Advertisement

ಭಾರತ್ ಜೋಡೋ ಯಾತ್ರೆಗೆ ಪಿರಿಯಾಪಟ್ಟಣದಿಂದ 35 ಬಸ್ ಸೌಲಭ್ಯ:  ಮಾಜಿ ಶಾಸಕ ಕೆ.ವೆಂಕಟೇಶ್

05:21 PM Oct 01, 2022 | Team Udayavani |

ಪಿರಿಯಾಪಟ್ಟಣ: ದೇಶದ ಏಕತೆಗಾಗಿ ರಾಷ್ಟ್ರ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ ಭಾರತ್ ಜೋಡೋ ಯಾತ್ರೆ ವಿರೋಧ ಪಕ್ಷದ ನಾಯಕರಲ್ಲಿ ನಡುಕು ಉಂಟು ಮಾಡಿದೆ ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ತಿಳಿಸಿದರು.

Advertisement

ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಭಾರತ್ ಜೋಡೋ ಯಾತ್ರೆಯ ತಯಾರಿ ಹಾಗೂ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಭಾರತ್ ಜೋಡೋ ಯಾತ್ರೆ ತಮಿಳುನಾಡು ಮತ್ತು ಕೇರಳದಲ್ಲಿ ಯಶಸ್ವಿಗೊಂಡು ಚಾಮರಾಜನಗರ ಗಡಿ ಜಿಲ್ಲೆಯ ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸಿದ್ದು, ಶನಿವಾರ ಚಾಮರಾಜನಗರದ 4 ತಾಲ್ಲೂಕುಗಳಲ್ಲಿ ಯಾತ್ರೆ ಮುಗಿಸಿದ ನಂತರ ಅ.2 ರ ಗಾಂಧಿ ಜಯಂತಿಯ ಭಾನುವಾರದಂದು ಮೈಸೂರಿಗೆ ಆಗಮಿಸಿ ಕಾಡುಕೊಳದಿಂದ ಮೈಸೂರು ನಗರಕ್ಕೆ ಆಗಮಿಸಿ ಬೃಹತ್ ಮೆರವಣಿಗೆ ಜಾತಾ ಹಾಗೂ ವೇದಿಕೆ ಕಾರ್ಯಕ್ರಮ ಜರುಗಲಿದೆ. ಈ ಯಾತ್ರೆಗೆ ವ್ಯಕ್ತವಾಗುತ್ತಿರುವ ಜನಬೆಂಬಲದಿಂದ ವಿಚಲಿತರಾಗಿರುವ ಬಿಜೆಪಿ, ಜೆಡಿಎಸ್ ನಾಯಕರು, ಇಲ್ಲ-ಸಲ್ಲದ ಸುಳ್ಳು ಸುದ್ದಿ ಹರಡಿಸಲು ಯತ್ನಿಸಿ ವಿಫಲರಾಗುತ್ರಿದ್ದಾರೆ. ವರ್ಷಕ್ಕೆ ಎರಟು ಕೋಟಿ ಉದ್ಯೋಗ, ಪ್ರತಿ ವ್ಯಕ್ತಿ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ಹೀಗೆ ಹೀಗೆ ಸಾಲು ಸಾಲು ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಇದ್ದ ಕೆಲಸವನ್ನು ಕಿತ್ತುಕೊಳ್ಳುತ್ತಿದೆ. ಬೆಲೆ ಏರಿಕೆ ಮೂಲಕ ಜನರ ಹಣಕ್ಕೆ ಕನ್ನ ಹಾಕಿದೆ ಎಂದು ದೂರಿದರು.ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳದಿಂದ ಬಿಜೆಪಿ ಆಡಳಿತದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಅಂದು ಬ್ರಿಟೀಷರ ವಿರುದ್ಧ ಗಾಂಧೀಜಿ ಸೇರಿ ಅನೇಕ ಮಹನೀಯರು ದಂಡಿಯಾತ್ರೆ, ಉಪ್ಪಿನ ಸತ್ಯಾಗ್ರಹ ಹೀಗೆ ವಿವಿಧ ರೀತಿ ಹೋರಾಟ ನಡೆಸಿದ್ದರು. ಇಂದು ಬಿಜೆಪಿ ದುರಾಡಳಿತ, ಧರ್ಮ, ಜಾತಿಮಧ್ಯೆ ವಿಷ ಬೀಜ ಬಿತ್ತುವ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ಅತ್ಯಂತ ದೊಡ್ಡ ಚಳವಳಿ ಹಮ್ಮಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.

ಈ ಕಾರ್ಯಕ್ರಮಕ್ಕೆ ಪಿರಿಯಾಪಟ್ಟಣ ತಾಲ್ಲೂಕಿನಿಂದ 35 ಬಸ್ ವ್ಯವಸ್ಥೆ ಹಾಗೂ ಕಾರು, ಬೈಕ್ ಗಳು ಸೇರಿದಂತೆ 3 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಗೆ ತೆರಳಲಿದ್ದಾರೆ. ಪಾದಯಾತ್ರೆಗೆ ಬರುವ ಕಾರ್ಯಕರ್ತರಿಗೆ ಯಾವುದೇ ಸಮಸ್ಯೆಗಳು ಕಾಡದಂತೆ ಕಾಡುಕೊಳದಿಂದ ಮೈಸೂರು ತಲುಪುವ ವರೆಗೂ ರಸ್ತೆಯುದ್ದಕ್ಕೂ ಊಟ-ಉಪಹಾರದ ಸೇರಿದಂತೆ ಇನ್ನಿತರ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಸಿ.ಸ್ವಾಮಿ, ಎಸ್ಸಿ ಘಟಕದ ಅಧ್ಯಕ್ಷ ಪಿ.ಮಹದೇವ್, ನಗರ ಘಟಕದ ಅಧ್ಯಕ್ಷ ಎ.ಕೆ.ಗೌಡ, ಮುಖಂಡರಾದ ಜೆ.ಮೋಹನ್, ಮುರುಳೀಧರ್, ತೆಲುಗಿನಕುಪ್ಪೆ ನಾಗಣ್ಣ, ಚರಪುರ ಶ್ರೀನಿವಾಸ್, ಆರ್.ಡಿ.ಮಹದೇವ್, ಚಂದ್ರು, ವಾಜೀದ್ ಪಾಷ, ಹಬಟೂರು ರಘು, ಮಹೇಂದ್ರಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next