ಕೋವಿಡ್ ಎರಡನೇ ಅಲೆಯ ಆತಂಕಕೊಂಚ ಮಟ್ಟಿಗೆ ಕಡಿಮೆಯಾಗುತ್ತಿದ್ದಂತೆ, ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸ್ಟಾರ್ ಸಿನಿಮಾಗಳು ತೆರೆಗೆ ಬರಲು ಪ್ಲಾನ್ ಮಾಡಿಕೊಳ್ಳುತ್ತಿವೆ. ಅದರಲ್ಲೂ ಎರಡನೇ ಲಾಕ್‌ಡೌನ್ ಬಳಿಕ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಅಭಿನಯದ “ಭಜರಂಗಿ-2′ ಮೊದಲ ಸ್ಟಾರ್ ಸಿನಿಮಾವಾಗಿ ತೆರೆಗೆ ಬರುತ್ತಿದ್ದು, ಇದೇ ಸೆ.1ರಂದು ಟ್ರೇಲರ್ ಬಿಡುಗಡೆ ಮಾಡಿ, ಸೆ. 10 ರಂದು “ಭಜರಂಗಿ-2’ನ್ನು ಅದ್ಧೂರಿಯಾಗಿ ತೆರೆಗೆ ತರಲು ಚಿತ್ರತಂಡ ಸಜ್ಜಾಗಿತ್ತು.
ಬಹುಸಮಯದ ನಂತರ ತಮ್ಮ ನೆಚ್ಚಿನ ನಟನ ಸಿನಿಮಾವನ್ನ ತೆರೆಮೇಲೆಕಣ್ತುಂಬಿಕೊಳ್ಳಲು ಶಿವಣ್ಣನ ಫ್ಯಾನ್ಸ್ ಕೂಡ ಕಾತುರದಿಂದ ಕಾಯುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲೂ “ಭಜರಂಗಿ-2′ ಹವಾ ಜೋರಾಗುತ್ತಿತ್ತು. ಇನ್ನೇನು ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ “ಭಜರಂಗಿ-2′ ದರ್ಶನಕ್ಕಾಗಿ ಕಾಯುತ್ತಿದ್ದ ಶಿವಣ್ಣ ಫ್ಯಾನ್ಸ್‌ಗೆ ಮತ್ತೂಮ್ಮೆ ನಿರಾಸೆಯಾಗಿದೆ.
ಕೊರೊನಾ ಭೀತಿಯಿಂದ “ಭಜರಂಗಿ-2′ ಬಿಡುಗಡೆಗೆ ಮತ್ತೂಮ್ಮೆ ಬ್ರೇಕ್ ಬಿದ್ದಿದೆ. ಹೌದು, ಇದೇ ಸೆ. 1ರಂದು “ಭಜರಂಗಿ-2′ ಟ್ರೇಲರ್ ಬಿಡುಗಡೆಯಾಗಿ, ಸೆ.10ಕ್ಕೆ ಸಿನಿಮಾ ಬಿಡುಗಡೆಯಾಗಬೇಕಿತ್ತು. ಕಳೆದಕೆಲ ದಿನಗಳಿಂದ ಮತ್ತೆ ಕೊರೊನಾ ಆತಂಕ ಹೆಚ್ಚಾಗುತ್ತಿರುವುದರಿಂದ, “ಭಜರಂಗಿ-2′ ಬಿಡುಗಡೆಯನ್ನು ಮತ್ತೂಮ್ಮೆ ಚಿತ್ರತಂಡ ಅನಿರ್ಧಿಷ್ಟಾವಧಿಗೆ ಮುಂದೂಡಿದೆ.
ಇನ್ನು ಈ ವಿಷಯವನ್ನು ಸ್ವತಃ ನಟ ಶಿವರಾಜಕುಮಾರ್ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. “ಸೆ.1ರಂದು ನಮ್ಮ ಸಿನಿಮಾದ ಟ್ರೇಲರ್ ರಿಲೀಸ್ ಮತ್ತು ಸೆ.10ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಅದು ಈಗ ಸಾಧ್ಯವಾಗ್ತಿಲ್ಲ.ಕೊರೊನಾ ಕೇಸ್‌ಗಳು ಜಾಸ್ತಿ ಆಗುತ್ತಿದ್ದು, ಜೊತೆಗೆ ವೀಕೆಂಡ್ ಲಾಕ್ ಡೌನ್ ಮತ್ತು ನೈಟ್‌ಕರ್ಫ್ಯೂ ಇರೋದ್ರಿಂದ, ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡುವುದು ನಿರ್ಮಾಪಕರ ದೃಯಿಂದ ಒಳ್ಳೆಯದಲ್ಲ. ಹಾಗಾಗಿ ಸದ್ಯಕ್ಕೆ “ಭಜರಂಗಿ-2′ ರಿಲೀಸ್ ಆಗುತ್ತಿಲ್ಲ’ ಎಂದು ಶಿವರಾಜಕುಮಾರ್ ಹೇಳಿದ್ದಾರೆ.
ರಿಲೀಸ್ ಮುಂದೂಡಿರುವುದಕ್ಕೆ ಕಮೆಯಾಚಿಸಿದ್ದ ಶಿವಣ್ಣ ತಮ್ಮ ಬಹುನಿರೀಕ್ಷಿತ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡದ ಈ ನಿರ್ಧಾರ ನಿರಾಸೆ ತಂದಿದ್ದು, ಈ ಬಗ್ಗೆ ಶಿವಣ್ಣ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಅಡೆತಡೆಗಳು ಬಂದರೂ, ಸೆಟ್ಟೇರಿದಾಗಿನಿಂದಲೂ ಆಂಜನೇಯ ಸ್ವಾಮಿಕೃಪೆಯಿಂದ ಈ ಸಿನಿಮಾವನ್ನು ಮುನ್ನೆಡೆಸಿಕೊಂಡು ಹೋಗುತ್ತಿದ್ದೇವೆ. ನಾವು ಪಟ್ಟ ಕಷ್ಟವನ್ನು ನೀವು ಅನುಭವಿಸಬಾರದು. ನೀವು ಆರಾಮಾಗಿ ಬಂದು ಸಿನಿಮಾ ನೋಡಬೇಕು. ನಾವು ಪಟ್ಟಿರುವ ಕಷ್ಟಕ್ಕೆ ನೀವು ಪ್ರತಿಫಲ ನೀಡುತ್ತೀರಿ ಎಂಬ ಭರವಸೆ ಇದೆ. ಸಿನಿಮಾ ರಿಲೀಸ್ ಡೇಟ್ ಮುಂದೂಡಿರುವುದಕ್ಕೆ ಇಡೀ ತಂಡದ ಪರವಾಗಿ ಕ್ಷಮೆಕೇಳುತ್ತೇನೆ’ ಎಂದಿದ್ದಾರೆ ಶಿವರಾಜಕುಮಾರ್.