಟಿ ಕೂಡ ಹೊರತಲ್ಲ. ಅವರು ಕೂಡ ಮನೆಯಲ್ಲೇ ಇದ್ದು, ಒಂದಷ್ಟು ಕೆಲಸಗಳಲ್ಲಿ ತೊಡಗಿದ್ದಾರೆ. ಅವರು ಸದ್ಯಕ್ಕೆ ಮನೆಗೆಲಸದ ನಡುವೆ ಭರತನಾಟ್ಯಂ ಅಭ್ಯಾಸ ಮಾಡುತ್ತಿದ್ದಾರೆ. ಈಕುರಿತು ಹೇಳುವ ಅವರು, “ನಾನು ಒಂದುವರೆ ವರ್ಷದಿಂದಲೂ ಭರತನಾಟ್ಯಂ ಕ್ಲಾಸ್‌ಗೆ ಹೋಗುತ್ತಿದ್ದೇನೆ.ಆದರೆ,ಈಗ ಕೋವಿಡ್ 19  ಎಫೆಕ್ಟ್  ನಿಂದಾಗಿ ಮನೆಯಲ್ಲಿರುವಂತಾಗಿದೆ.

Advertisement

ಹೀಗಾಗಿ ನಾನು ಈಸಮಯದಲ್ಲಿ ಭರತನಾಟ್ಯಂ ಅಭ್ಯಾಸ ಮಾಡುತ್ತಿದ್ದೇನೆ. ಇದಷ್ಟೇ ಅಲ್ಲ, ಅಮ್ಮನ ಜೊತೆ ಮನೆಕೆಲಸ ನೋಡಿಕೊಂಡು ಅಡುಗೆ ಮಾಡ್ತಾ ಇದ್ದೇನೆ. ಉಳಿದಂತೆ ಅಮೆಜಾನ್‌, ನೆಟ್‌ಫ್ಲೆಕ್ಸ್‌ನಲ್ಲಿ ಸಿನಿಮಾಗಳು, ಕಾಮಿಡಿ ಶೋಗಳು ನೋಡಿಕೊಂಡು ಸಮಯ ಕಳೆಯುತ್ತಿದ್ದೇನೆ ‘ ಎಂದು ವಿವರಿಸುತ್ತಾರೆ ಐಶಾನಿ ಶೆಟ್ಟಿ. ಐಶಾನಿ ಶೆಟ್ಟಿ, ನಟನೆ ಜೊತೆ ನಿರ್ದೇಶನದ ಮೇಲೂ ಆಸಕ್ತಿ ಇಟ್ಟುಕೊಂಡವರು. ಈಗಾಗಲೇ ಅವರು ಕಿರುಚಿತ್ರ ನಿರ್ದೇಶಿ ಸುವ ಮೂಲಕ ನಿರ್ದೇಶಕಿ ಯಾಗಿಯೂ ಗುರುತಿಸಿಕೊಂಡಿದ್ದಾರೆ. ಸಿನಿಮಾ ನಿರ್ದೇಶನದ ಮೇಲೂ ಆಸಕ್ತಿ ಇಟ್ಟುಕೊಂಡಿರುವ ಐಶಾನಿ, ಮುಂದಿನ ದಿನಗಳಲ್ಲಿ ಸಿನಿಮಾ ನಿರ್ದೇಶಿಸುವ ಆಶಯ ವ್ಯಕ್ತಪಡಿಸುತ್ತಾರೆ.

ಆ ಬಗ್ಗೆ ಹೇಳುವ ಅವರು, “ಹೊಸದಾಗಿ ನಾನು ಕಥೆ ಬರೆದಿಲ್ಲ. ಆದರೆ, ಹಿಂದೆ ಬರೆದಿಟ್ಟು ಕೊಂಡ ಕಥೆಗಳನ್ನೇ ಪುನಃ ಓದುತ್ತಿದ್ದೇನೆ. ಮುಂದೆ ಸಿನಿಮಾ ಮಾಡುವ ಆಸೆ ಇದೆ. ಹಾಗಾಗಿ, ಒಂದೆರೆಡು ವಿಷಯಗಳಿವೆ. ಅದನ್ನಿಟ್ಟು ಕೊಂಡು ಸಿನಿಮಾ ಮಾಡಬೇಕು. ಎರಡ್ಮೂರು ವರ್ಷಗಳ ಹಿಂದೆ ನಾನು ಬರೆದ ಕಥೆಗಳು ಈಗಿನ ಟ್ರೆಂಡ್‌ಗೆ ಸರಿಹೊದಲ್ಲ. ಹಾಗಾಗಿ ಹೊಸದಾಗಿ ಏನಾದರೂ ಬರೆದು,ಸಿನಿಮಾ ಮಾಡುವ ಬಯಕೆ ಇದೆ’ ಎನ್ನುತ್ತಾರೆ ಐಶಾನಿ ಶೆಟ್ಟಿ.

ಸದ್ಯಕ್ಕೆ ಐಶಾನಿ ಅಭಿನಯದ “ಧರಣಿ ಮಂಡಲ ‘ ಹಾಗು “ಹೊಂದಿಸಿ ಬರೆಯಿರಿ’ ಸಿನಿಮಾಗಳಿವೆ. ಚಿತ್ರೀಕರಣ ನಡೆಯುವ ಸಂದರ್ಭದಲ್ಲೇ ಕೋವಿಡ್ 19  ಬಂದಿದ್ದರಿಂದಶೂಟಿಂಗ್‌ ಸ್ಥಗಿತಗೊಳಿಸಲಾಗಿದೆ. ಕೋವಿಡ್ 19 ಸಮಸ್ಯೆ ಮುಗಿದ ಬಳಿಕ ಚಿತ್ರೀಕರಣಶುರುವಾಗಲಿದೆ ಎಂಬುದು ಅವರ ಮಾತು. ­

Advertisement

Udayavani is now on Telegram. Click here to join our channel and stay updated with the latest news.

Next