Advertisement
ಅಂದಹಾಗೆ, ಮಂಜು ಮಾಂಡವ್ಯ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. “ಮಾಸ್ಟರ್ ಪೀಸ್’ ಚಿತ್ರದ ನಂತರ ಅನೇಕ ನಿರ್ಮಾಪಕರು ಬಂದರೂ, ಯಾರೊಬ್ಬರಲ್ಲೂ ನಿಜವಾದ ಸಿನಿಮಾ ಪ್ರೀತಿ ಕಾಣದ ಕಾರಣ, ಸಿನಿಮಾದಿಂದ ದೂರ ಉಳಿದಿದ್ದ ಮಂಜು, ಆ ಗ್ಯಾಪ್‌ನಲ್ಲಿ ಈ ಕಥೆ ಮಾಡಿಕೊಂಡರಂತೆ. ಕಥೆಗೆ ತಾನೇ ಹೀರೋ ಆಗಲು ನಿರ್ಧರಿಸಿ, ಅದಕ್ಕೆ ಬೇಕಾದ ತಯಾರಿ ಕೂಡಾ ಮಾಡಿಕೊಂಡರಂತೆ. ಚಿತ್ರದಲ್ಲಿ ಚಿಕ್ಕಣ್ಣ ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ. ಮಂಜು ಭರತನಾದರೆ, ಚಿಕ್ಕಣ್ಣ ಬಾಹುಬಲಿ! ಈ ಚಿತ್ರವನ್ನು ಐಶ್ವರ್ಯಾ ಫಿಲಂಸ್ ಬ್ಯಾನರ್‌ನಡಿ ಶಿವಪ್ರಕಾಶ್ ನಿರ್ಮಿಸಿದ್ದಾರೆ. ಆರು ಕೋಟಿ ರೂಪಾಯಿ ಖರ್ಚು ಮಾಡಿ ಈ ಸಿನಿಮಾ ನಿರ್ಮಿಸಿರುವ ಅವರು, ಈ ಸಿನಿಮಾ ಪ್ರಚಾರಕ್ಕಾಗಿ ಒಂದು ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಅಂದಹಾಗೆ, “ಶ್ರೀ ಭರತ ಬಾಹುಬಲಿ’ ಚಿತ್ರ ಔಟ್ ಅಂಡ್ ಔಟ್ ಕಮರ್ಷಿಯಲ್’ ಸಿನಿಮಾವಾಗಿದ್ದು, ಎಲ್ಲಾ ವರ್ಗದವರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು.
Advertisement
ಭರತ-ಬಾಹುಬಲಿ ವೈಭವ
10:21 AM Jan 11, 2020 | mahesh |