Advertisement

ಭಾರತ ಸೇವಾದಳ ಕಾರ್ಯ ಶ್ಲಾಘನೀಯ: ನಾಗೂರ

05:25 PM Jul 24, 2022 | Shwetha M |

ಸಿಂದಗಿ: ದೇಶಾಭಿಮಾನ ಶಿಸ್ತು ಸೇವಾ ಮನೋಭಾವನೆ ಹಾಗೂ ರಾಷ್ಟ್ರ ಧ್ವಜ ರಾಷ್ಟ್ರಗೀತೆ ಕುರಿತಾದ ತರಬೇತಿ ನೀಡುತ್ತಿರುವ ಭಾರತ ಸೇವಾದಳ ಕಾರ್ಯ ಶ್ಲಾಘನೀಯ ಎಂದು ಭಾರತ ಸೇವಾದಳದ ತಾಲೂಕಾಧ್ಯಕ್ಷ ಚಂದ್ರಶೇಖರ ನಾಗೂರ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಭಾರತ ಸೇವಾದಳ ಶಿಕ್ಷಕ ಮಿಲಾಪ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದ ಸೇವೆಗಾಗಿ ಹುಟ್ಟಿಕೊಂಡಿರುವ ಸೇವಾದಳ ಶಿಸ್ತು, ತಾಳ್ಮೆ, ಸೇವಾ ಮನೋಭಾವದಿಂದ ಬಲಿಷ್ಠ ಸಂಸ್ಥೆಯಾಗಿ ಬೆಳೆದಿದೆ. ಇಂದಿನ ಮಕ್ಕಳು ಅತ್ಯುತ್ತಮ ಕಲಿಕೆ ಮೂಲಕ ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದಾರೆ. ಕೆಲವು ದುಶ್ಚಟಗಳ ಮೂಲಕ ಭವಿಷ್ಯಕ್ಕೆ ಸಂಚಕಾರ ತರಿಸಿಕೊಳ್ಳುತ್ತಿದ್ದಾರೆ. ಸೇವಾದಳದ ಮೂಲಕ ದೇಶಪ್ರೇಮ, ಭಕ್ತಿ ಸೇವೆ ಮನೋಭಾವ ಮೂಡಿಸಿದರೆ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದರು.

ರಾಷ್ಟ್ರದ ಗರಿಮೆಗೆ ಗರಿ ಮೂಡಿಸಿದ್ದು ಸೇವಾದಳ. ಪ್ರತಿಯೊಬ್ಬರಿಗೂ ಆತ್ಮಸ್ಥೈರ್ಯ ಬೆಳೆಸಿಕೊಳ್ಳಲು ಯೋಗ ಶಿಕ್ಷಣದ ಅಗತ್ಯವಿದೆ. ಸೇವಾದಳದ ಉತ್ತಮ ಚಟುವಟಿಕೆಗಳ ಮೂಲಕ ಜಿಲ್ಲೆ ರಾಜ್ಯದಲ್ಲಿ ಉತ್ತಮ ಸ್ಥಾನದಲ್ಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಶಿಬಿರ ಉದ್ಘಾಟಿಸಿದ ಕ್ಷೇತ್ರ ಸಮನ್ವಯಾ ಧಿಕಾರಿ ಐ.ಎಸ್‌. ಟಕ್ಕೆ ಮಾತನಾಡಿ, ಸೇವಾದಳದ ಚಟುವಟಿಕೆಗಳಿಂದ ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಶಿಸ್ತು, ಸಂಯಮ, ದೇಶಭಕ್ತಿ ಬೆಳೆಸಿಕೊಳ್ಳಲು ಸಾಧ್ಯ. ಶಾಲಾ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯ ನಿಸ್ವಾರ್ಥ ಸೇವೆಯಂತಹ ಉದಾತ್ತ ಗುಣಗಳನ್ನು ಮೂಡಿಸುತ್ತಿರುವ ಭಾರತ ಸೇವಾದಳ ಕಾರ್ಯ ಶ್ಲಾಘನೀಯ ಎಂದರು. ತಾಲೂಕು ಕೋಶಾಧ್ಯಕ್ಷ ಎಸ್‌.ಎಸ್‌. ಪಾಟೀಲ ಮಾತನಾಡಿ, ಪ್ರತಿ ಶಾಲೆಗಳಲ್ಲಿ ಮಕ್ಕಳಿಗೆ ರಾಷ್ಟ್ರಗೀತೆ ನಾಡಗೀತೆ ಸುಶ್ರಾವ್ಯವಾಗಿ ಹಾಡುವುದನ್ನು ಎಲ್ಲ ಶಿಕ್ಷಕರು ಕಲಿಸಬೇಕಾಗಿದೆ ಎಂದರು.

Advertisement

ಬಸವದಳದ ಅಧ್ಯಕ್ಷ ಶಿವಾನಂದ ಕಲಬುರಗಿ, ಮುಖ್ಯಗುರು ಶರಣಬಸಪ್ಪ ಲಂಗೋಟಿ ಮಾತನಾಡಿದರು. ಭಾರತ ಸೇವಾದಳ ತಾಲೂಕು ಉಪಾಧ್ಯಕ್ಷ ಗುರಣ್ಣ ಬಸರಕೋಡ, ಸದಸ್ಯರುಗಳಾದ ಎಸ್‌ .ಬಿ. ಚಾಗಶೆಟ್ಟಿ, ಶ್ಯಾಮಲಾ ಮಂದೇವಾಲ, ಎಸ್‌.ಎಸ್‌. ಕುಂಬಾರ, ಡಿ.ಸಿ. ಜಾದವ, ಜಿಲ್ಲಾ ಸಮಿತಿ ಸದಸ್ಯ ಶ್ರೀಶಾಂತ ಕುಂಬಾರ, ಬಿಆರ್‌ಪಿ ಬಿರಾದಾರ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಶಿವಾನಂದ ಶಹಾಪುರ ವೇದಿಕೆಯಲ್ಲಿದ್ದರು. ವಲಯ ಸಂಘಟಕ ನಾಗೇಶ ಡೋಣೂರ ಪ್ರಾಸ್ತಾವಿಕ ಮಾತನಾಡಿದರು. ಎಸ್‌.ಡಿ. ಕುಂಬಾರ ಸ್ವಾಗತಿಸಿದರು. ಆರ್‌.ಆರ್‌. ನಿಂಬಾಳಕರ ನಿರೂಪಿಸಿದರು. ಡಿ.ಸಿ. ಜಾಧವ ವಂದಿಸಿದರು. ಎಂ.ಜಿ. ಸಿಂಗೆ ಗೌರವ ರಕ್ಷೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next