Advertisement

ಭಾರತ್‌ ಬ್ಯಾಂಕ್‌: ಬಿಲ್‌ ಪೇಮೆಂಟ್‌ ಎಕ್ರಾಸ್‌ ಕೌಂಟರ್‌ ಸೇವೆ

12:00 PM Sep 28, 2017 | |

ಮುಂಬಯಿ: ಭಾರತ್‌ ಬ್ಯಾಂಕ್‌ ಕೋ ಆಪರೇಟಿವ್‌ ಲಿಮಿಟೆಡ್‌  ಸಂಸ್ಥೆಯು ತನ್ನ ಗ್ರಾಹಕರ ಹೆಚ್ಚುವರಿ ಸೌಕರ್ಯಕ್ಕಾಗಿ “ಬಿಲ್‌ ಪೇಮೆಂಟ್‌ ಎಕ್ರಾಸ್‌ ಕೌಂಟರ್‌’ (ಬಿಬಿಪಿಎಸ್‌) ಸೇವೆಯನ್ನು ಆರಂಭಿಸಿದೆ.

Advertisement

ಇತ್ತೀಚೆಗೆ ಗೋರೆಗಾಂ ಪೂರ್ವದ ಮಾರುತಿಗಿರಿ ಸ್ವಕಟ್ಟಡದಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದ ಬ್ಯಾಂಕಿನ ಮಂಡಳಿಯ ಸಭೆಯಲ್ಲಿ ಭಾರತ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಈ ಸೇವೆಗೆ ಚಾಲನೆ ನೀಡಿದರು.  ಬ್ಯಾಂಕಿನ ಗ್ರಾಹಕರು ಸೇರಿದಂತೆ ರಾಷ್ಟ್ರದ ಯಾವುದೇ ವ್ಯಕ್ತಿಗಳು ತಮ್ಮ ವಿದ್ಯುತ್‌  ಬಿಲ್‌, ದೂರವಾಣಿ, ಗ್ಯಾಸ್‌, ಡಿಟಿಎಚ್‌ ಬಿಲ್‌ಗ‌ಳ ಹಣ ಸಂದಾಯವನ್ನು ಭಾರತ್‌ ಬ್ಯಾಂಕ್‌ನ ಯಾವುದೇ ಶಾಖೆಗಳಿಂದ ಉಚಿತ ಸೇವೆಯಾಗಿಸಿ “ಬಿಲ್‌ ಪೇಮೆಂಟ್‌ ಎಕ್ರಾಸ್‌ ಕೌಂಟರ್‌’ (ಬಿಬಿಪಿಎಸ್‌) ಉಪಯೋಸಿ ಆಯಾ ಸಂಸ್ಥೆಗಳಿಗೆ ನಗದು ಅಥವಾ ಚೆಕ್‌ ಮೂಲಕವೂ ನೇರವಾಗಿ ಕಳುಹಿಸಬಹುದು.

ಈ ಸಂದರ್ಭ ಬ್ಯಾಂಕ್‌ನ ನಿರ್ದೇಶಕರಾದ ಪುಷ್ಪಲತಾ ಎನ್‌. ಸಾಲ್ಯಾನ್‌, ಕೆ. ಎನ್‌. ಸುವರ್ಣ, ಜೆ. ಎ. ಕೋಟ್ಯಾನ್‌, ಯು. ಎಸ್‌. ಪೂಜಾರಿ, ಭಾಸ್ಕರ್‌ ಎಂ. ಸಾಲ್ಯಾನ್‌, ನ್ಯಾಯವಾದಿ ಎಸ್‌. ಬಿ. ಅಮೀನ್‌, ಚಂದ್ರಶೇಖರ ಎಸ್‌. ಪೂಜಾರಿ, ರೋಹಿತ್‌ ಎಂ. ಸುವರ್ಣ, ಹರಿಶ್ಚಂದ್ರ ಜಿ. ಮೂಲ್ಕಿ,

ದಾಮೋದರ ಸಿ. ಕುಂದರ್‌, ಗಂಗಾಧರ್‌ ಜೆ. ಪೂಜಾರಿ, ಸೂರ್ಯಕಾಂತ್‌ ಜೆ. ಸುವರ್ಣ, ಅಶೋಕ್‌ ಎಂ. ಕೋಟ್ಯಾನ್‌, ಅನºಲಗನ್‌ ಸಿ.ಹರಿಜನ, ಸಿ. ಟಿ. ಸಾಲ್ಯಾನ್‌ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಆರ್‌. ಮೂಲ್ಕಿ, ಪ್ರಧಾನ ಪ್ರಬಂಧಕ ವಿದ್ಯಾನಂದ ಎಸ್‌. ಕರ್ಕೇರ, ನವೀನ್‌ಚಂದ್ರ 
ಎಸ್‌. ಬಂಗೇರ, ದಿನೇಶ್‌ ಬಿ. ಸಾಲ್ಯಾನ್‌, ಮುಖ್ಯ ಮಾಹಿತಿ ಅಧಿಕಾರಿ ನಿತ್ಯಾನಂದ ಎಸ್‌. ಕಿರೋಡಿಯನ್‌, ಮಾಹಿತಿ ತಂತ್ರಜ್ಞಾನ ಇಲಾಖೆಯ ಉನ್ನತಾಧಿಕಾರಿಗಳಾದ ರಾಜೇಶ್‌ ಅಮೀನ್‌, ಪೂಜಾ ರಾಣೆ ಉಪಸ್ಥಿತರಿದ್ದರು.

ಚಿತ್ರ-ವರದಿ:  ರೋನ್ಸ್‌ ಬಂಟ್ವಾಳ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next