Advertisement

ನಾಳೆ ಭಾರತ್‌ ಬಂದ್‌;ಬೆಂಗಳೂರು ಸ್ತಬ್ಧ?;ರಾಜ್ಯದಲ್ಲಿ ಪ್ರತಿಭಟನೆ ಬಿಸಿ

04:22 PM Sep 09, 2018 | Team Udayavani |

 ಬೆಂಗಳೂರು : ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಕರೆ ನೀಡಿರುವ ಸೋಮವಾರದ “ಭಾರತ ಬಂದ್‌’ಗೆ ಹಲವು ಸಂಘಟನೆಗಳು ಕೈಜೋಡಿಸಿದ್ದು, ಇದರ ಬಿಸಿ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತಟ್ಟುವ ಸಾಧ್ಯತೆ ಇದೆ. 

Advertisement

ಬೆಂಗಳೂರಿನಲ್ಲಿ  ನಾಳೆ ಪರಿಸ್ಥಿತಿಗೆ ಅನುಗುಣವಾಗಿ ಬಸ್‌ ಸಂಚರಿಸುವ ಸಾಧ್ಯತೆಗಳಿವೆ. ಓಲಾ, ಉಬರ್‌‌, ಆಟೋ ಚಾಲಕರು ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದು ನಗರದಲ್ಲಿ ಜನಜೀವನ ಸ್ತಬ್ಧವಾಗುವ ಸಾಧ್ಯತೆಗಳಿವೆ.
 
ಬೆಂಗಳೂರು ನಗರದಲ್ಲಿ  15 ಸಾವಿರ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 

ಬಿಎಂಟಿಸಿ,ಕೆಎಸ್‌ಆರ್‌ಟಿಸಿ ಸೇರಿದಂತೆ ಸರ್ಕಾರಿ ಬಸ್‌ಗಳ ಸಿಬಂದಿಗಳು ಪ್ರತಿಭಟನೆಯಲ್ಲಿ  ಭಾಗಿಯಾಗುವ ಹಿನ್ನಲೆಯಲ್ಲಿ   ಸಂಚಾರ ನಡೆಸುವ ಸಾಧ್ಯತೆಗಳು ವಿರಳ.  

ಕಾಂಗ್ರೆಸ್‌ ಸೇರಿದಂತೆ ವಿವಿಧ ಸಂಘಟನೆಗಳು ಬೀದಿಗಿಳಿದು ಜಿಲ್ಲಾ ಕೇಂದ್ರಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಿದೆ. 

ಸಂಜೆ 3 ಗಂಟೆಯ ಬಳಿಕ ಬಸ್‌ ಸಂಚಾರ ಆರಂಭವಾಗುವ ಸಾಧ್ಯತೆಗಳಿವೆ. 

Advertisement

ದಕ್ಷಿಣ ಕನ್ನಡದಲ್ಲಿ ಬೆಂಬಲ: ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ನಾಳೆಯ ಭಾರತ್ ಬಂದ್ ಗೆ ಬೆಂಬಲ ನೀಡಿದೆ. ಹಾಗಾಗಿ ನಾಳೆ ಜಿಲ್ಲೆಯಲ್ಲಿ ಖಾಸಗಿ ಬಸ್ ಓಡಾಟ ಇರುವುದಿಲ್ಲ. 

ಬಳ್ಳಾರಿ, ರಾಯಚೂರು, ಚಾಮರಾಜನಗರ, ವಿಜಯಪುರ , ಕಲಬುರಗಿ, ಬಾಗಲಕೋಟೆ, ಮೈಸೂರು  ಮತ್ತು ಕೊಪ್ಪಳದಲ್ಲಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. 

ಹೊಟೇಲ್‌ ಬಂದ್‌ ಇಲ್ಲ
ಮುಷ್ಕರ ಬಂದ್‌ನಿಂದ ಎನೂ ಸಾಧಿಸಲು ಸಾಧ್ಯವಿಲ್ಲ. ರಾಜಕೀಯ ಉದ್ದೇಶದ ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ಹೊಟೇಲ್‌ ಮಾಲೀಕರ ಸಂಘ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next