ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಶತಮಾನೋತ್ಸವದ ಮಹತ್ವದ ಮೈಲುಗಲ್ಲಿನ ಅರ್ಥಪೂರ್ಣ ಆಚರಣೆಗಾಗಿ “ಭಾರತ್ ಕಾ ಕರ್ಣಾಟಕ ಬ್ಯಾಂಕ್’ ಅಭಿಯಾನ ಪ್ರಾರಂಭಿಸಿದೆ.
ಬ್ಯಾಂಕ್‌ನ 100 ವರ್ಷಗಳ ನಂಬಿಕೆ, ಶ್ರೇಷ್ಠತೆ, ಸ್ಥಿತಿಸ್ಥಾಪಕತ್ವ ಮತ್ತು ರಾಷ್ಟ್ರದ ಸೇವೆಗೆ ಬದ್ಧತೆಯನ್ನು ಇದು ಸೂಚಿಸುತ್ತದೆ. ಹವಾಸ್ ಮೀಡಿಯಾ ಇಂಡಿಯಾ ಮತ್ತು ಹವಾಸ್ ವರ್ಲ್ಡ್ವೈಡ್ ಇಂಡಿಯಾ ಜಂಟಿಯಾಗಿ ಈ ಅಭಿಯಾನದಲ್ಲಿ ತೊಡಗಿಸಿಕೊಂಡಿದೆ. ಈ ಮೂಲಕ ಕರ್ಣಾಟಕ ಬ್ಯಾಂಕ್‌ನ ಬ್ರಾÂಂಡ್ ಬಗ್ಗೆ ಅರಿವನ್ನು ಬಲಪಡಿಸುವ ಗುರಿಯನ್ನು ಹೊಂದಲಾಗಿದೆ. ಇದು ಗ್ರಾಹಕರ ಜತೆಗಿನ ಸಂಪರ್ಕ ಮತ್ತು ಅವರನ್ನು ಬ್ಯಾಂಕಿನ ಭಾಗವಾಗಿ ಪರಿಗಣಿಸಲು ಸಹಕಾರಿಯಾಗಲಿದೆ.
ಈ ಬಗ್ಗೆ ಕರ್ಣಾಟಕ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್ ಎಚ್. ಮಾತನಾಡಿ, ಕರ್ಣಾಟಕ ಬ್ಯಾಂಕಿನ ಶತಮಾನೋತ್ಸವ ಕೇವಲ ಒಂದು ಶತಮಾನದ ಸಾಧನೆಗಳ ಸಂಭ್ರಮಕ್ಕಿಂತ ಹೆಚ್ಚಿನದು. ಇದು ಮುಂದಿನ 100 ವರ್ಷಗಳ ನಮ್ಮ ದೃಷ್ಟಿಯ ದಿಟ್ಟ ಪ್ರತಿಪಾದನೆಯಾಗಿದೆ. ಹವಾಸ್ ಇಂಡಿಯಾವನ್ನು ನಮ್ಮ ವಿಶ್ವಾಸಾರ್ಹ ಕಾರ್ಯತಂತ್ರದ ಪಾಲುದಾರರನ್ನಾಗಿ ಹೊಂದಲು ನಾವು ಸಂತೋಷಪಡುತ್ತೇವೆ ಎಂದಿದ್ದಾರೆ.
ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಮಾತನಾಡಿ, ಒಂದು ಶತಮಾನದಿಂದ ನಾವು ಕೇವಲ ಬ್ಯಾಂಕ್‌ಗಿಂತ ಹೆಚ್ಚಿನದಾಗಿ ಲಕ್ಷಾಂತರ ಜನರ ಪ್ರಯಾಣದಲ್ಲಿ ವಿಶ್ವಾಸಾರ್ಹ ಪಾಲುದಾರರಾಗಿದ್ದೇವೆ. ಬ್ಯಾಂಕ್‌ನ 100ನೇ ವರ್ಷವನ್ನು ಆಚರಿಸುವ ಮೂಲಕ ನಮ್ಮ ಹೊಸ ಬ್ರ್ಯಾಂಡ್ ಅಭಿಯಾನವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದೇವೆ ಎಂದಿದ್ದಾರೆ. ಹವಾಸ್ ಇಂಡಿಯಾ ಆಗ್ನೇಯ ಏಷ್ಯಾ ಮತ್ತು ಉತ್ತರ ಏಷ್ಯಾ (ಜಪಾನ್ ಮತ್ತು ದಕ್ಷಿಣ ಕೊರಿಯಾ) ಗ್ರೂಪ್ ಸಿಇಒ ರಾನಾ ಬರುವಾ, ಜಾಗತಿಕ ಹಣಕಾಸಿನ ಸವಾಲುಗಳ ನಡುವೆ ಭಾರತದಲ್ಲಿನ ಬ್ಯಾಂಕ್‌ಗಳು ಗಮನಾರ್ಹವಾದ ಸಾಧನೆ ಪ್ರದರ್ಶಿಸಿವೆ. ನಮ್ಮ ಮೇಲೆ ವಿಶ್ವಾಸವಿಟ್ಟಿದ್ದಕ್ಕಾಗಿ ಕರ್ಣಾಟಕ ಬ್ಯಾಂಕ್‌ಗೆ ನಾವು ಧನ್ಯವಾದ ಹೇಳುತ್ತೇವೆ ಎಂದರು.
ಹವಾಸ್ ಮೀಡಿಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಉದಯ್ ಮೋಹನ್, ಈ ಶತಮಾನೋತ್ಸವದ ಆಚರಣೆಯ ಭಾಗವಾಗಲು ನಾವು ಹೆಮ್ಮೆ ಪಡುತ್ತೇವೆ ಮತ್ತು ಸಂಸ್ಥೆಗೆ ನಿರಂತರ ಯಶಸ್ಸನ್ನು ಬಯಸುತ್ತೇವೆ ಎಂದರು.
ಹವಾಸ್ ವರ್ಲ್ಡ್ವೈಡ್ ಇಂಡಿಯಾದ ಮುಖ್ಯ ಸೃಜನಾತ್ಮಕ ಅಧಿಕಾರಿ ಅನುಪಮಾ ರಾಮಸ್ವಾಮಿ ಮಾತನಾಡಿ, ಬ್ಯಾಂಕಿನ ಗ್ರಾಹಕರ ತೃಪ್ತಿಗಾಗಿ ದೃಢವಾದ ಬದ್ಧತೆಯಿಂದ ನಡೆಸಲ್ಪಡುವ ಚಿಂತನೆ ಎಂದು ತಿಳಿಸಿದರು.