Advertisement

PB Acharya “ಭಾರತ ನನ್ನ ಮನೆ’, “ಎಸ್‌ಇಐಎಲ್‌’ ಯೋಜನೆಯ ರೂವಾರಿ ಪಿ.ಬಿ.ಆಚಾರ್ಯ

11:39 PM Nov 10, 2023 | Team Udayavani |

60-70ರ ದಶಕದಲ್ಲಿ ಮುಂಬ ಯಿಯ ಕೆಲವು ಕಾಲೇಜುಗಳಲ್ಲಿ ಎಬಿಪಿವಿ ಕಾರ್ಯ ನಡೆಸಲು ಅವಕಾಶ ನಿರಾಕರಿಸುತ್ತಿದ್ದಾಗ ಆ ಕಾಲೇಜಿನ ಕ್ಯಾಂಟೀನ್‌ ಗುತ್ತಿಗೆ ಪಡೆದು, ಆ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಸಂಘ ಟನೆಯ ಕಾರ್ಯ ವಿಸ್ತಾರ ಮಾಡಿದ ಉಡುಪಿ ಮೂಲದ ಪದ್ಮನಾಭ ಬಾಲಕೃಷ್ಣ ಅಚಾರ್ಯ(ಪಿ.ಬಿ. ಆಚಾರ್ಯ) ಅವರು ಮುಂದೆ ಮುಂಬಯಿ ವಿಶ್ವವಿದ್ಯಾ ನಿಲಯದ ಸಿಂಡಿಕೇಟ್‌ ಸದಸ್ಯರಾಗಿ, ವಿದ್ಯಾರ್ಥಿಗಳೊಂದಿಗೆ ಇನ್ನಷ್ಟು ನಿಕಟ ಬಾಂಧವ್ಯ/ಸಂಪರ್ಕ ಹೊಂದಿದರು ಮತ್ತು ಮಹಾರಾಷ್ಟ್ರದ ಎಬಿವಿಪಿ ಉಪಾ ಧ್ಯಕ್ಷರಾಗಿ, ರಾಷ್ಟ್ರೀಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

Advertisement

70ರ ದಶಕದಲ್ಲಿ ಕೇರಳದ ತಿರುವ ನಂತಪುರದಲ್ಲಿ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಸಿ ಎಬಿವಿಪಿ ಶಕ್ತಿ ಪ್ರದರ್ಶನ ಮಾಡಿದ್ದು ಮಾತ್ರವಲ್ಲದೇ ಎಸ್‌ಎಫ್ಐಗೆ ಸಡ್ಡು ಹೊಡೆದಿದ್ದರು. ಇದೇ ಸಮ್ಮೇಳನದಲ್ಲಿ ಭಾರತದ ಈಶಾನ್ಯ ರಾಜ್ಯಗಳಿಗೆ ಶಕ್ತಿ ತುಂಬುವ “ಮೈ ಹೋಮ್‌ ಇಸ್‌ ಇಂಡಿಯಾ'( ಭಾರತ ನನ್ನ ಮನೆ) ಯೋಜನೆ ಘೋಷಣೆ ಮಾಡಿದರು.

ಯೋಜನೆಯಂತೆ ಈಶಾನ್ಯ ರಾಜ್ಯಗಳ ಆರ್ಥಿಕ, ಸಾಮಾಜಿಕವಾಗಿ ಬಡತನ ಎದುರಿಸುತ್ತಿರುವ, ಸಾಮಾಜಿಕ ಸಂಘರ್ಷ, ದೌರ್ಜನ್ಯಕ್ಕೆ ಒಳಗಾಗಿರುವ ಕುಟುಂಬದ ಮಕ್ಕಳನ್ನು ಗುರುತಿಸಿ ಅವರಿಗೆ ಕರ್ನಾಟಕ, ಮಹಾರಾಷ್ಟ್ರ ಸಹಿತ ವಿವಿಧ ರಾಜ್ಯಗಳಲ್ಲಿ ಶಿಕ್ಷಣ ನೀಡಲು ಬೇಕಾದ ವ್ಯವಸ್ಥೆ ಮಾಡಿದರು. ಈಶಾನ್ಯ ರಾಜ್ಯಗಳಿಂದ ವಿದ್ಯಾಭಾಸಕ್ಕಾಗಿ ಕರೆದು ಕೊಂಡು ಬರುವ ಮಕ್ಕಳನ್ನು ಪರಿವಾರ ಸಂಘಟನೆಗಳ (ಮುಖ್ಯವಾಗಿ ಎಬಿವಿಪಿ) ಕಾರ್ಯಕರ್ತರ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಸುತ್ತಿದ್ದರು. ಆ ಮಕ್ಕಳು ಇಲ್ಲಿಯೇ ಪದವಿ, ಸ್ನಾತಕೋತ್ತರ ಪದವಿ ಪೂರೈಸಿ ಪುನಃ ತಮ್ಮ ರಾಜ್ಯಕ್ಕೆ ಹೋಗಿ ಉದ್ಯೋಗದ ಜತೆಗೆ ಸಂಘಟನೆ ಕಾರ್ಯ ದಲ್ಲೂ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತಿದ್ದರು. ಈ ರೀತಿ ಈಶಾನ್ಯ ಭಾಗ್ಯ ದಿಂದ ಭಾರತದ ದಕ್ಷಿಣದ ರಾಜ್ಯಗಳಿಗೆ ಆಗಮಿಸಿ ಶಿಕ್ಷಣ ಪೂರೈಸಿದವರಲ್ಲಿ ಈಶಾನ್ಯ ರಾಜ್ಯದ ಮುಖ್ಯಮಂತ್ರಿ, ಹೈಕೋರ್ಟ್‌ ನ್ಯಾಮೂರ್ತಿ, ಶಿಕ್ಷಣ ಇಲಾಖೆಯ ನಿರ್ದೇಶಕರು, ಒಲಿಂಪಿಕ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ರಾದವರೂ ಇದ್ದಾರೆ. ಈಶಾನ್ಯ ರಾಜ್ಯ ಮಾತ್ರವಲ್ಲ ಇಡೀ ಭಾರತ ನಮ್ಮ ಮನೆ ಎಂಬುದನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ಈ ಯೋಜನೆ ಮೂಲಕ ಪಿ.ಬಿ. ಆಚಾರ್ಯರು ಮನದಟ್ಟು ಮಾಡಿದ್ದರು. ಆಚಾರ್ಯರು ಹಾಕಿಕೊಟ್ಟ ಮಾರ್ಗದಲ್ಲೇ ಯೋಜನೆ ಇಂದಿಗೂ ಸಾಗುತ್ತಿದೆ.

ವಿದ್ಯಾರ್ಥಿಗಳ ಅಂತರ್‌ರಾಜ್‌ ಜೀವನಾನುಭವ(ಎಸ್‌ಇಐಎಲ್‌) ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳ ತಂಡವನ್ನು(ಕನಿಷ್ಠ 10, ಗರಿಷ್ಠ 100 ವಿದ್ಯಾರ್ಥಿಗಳು) ರಚಿಸಿ ಬೇರೆ ಬೇರೆ ರಾಜ್ಯಗಳಿಗೆ ಕರೆದುಕೊಂಡು ಹೋಗಿ ಅಲ್ಲಿ ತಮ್ಮ ಕಲೆ, ಸಂಸ್ಕೃತಿಯ ಅಭಿವ್ಯಕ್ತಿ ಜತೆಗೆ ಅಲ್ಲಿನ ಕಾರ್ಯಕರ್ತರೊಂದಿಗೆ ಬೆರೆಯುವಂತೆ ಮಾಡಿದ ಎಸ್‌ಇಐಎಲ್‌ (ಸೀಲ್‌) ಹುಟ್ಟುಹಾಕಿದ್ದು ಪಿ.ಬಿ. ಆಚಾರ್ಯರು. ಈಶಾನ್ಯ ರಾಜ್ಯಗಳಲ್ಲಿ ಸಂಘಟನೆಯ ಬುನಾದಿ ಭದ್ರಗೊಳಿಸಿದ್ದು ಮಾತ್ರವಲ್ಲದೆ ತಮ್ಮ ಸಂಪರ್ಕಕ್ಕೆ ಬಂದವ ರೊಂದಿಗೆ ನಿರಂತರ ಸಂಪರ್ಕದಲ್ಲಿರು ತ್ತಿದ್ದರು. ಎಸ್‌ಇಐಎಲ್‌ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಬಹಳ ದೊಡ್ಡ ಕ್ರಾಂತಿ ಮಾಡಿದ್ದಾರೆ. ಈ ಕಾರ್ಯಕ್ರಮ ದಡಿ ಎಲ್ಲ ಸಮುದಾಯದ ವಿದ್ಯಾರ್ಥಿ ಗಳನ್ನು ಒಗ್ಗೂಡಿಸುವ ಮೂಲಕ ರಾಷ್ಟ್ರೀಯ ಭಾವೈಕ್ಯ ಬೆಸೆದಿದ್ದಾರೆ.

ಈಶಾನ್ಯ ರಾಜ್ಯಗಳ ರಾಜ್ಯಪಾಲರಾದ ಅನಂ ತರವಂತೂ ಇವರು ರಾಜಭವನ ವನ್ನು ಜನ ಸಾಮಾನ್ಯರಿಗೆ ಮುಕ್ತವಾಗಿಸಿ ದ್ದರು. ಜನರು ಮತ್ತು ರಾಜ್ಯಪಾಲರ ನಡುವೆ ಇದ್ದ ಕಂದಕವನ್ನು ಮುಚ್ಚಿ ಯಾರು ಬೇಕಾದರೂ ರಾಜ್ಯಪಾಲರ ಮನೆಗೆ ಸುಲಭವಾಗಿ ಬರಬಹುದು ಅವರೊಂದಿಗೆ ಚರ್ಚಿಸಬಹುದು ಎಂಬು ದನ್ನು ತೋರಿಸಿಕೊಟ್ಟಿದ್ದರು. ಈಶಾನ್ಯ ರಾಜ್ಯಗಳ ಜನರ ಕಲ್ಯಾಣ ಕೇವಲ ಮಾತಿನಲ್ಲಿ ಇರಲಿಲ್ಲ. ಅಕ್ಷರಶಃ ತಮ್ಮ ಜೀವನದಲ್ಲಿ ಪಾಲಿಸಿದ್ದರು. ಈಶಾನ್ಯ ರಾಜ್ಯಗಳಲ್ಲಿ ಸಂಘಟನೆಯನ್ನು ಕಟ್ಟಲು ದೊಡ್ಡ ಶಕ್ತಿಯಾಗಿದ್ದರು. ಸ್ಥಳೀಯ ಭಾಷೆಯನ್ನು ಚೆನ್ನಾಗಿ ಅರಿತಿದ್ದರು ಮತ್ತು ಅಲ್ಲಿನ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚು ಶ್ರಮ ವಹಿಸಿದ್ದರು.

Advertisement

ರಾಜ್ಯಪಾಲರಾದ ಅನಂತರವೂ ಸಂಘಟನೆಯ ಜತೆಗಿನ ಅನುಬಂಧವನ್ನು ಕಡಿದುಕೊಂಡವರಲ್ಲ. ಕಾರ್ಯ ಕರ್ತ ರನ್ನು ತಮ್ಮ ಮನೆಗೆ ಕರೆಸಿ ಕಾರ್ಯ ವಿಸ್ತಾರದ ಬಗ್ಗೆ ಚರ್ಚೆ ಮಾಡುತ್ತಿದ್ದರು.

ಪಿ.ಬಿ. ಆಚಾರ್ಯರ ಇನ್ನೊಂದು ಮುಖ್ಯವಾದ ಕಾರ್ಯವೆಂದರೆ ಈಶಾನ್ಯ ರಾಜ್ಯಗಳ ಪ್ರಮುಖರನ್ನು, ಸಾಧಕರನ್ನು, ಸ್ವಾತಂತ್ರ್ಯ ಹೋರಾಟಗಾರರನ್ನು, ಬುಡ ಕಟ್ಟು ಸಮುದಾಯದ ಮುಖಂಡ ರನ್ನು ಆಗಿಂದಾಗ್ಗೆ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದರಲ್ಲದೆ, ಸಾಧಕರನ್ನು ಗುರು ತಿಸಿ, ಅವರಿಗೆ ಬೇರೆ ರಾಜ್ಯಗಳಲ್ಲಿ ಗೌರವ ಸಮ್ಮಾನ ಸಿಗುವಂತೆ ಮಾಡುತ್ತಿದ್ದರು.

-ಡಾ| ಚ.ನ. ಶಂಕರ್‌ ರಾವ್‌ ಮಂಗಳೂರು
(ಪಿ.ಬಿ. ಆಚಾರ್ಯರ ಒಡನಾಡಿ)
-ಮಹೇಶ್‌ ಭಾಗವತ್‌, ವಿದ್ಯಾಭಾರತಿ ಸಂಘಟನ ಕಾರ್ಯದರ್ಶಿ, ದಕ್ಷಿಣ ಅಸ್ಸಾಂ (ಉಡುಪಿ ಮೂಲದವರು ಮತ್ತು ಪಿ.ಬಿ. ಆಚಾರ್ಯ ಮಾರ್ಗದರ್ಶನದಲ್ಲಿ ಈಶಾನ್ಯ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವವರು.)

ಈಶಾನ್ಯ ರಾಜ್ಯಗಳಲ್ಲಿ
ಶಿಕ್ಷಣ ಸಂಸ್ಥೆ ತೆರೆಯಲು ಉತ್ಸುಕ
ಉಡುಪಿ: ಕರಾವಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದ ಪಿ.ಬಿ.ಆಚಾರ್ಯ ಅವರು ಈಶಾನ್ಯ ಭಾರತದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಮತ್ತು ಈಶಾನ್ಯ ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಮನವಿ ಮಾಡಿದ್ದರು. ಶ್ರೀ ಕೃಷ್ಣಮಠದ ಯತಿಗಳೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಅದಮಾರು ಶ್ರೀಗಳ ಪರ್ಯಾಯ ದರ್ಬಾರಿನಲ್ಲಿ ಆಚಾರ್ಯರಿಗೆ ಸಮ್ಮಾನಿಸಲಾಗಿತ್ತು. 1970ರ ದಶಕದಲ್ಲಿ ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ (ಇಸ್ಕಾನ್‌) ಸ್ಥಾಪಕ ಶ್ರೀಶೀಲ ಪ್ರಭುಪಾದರಿಗೆ ಮುಂಬಯಿಯ ಜುಹೂ ಪ್ರದೇಶದಲ್ಲಿದ್ದ ಮನೆಯಲ್ಲಿ ಸುಮಾರು 40 ದಿನಗಳ ಕಾಲ ಆತಿಥ್ಯ ನೀಡಿದ್ದರು.

ಸಂತಾಪ
ಪೇಜಾವರ, ಪುತ್ತಿಗೆ, ಕೃಷ್ಣಾಪುರ, ಅದಮಾರು, ಪಲಿಮಾರು ಮಠಾಧೀಶರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಅಸ್ಸಾಂ ರಾಜ್ಯಪಾಲ ಗುಲಾಬ್‌ ಚಂದ್‌ ಕಟಾರಿಯಾ, ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್‌, ಶಾಸಕರಾದ ಸುನಿಲ್‌ ಕುಮಾರ್‌, ಯಶಪಾಲ್‌ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಕಿರಣ್‌ ಕೊಡ್ಗಿ, ಗುರುರಾಜ್‌ ಗಂಟಿಹೊಳೆ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕರಾದ ಕೆ.ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಬಿಜೆಪಿ ನಾಯಕರಾದ ಕೆ.ಉದಯಕುಮಾರ ಶೆಟ್ಟಿ, ಮಟ್ಟಾರ್‌ ರತ್ನಾಕರ ಹೆಗ್ಡೆ ರಾಘವೇಂದ್ರ ಕಿಣಿ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next