ಉಡುಪಿ: ಆದಿ ಉಡುಪಿಯ ಪಂದು ಬೆಟ್ಟು ದುರ್ಗಾ ಕಾಂಪ್ಲೆಕ್ಸ್‌ನಲ್ಲಿ 12 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಭಾರತ್ ಮಾರ್ಕೆಟಿಂಗ್ ಸಂಸ್ಥೆಯ ಅತ್ಯಾಧುನಿಕ ವಿದ್ಯುತ್ ಜೋಡಣೆ ಸಾಮಗ್ರಿಗಳ ಹವಾನಿಯಂತ್ರಿತ ಜಿ.ಎಂ. ಬ್ರ್ಯಾಂಡ್ ಶೋರೂಂ ಬನ್ನಂಜೆ ನಾರಾಯಣಗುರು ಸಂಕೀರ್ಣದಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು.
ಜಿ.ಎಂ. ಮಾಡ್ಯುಲರ್‌ನ ಬ್ರ್ಯಾಂಡ್ ಅಂಬಾಸಿಡರ್, ನಟ ಸುನಿಲ್ ಶೆಟ್ಟಿ ಉದ್ಘಾಟಿಸಿ, ಜಿ.ಎಂ. ಬ್ರ್ಯಾಂಡ್ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ನೀಡಿ ಮಾರು
ಕಟ್ಟೆಯಲ್ಲಿ ತನ್ನದೇ ಆದ ಹೆಸರು ಗಳಿಸಿದೆ. ನಾನು ಇದರ ಬ್ರ್ಯಾಂಡ್ ಅಂಬಾಸಿಡರ್ ಎಂದುಕೊಳ್ಳದೆ ಜಿ.ಎಂ. ಪರಿವಾರದ ಓರ್ವ ಸದಸ್ಯನಾಗಿದ್ದೇನೆ ಎಂದರು.
ಗ್ರಾಹಕರಿಗೆ ಉತ್ಕೃಷ್ಟ ಗುಣಮಟ್ಟದ, ವಿದ್ಯುತ್ ಕ್ಷಮತೆಯ ಉಪಕರಣಗಳನ್ನು ಒದಗಿಸುವ ಮೂಲಕ “ಗ್ರಾಹಕರ ತೃಪ್ತಿಯೇ ನಮ್ಮ ಧ್ಯೇಯ’ ಎಂದು ಮಾಲಕ ಸುಬ್ರಹ್ಮಣ್ಯ ಹೆಗಡೆ ತಿಳಿಸಿದರು.
ಶ್ರೀಮಾತಾ ಸೌಹಾರ್ದ ಕೋ-ಆಪರೇಟಿವ್‌ನ ಜಿ.ಎನ್. ಹೆಗಡೆ ಹೀರೇಸರ, ಜಿ.ಎಂ. ಮೊಡ್ಯುಲರ್‌ನ ಬೆಂಗಳೂರು ಹೆಡ್ ಜಯಪ್ರಕಾಶ್, ಸತೀಶ್, ಗಣ್ಯರಾದ ಜೆರ್ರಿ ವಿನ್ಸೆಂಟ್ ಡಾಯಸ್, ಮನೋಹರ ಎಸ್. ಶೆಟ್ಟಿ, ಪುರುಷೋತ್ತಮ ಪಿ. ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ನಾಗರಾಜ ಬಲ್ಲಾಳ್, ನಾಗರಾಜ ಆರ್. ರಾವ್, ಗುರುಪ್ರಸಾದ್ ಭಟ್, ನರಸಿಂಹ ಸುವರ್ಣ, ಮಾಲಕರಾದ ನಯನಾ ಎಸ್. ಹೆಗಡೆ, ಚೇತನ್ ಹೆಗಡೆ, ಅಭಿನವ್ ಹೆಗಡೆ ಉಪಸ್ಥಿತರಿದ್ದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ನಿರೂಪಿಸಿ, ವಂದಿಸಿದರು.