ಬೋಪಾಲ್/ಪಟ್ನಾ/ವಾರಾಣಸಿ: ಎಸ್‌ಸಿ/ಎಸ್‌ಟಿ ಕಾಯಿದೆ ತಿದ್ದುಪಡಿಯನ್ನು ವಿರೋಧಿಸಿ ಬಿಹಾರದಲ್ಲಿ ಇಂದು ಗುರುವಾರ ಭಾರತ್ ಬಂದ್ ನಡೆಯುತ್ತಿದ್ದು ಪ್ರತಿಭಟನಕಾರರು ರೈಲುಗಳನ್ನು ತಡೆದಿದ್ದಾರೆ. ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ಪ್ರತಿಭಟನಕಾರರು ಪ್ರತಿಕೃತಿಗಳನ್ನು ಸುಟ್ಟಿದ್ದಾರೆ.
ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಗೆ ಈಚೆಗೆ ತಿದ್ದುಪಡಿ ತರಲಾಗಿರುವುದನ್ನು ವಿರೋಧಿಸಿ ಮೇಲ್ವರ್ಗದ ಸಮುದಾಯಗಳ ಸುಮಾರು 35 ಸಂಘಟನೆಗಳು ಜತೆಗೂಡಿ ಇಂದಿನ ಭಾರತ್ ಬಂದ್‌ಗೆ ಕರೆ ನೀಡಿವೆ.
ಬಿಹಾರ, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ತೀವ್ರ ಮಟ್ಟದಲ್ಲಿ ನಡೆಯುತ್ತಿರುವ
ಭಾರತ್ ಬಂದ್ ಪ್ರಯುಕ್ತ ನಿಷೇಧಾಜ್ಞೆಗಳನ್ನು ಹೇರಲಾಗಿದೆ; ಸೂಕ್ಷ್ಮ ಪ್ರದೇಶಗಳಲ್ಲಿ ಸೆ.144 ಹೇರಲಾಗಿದೆ.
ಭಿಂಡ್ ಜಿಲ್ಲೆಯಲ್ಲಿ ಶಾಲೆ ಕಾಲೇಜುಗಳನ್ನು ಮುಚ್ಚಲಾಗಿದೆ. ರಾಜ್ಯಾದ್ಯಂತ ಪೆಟ್ರೋಲ್ ಸ್ಟೇಶನ್‌ಗಳು ಇಂದು ಮುಚ್ಚಿವೆ. ಗುರುವಾರ ಬೆಳಗ್ಗೆ 10ರಿಂದ 12ರ ತನಕ ಪೆಟ್ರೋಲ್ ಸ್ಟೇಶನ್‌ಗಳನ್ನು ಮುಚ್ಚಲು ನಾವು ನಿರ್ಧರಿಸಿದ್ದೇವೆ ಎಂದು ಮಧ್ಯ ಪ್ರದೇಶದ ಪೆಟ್ರೋಲ್ ಪಂಪ್ ಓನರ್ ಅಸೋಸಿಯೇಶನ್ ಅಧ್ಯಕ್ಷ ಅಜಯ್ ಸಿಂಗ್ ಹೇಳಿದ್ದಾರೆ.