Advertisement

ನಾಸಿಕ ಲಸಿಕೆಗೆ 800 ರೂ. ನಿಗದಿ: ಜನವರಿ ಕೊನೆಯ ವಾರದಲ್ಲಿ ಇನ್‌ಕೊವ್ಯಾಕ್‌ ಲಭ್ಯ

10:16 AM Dec 28, 2022 | Team Udayavani |

ಹೊಸದಿಲ್ಲಿ: ಬೂಸ್ಟರ್‌ ಡೋಸ್‌ ಆಗಿ ಬಳಕೆಯಾಗಲಿರುವ ನಾಸಿಕ ಲಸಿಕೆ ಜನವರಿ ನಾಲ್ಕನೇ ವಾರದಲ್ಲಿ ಲಭ್ಯವಾಗಲಿದೆ.

Advertisement

ಪ್ರಸ್ತುತ ಕೋವಿನ್‌ ಪೋರ್ಟಲ್‌ನಲ್ಲಿ ಲಭ್ಯವಿರುವ ಈ ಇನ್‌ಕೊವ್ಯಾಕ್‌ ಲಸಿಕೆಗೆ ಖಾಸಗಿ ಮಾರುಕಟ್ಟೆಯಲ್ಲಿ 800 ರೂ. (ತೆರಿಗೆ ಹೊರತುಪಡಿಸಿ) ನಿಗದಿಪಡಿಸಿದೆ.

ಆರಂಭದಲ್ಲಿ ಈ ಲಸಿಕೆ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಸಿಗಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಬೃಹತ್‌ ಮಟ್ಟದಲ್ಲಿ ಖರೀದಿಸುವುದಿದ್ದರೆ ಡೋಸ್‌ಗೆ 325 ರೂ.ನಂತೆ ಲಸಿಕೆಯನ್ನು ನೀಡುವುದಾಗಿ ಭಾರತ್‌ ಬಯೋಟೆಕ್‌ನ ಕಾರ್ಯಕಾರಿ ಅಧ್ಯಕ್ಷ ಕೃಷ್ಣ ಎಲ್ಲಾ ತಿಳಿಸಿದ್ದಾರೆ.

ಇನ್‌ಕೊವ್ಯಾಕ್‌ ಎನ್ನುವುದು ಕೊರೊನಾ ಸೋಂಕಿನ ವಿರುದ್ಧ ಬಳಸ ಲಾಗುವ ಜಗತ್ತಿನ ಮೊದಲ ನಾಸಿಕ ಲಸಿಕೆ ಯಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next