Advertisement

ಭಾರತ್‌ ಬ್ಯಾಂಕ್‌  ವಸಾಯಿರೋಡ್‌  ಸ್ಥಳಾಂತರಿತ  ಶಾಖೆ ಉದ್ಘಾಟನೆ

02:04 AM Mar 01, 2019 | Team Udayavani |

ಮುಂಬಯಿ: ಭಾರತ್‌ ಬ್ಯಾಂಕಿನ ಹಣಕಾಸು ಸೇವೆ ವಸಾಯಿ ಪ್ರದೇಶದ ನಾಗರಿಕರಿಗೆ ಬಹಳಷ್ಟು ಪ್ರಯೋಜನವಾಗಿದೆ. ಇದರ ತ್ವರಿತ ಸೇವೆ ಶ್ಲಾಘನೀಯ. ಇದು ಬರೀ  ಬ್ಯಾಂಕ್‌ ಮಾತ್ರ ಅಲ್ಲ  ಮಧ್ಯಮ  ವರ್ಗದ ಜನತೆಯ ಜೀವನಕ್ಕೆ ಪ್ರೋತ್ಸಾಹ ನೀಡಿ ಬದುಕು ಬೆಳಗಿಸಿದ ವಿಶ್ವಾಸನೀಯ ಸಹಕಾರಿ ಸಂಸ್ಥೆಯಾಗಿದೆ. ಇಂತಹ ಬ್ಯಾಂಕಿನ ಶ್ರೇಯಸ್ಸು ಸಮಗ್ರ ಸಮಾಜದ ಶ್ರೇಯಸ್ಸಿಗೆ ಪೂರಕವಾಗಿದೆ ಎಂದು ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ಪಾಂಡು ಎಲ್‌. ಶೆಟ್ಟಿ ತಿಳಿಸಿದರು.

Advertisement

ಫೆ. 28ರಂದು ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ವಸಾಯಿ ಪಶ್ಚಿಮದ ಶಾಖೆಯನ್ನು ಸ್ಥಳಾಂತರಿತ ಸ್ಥಳಿಯ ಅಂಬಾಡಿ ದಿವಾನ್‌ಮನ್‌ ವಿಲೇಜ್‌ನ ವಸಾಯಿವನ್‌ ಕಟ್ಟಡದಲ್ಲಿ ಉದ್ಘಾಟಿಸಿ ಮಾತನಾಡಿ ಅವರು ಶುಭಹಾರೈಸಿದರು.

ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ  ಹಾಗೂ ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ರಿಬ್ಬನ್‌ ಬಿಡಿಸಿ ಶಾಖೆಯನ್ನು ಸೇವಾರ್ಪಣೆಗೊಳಿಸಿ ಶುಭಕೋರಿದರು. ಬ್ಯಾಂಕಿನ ಮಾತೃಸಂಸ್ಥೆ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ಅವರು ದೀಪ ಬೆಳಗಿಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಬ್ಯಾಂಕಿನ ನಿರ್ದೇಶಕಿ ಶಾರದಾ ಸೂರು ಕರ್ಕೆàರ ಭದ್ರತಾ ಖಜಾನೆಗೆ ಮತ್ತು ಬ್ಯಾಂಕಿನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ. ಆರ್‌. ಮೂಲ್ಕಿ ಕಂಪ್ಯೂಟರೀಕೃತ ಸೇವಗಳಿಗೆ ಚಾಲನೆ ನೀಡಿ ಶುಭ ಹಾರೈಸಿದರು.

ಸಹಕಾರಿ ಬ್ಯಾಂಕಿನಿಂದಲೇ ನಗರ ಹಾಗೂ ಗ್ರಾಮೀಣ  ಜನತೆ, ವ್ಯಾಪಾರಿಗಳು ಜೀವಂತವಾಗಿದ್ದಾರೆ. ನಮ್ಮಂತಹ ಗ್ರಾಹಕರಿಂದಲೇ ಸಹಕಾರಿ ಕ್ಷೇತ್ರ ಸಾಗುತ್ತಿದ್ದು, ಇನ್ನಷ್ಟು ಸಹಯೋಗ ಅತ್ಯವಶ್ಯವಾಗಿದೆ ಎಂದು ಸ್ಥಾನೀಯ ನಗರ ಸೇವಕ ಉಮಾಕಾಂತ್‌ ಪಾಟೀಲ್‌ ಆಶಯ ವ್ಯಕ್ತಪಡಿಸಿದರು.

ಶೀಘ್ರಗತಿಯ ಮತ್ತು ಸ್ನೇಹಮಯಿ ಸೇವೆಗಾಗಿಯೇ ಗ್ರಾಹಕರು ಭಾರತ್‌ ಬ್ಯಾಂಕನ್ನು ಆಯ್ಕೆ ಮಾಡುತ್ತಿದ್ದಾರೆ. ಜನಸಾಮಾನ್ಯರಲ್ಲೂ ಹಣಕಾಸು ಸುರಕ್ಷತೆಯ ಭರವಸೆ ಮೂಡಿಸಿದ ಈ ಬ್ಯಾಂಕ್‌ ಬಡ ಶ್ರೀಮಂತರ ಅಂತರ, ಭೇದಭಾವ ಕಾಣದೆ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಬಿಲ್ಲವ ಸಮುದಾಯದ ಧುರೀಣ ಬಿ. ಪಿ. ಪೂಜಾರಿ ಅಭಿಪ್ರಾಯಪಟ್ಟರು.

Advertisement

ಉದ್ಯಮಿ ಶಶಿಧರ್‌ ಕೆ. ಶೆಟ್ಟಿ  ಮಾತನಾಡಿ ಗ್ರಾಹಕರಿಗೆ ಒಳ್ಳೆಯ ಸೇವೆ ಒದಗಿಸುವ ಮೂಲಕ ಸ್ವಂತಿಕೆಯ ಪ್ರತಿಷ್ಠೆ ರೂಪಿಸಿಕೊಂಡಿದೆ. ಸಾವಿರಾರು ಮಂದಿಗೆ ವ್ಯವಹಾರ ಮಾಡಲು ಸಾಲ ನೀಡಿ ಸಹಕರಿಸುವುದರಿಂದ ಅನೇಕರ ಒಳಿತಿಗೆ ಈ ಬ್ಯಾಂಕ್‌ ವರದಾನವಾಗಿದೆ ಎಂದು ನುಡಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ವಸು ಸ್ಥಳಿಯ ಕಚೇರಿ ಕಾರ್ಯಧ್ಯಕ್ಷ ಕರುಣಾಕರ್‌ ಜಿ. ಅಮೀನ್‌, ಉದ್ಯಮಿ ಹಾಗೂ ಸಮಾಜ ಸೇವಕ ಸಾಯಿಪ್ರಸಾದ್‌ ಕುಲ್ಕರ್ಣಿ, ದೀಪಕ್‌ ವೊರಾ, ಮರಿಯನ್‌ ಡಿಕೋಸ್ಟಾ ಮಾತನಾಡಿ ಭಾರತ್‌ ಬ್ಯಾಂಕ್‌ನ ಸೇವಾ ವೈಖರಿಯನ್ನು  ಪ್ರಶಂಸಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ  ಬಿಲ್ಲವರ ಅಸೋಸಿ ಯೇಶನ್‌ನ ವಸಾಯಿ ಸ್ಥಳಿಯ ಕಚೇರಿ ಉಪಕಾರ್ಯಧ್ಯಕ್ಷ  ಕೆ. ಟಿ. ಬಂಗೇರ, ಗೌರವ ಕಾರ್ಯದರ್ಶಿ ರೋಹಿತಾಕ್ಷ ಎಸ್‌. ಅಂಚನ್‌, ಸಮಾಜ ಸೇವಕರಾದ ಜಯಂತ್‌ ಪಕ್ಕಳ, ರಮೇಶ್‌ ಶೆಟ್ಟಿ, ಕೋಡಿ ಗೋಪಾಲ್‌, ಸದಾಶಿವ ಎ. ಕರ್ಕೇರ, ಬ್ಯಾಂಕಿನ ನಿರ್ದೇಶಕರಾದ ಕೆ. ಬಿ. ಪೂಜಾರಿ, ಜ್ಯೋತಿ ಕೆ. ಸುವರ್ಣ, ಭಾಸ್ಕರ್‌ ಎಂ. ಸಾಲ್ಯಾನ್‌, ಪ್ರೇಮನಾಥ್‌ ಪಿ. ಕೋಟ್ಯಾನ್‌, ಎಂ. ಎನ್‌. ಕರ್ಕೇರ, ಮಾಜಿ ನಿರ್ದೇಶಕರಾದ ಎನ್‌. ಎಂ. ಸನಿಲ್‌, ಬ್ಯಾಂಕಿನ ಪ್ರಧಾನ ಪ್ರಬಂಧಕ ವಿದ್ಯಾನಂದ ಎಸ್‌. ಕರ್ಕೇರ, ಉಪ ಪ್ರಧಾನ ಪ್ರಬಂಧಕ ಜನಾರ್ದನ ಎಂ. ಪೂಜಾರಿ, ಸಾಂತಾಕ್ರೂಜ್‌ ಶಾಖೆಯ ಮುಖ್ಯಸ್ಥ ದಯಾನಂದ್‌ ಆರ್‌. ಅಮೀನ್‌, ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಸುನೀಲ್‌ ಎ. ಗುಜರನ್‌, ವಿಜಯ್‌ ಪಾಲನ್‌, ದೀಪಕ್‌ ಪ್ರಭು ಸೇರಿದಂತೆ ಬ್ಯಾಂಕಿನ ನೂರಾರು ಗ್ರಾಹಕರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಶ್ರೀ ಶೇಖರ ಶಾಂತಿ ಉಳ್ಳೂರು ತಮ್ಮ ಪೌರೋಹಿತ್ಯದಲ್ಲಿ ಗಣಹೋಮ, ಸತ್ಯನಾರಾಯಣ ಮಹಾಪೂಜೆ, ವಾಸ್ತು ಹವನ, ವಾಸ್ತುಪೂಜೆ, ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಗಂಗಾಧರ್‌ ಕಲ್ಲಾಡಿ, ಗೋಪಿನಾಥ್‌ ಜಿ. ಅಮೀನ್‌ ಪೂಜಾದಿಗಳಿಗೆ ಸಹಕರಿಸಿದರು.  ದûಾ ವಿಶಾಲ್‌ ಗಡಗಡ ಮತ್ತು  ಕವಿತಾ ಲೋಹಿತಾಕ್ಷ ಅಂಚನ್‌ ದಂಪತಿಗಳು ಪೂಜೆಯ ಯಜಮಾನತ್ವ ವಹಿಸಿದ್ದರು. ಬ್ಯಾಂಕಿನ ಪ್ರಧಾನ ಪ್ರಬಂಧಕ, ಅಭಿವೃದ್ಧಿ ಇಲಾಖಾ ಮುಖ್ಯಸ್ಥ ದಿನೇಶ್‌ ಬಿ. ಸಾಲ್ಯಾನ್‌ ಸ್ವಾಗತಿಸಿ ಪ್ರಸ್ತಾವನೆಗೈದರು. ಕು| ದೀಪಾಲಿ ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿದರು. ಶ್ರುತಿ ಅಂಕಿತ್‌ ಅಂಚನ್‌ ಮತ್ತು ದೀಪಾಲಿ ಅನಿಶ್‌ ಕುಂದರ್‌ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಮುಖ್ಯಸ್ಥೆ ಪ್ರಭಾವತಿ ಜೆ. ಕೋಟ್ಯಾನ್‌ ವಂದಿಸಿದರು. 

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next