Advertisement
ನ. 23ರಂದು ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ಸಂಚಾಲಿತ ಭಾರತ್ ಕೋ-ಆಪರೇಟಿವ್ ಬ್ಯಾಂಕ್‌ನ ಪುಣೆಯ ಸ್ಥಳಾಂತರಿತ ಶಿವಾಜಿ ನಗರದ ಶಾಖೆಯನ್ನು ಡಿಗೋಲ್ಡ್ ಹೌಸ್, ಯುನಿಟ್ ನಂ. 1ಎ, 1ಬಿ ಹಾಗೂ 1ಸಿ, ಅಪ್ಪರ್ ಗ್ರೌಂಡ್ ಫ್ಲೋರ್, ಫೈನಲ್ ಪ್ಲಾಟ್ ನಂ. 558, ಜ್ಞಾನೇಶ್ವರ್ ಪಾದುಕಾ ಚೌಕ್ ಹತ್ತಿರ ಭಾರತ್ ಪೆಟ್ರೋಲ್ ಪಂಪ್ ಹಿಂಬದಿಯ ನೂತನ ಕಟ್ಟಡದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಗ್ರಾಹಕರ ಪ್ರೀತಿ, ವಿಶ್ವಾಸ, ಗೌರವ ಇದೇ ರೀತಿಯಲ್ಲಿ ಬ್ಯಾಂಕ್‌ನ ಮೇಲಿರಲಿ. ಗ್ರಾಹಕರ ಸಂತೃಪ್ತಿಯೇ ಬ್ಯಾಂಕ್‌ನ ಧ್ಯೇಯವಾಗಿದೆ ಎಂದರು.
Related Articles
Advertisement
ನೂತನ ಶಾಖೆಯ ಕಟ್ಟಡದ ಮಾಲಕ ವಿನೋದ್ ಶಾØ ಮಾತನಾಡಿ, ಭಾರತ್ ಬ್ಯಾಂಕ್‌ನಲ್ಲಿ ಕೆಳಹಂತದ ಸಿಬಂದಿಯಿಂದ ಉನ್ನತ ಹಂತದ ಅಧಿಕಾರಿಗಳವರೆಗೆ ಎಲ್ಲರೂ ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆಯನ್ನು ಒದಗಿಸುತ್ತಿದ್ದಾರೆ. ಬ್ಯಾಂಕ್ ಇನ್ನಷ್ಟು ಅಭಿವೃದ್ಧಿಯನ್ನು ಹೊಂದಲಿ ಎಂದು ಹಾರೈಸಿದರು.
ಹೊಟೇಲ್ ಉದ್ಯಮಿ ರೌನಕ್ ಶೆಟ್ಟಿ ಮಾತನಾಡಿ, ಭಾರತ್ ಬ್ಯಾಂಕ್‌ನಲ್ಲಿ ಸಿಬಂದಿಯಿಂದ ಗ್ರಾಹಕ ಸ್ನೇಹಿಯಾಗಿ ಉತ್ತಮ ಗುಣಮಟ್ಟದ ಸೇವೆಯು ಲಭಿಸುವುದರಿಂದ ನಾನು ಮತ್ತು ನನ್ನ ತಂದೆಯವರು ಭಾರತ್ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡಲು ಇಷ್ಟಪಟ್ಟಿದ್ದೇವೆ ಎಂದರು.
ಉದ್ಯಮಿ ಧನಂಜಯ್ ಭಾರ್ಗ್ ಮಾತನಾಡಿ, ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿರುವ ಬ್ಯಾಂಕ್ ಎಂದರೆ ಅದು ಭಾರತ್ ಬ್ಯಾಂಕ್ ಎಂದರು.
ಸ್ಥಳಾಂತರಿತ ನೂತನ ಶಾಖೆಯ ಉದ್ಘಾಟನ ಸಮಾರಂಭದಲ್ಲಿ ನಿರ್ದೇಶಕ ರಾದ ಸೂರ್ಯಕಾಂತ್ ಜೆ. ಸುವರ್ಣ, ಬಿಲ್ಲವ ಸಮಾಜ ಸೇವಾ ಸಂಘದ ಪುಣೆ ಇದರ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ, ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ, ಸಮಾಜ ಸೇವಕಿ ನೂತನ್ ಸುವರ್ಣ, ಪುಣೆಯ ಹೊಟೇಲ್ ಉದ್ಯಮಿಗಳಾದ ಪಾಂಡುರಂಗ ಪೂಜಾರಿ, ಸದಾಶಿವ ಸಾಲ್ಯಾನ್, ಭಾರತ್ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಆಡಳಿತ ನಿರ್ದೇಶಕ ವಿದ್ಯಾನಂದ ಎಸ್. ಕರ್ಕೇರ, ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ. ಸಾಲ್ಯಾನ್, ಡಿಜಿಎಂ ಪ್ರಭಾಕರ ಜಿ. ಪೂಜಾರಿ, ಘನ್ಸೋಲಿ ಶಾಖೆಯ ಮುಖ್ಯ ಪ್ರಬಂಧಕ ಸಂತೋಷ್ ಬಿ. ಕೋಟ್ಯಾನ್, ಪುಣೆ ಧನ್ಕವಾಡಿ ಶಾಖೆಯ ಮುಖ್ಯ ಪ್ರಬಂಧಕ ಪ್ರತಾಪ್ ಕರ್ಕೇರ, ಪುಣೆ ಚಿಂಚ್ವಾಡ್ ಶಾಖೆಯ ಮುಖ್ಯ ಪ್ರಬಂಧಕ ಮಹೇಂದ್ರನಾಥ ಸುವರ್ಣ, ಧನ್ಕವಾಡಿ ಶಾಖೆಯ ಉಪಪ್ರಬಂಧಕ ತಾರಾನಾಥ ಅಮೀನ್, ಶಿವಾಜಿನಗರ ಶಾಖೆಯ ಸಿಬಂದಿ ಆನಂದ ಎಂ. ಪೂಜಾರಿ, ರಕ್ಷಿತ್ ಡಿ. ಸನಿಲ್, ನವೀನ್ ಕೆ. ಪೂಜಾರಿ, ಸಂಕೇತ್ ಪೂಜಾರಿ, ಮಹೇಶ್ ಎಚ್. ನಲವಡೆ ಮೊದಲಾದವರು ಉಪಸ್ಥಿತರಿದ್ದರು.
ಶಿವಾಜಿ ನಗರ ಶಾಖೆಯ ಮುಖ್ಯ ಪ್ರಬಂಧಕ ಸುಧೀರ್ ಎಸ್. ಪೂಜಾರಿ ಸ್ವಾಗತಿಸಿದರು. ಉಪ ಪ್ರಬಂಧಕ ಶಶಿ ಎನ್. ಬಂಗೇರ ವಂದಿಸಿದರು.
ನೂತನ ಶಾಖೆಯಲ್ಲಿ ಉಳ್ಳೂರು ಶೇಖರ್ ಶಾಂತಿಯವರ ಪೌರೋಹಿತ್ಯದಲ್ಲಿ ವಾಸ್ತುಪೂಜೆ, ಶ್ರೀ ಸತ್ಯನಾರಾಯಣ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಸಿಬಂದಿ ಸಂಕೇತ್ ಪೂಜಾರಿ, ಲಿಖೀತಾ ಗುಜರ್, ಅದಿತ್ಯಾ ಗುಜರ್ ಅವರು ನೇತೃತ್ವ ವಹಿಸಿದ್ದರು. ಅಪಾರ ಸಂಖ್ಯೆಯಲ್ಲಿ ಗ್ರಾಹಕರು, ಶೇರುದಾರರು, ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.