Advertisement

ಆಪರೇಷನ್‌ ಗೂಳಿ ಯಶಸ್ವೀ

04:04 PM Oct 11, 2019 | |

ಭರಮಸಾಗರ: ಗಾಂಧಿ ಜಯಂತಿಯಂದು ಆ್ಯಸಿಡ್‌ ದಾಳಿಗೆ ತುತ್ತಾಗಿದ್ದ ದೇವರ ಎತ್ತಿಗೆ ಕೊನೆಗೂ ಚಿಕಿತ್ಸೆ ದೊರೆತಿದೆ. ಮೈಮೇಲೆ ಗಾಯಗಳಾಗಿ ವೇದನೆ ಪಡುತ್ತಾ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದ ಗೂಳಿಯನ್ನು ಗ್ರಾಮದ ಯುವಕರು ಶ್ರಮಪಟ್ಟು ಗುರುವಾರ ಹಿಡಿದು ಕಟ್ಟಿ ಹಾಕಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

Advertisement

ದೇವರಿಗೆ ಬಿಟ್ಟ ಎತ್ತಿನ ಮೇಲೆ ಅಹಿಂಸಾ ತತ್ವ ಸಾರುವ ಗಾಂಧಿ ಜಯಂತಿಯಂದೇ ದುಷ್ಕರ್ಮಿಗಳು ಆ್ಯಸಿಡ್‌ ಎರಚಿ ಗಂಭೀರವಾಗಿ ಗಾಯಗೊಳಿಸಿದ್ದರು. ಈ ಘಟನೆ ಇಡೀ ಗ್ರಾಮದ ಜನರ ಮನಕಲಕುವಂತೆ ಮಾಡಿತ್ತು.

ಕೆಲವು ಯುವಕರು ಅಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಗೂಳಿ ಯಾರ ಕೈಗೂ ಸಿಗದೆ ಸಿಕ್ಕ ಸಿಕ್ಕಲ್ಲಿ ಅಲೆದಾಟ ನಡೆಸುತ್ತಿತ್ತು. 3-4 ದಿನಗಳ ಕಳೆಯುವ ವೇಳೆಗೆ ಮೈಮೇಲೆ ದೊಡ್ಡ ಗಾಯಗಳಾಗಿ ಹುಳು ಬಿದ್ದಿದ್ದವು. ಗಾಯಗಳಲ್ಲಿನ ಹುಳಗಳ ಕಾಟಕ್ಕೆ
ಗೂಳಿ ನಿಂತಲ್ಲಿ ನಿಲ್ಲದೆ ಯಮಯಾತನೆ ಅನುಭವಿಸುತ್ತಿತ್ತು. ಈ ನಡುವೆ ಹಲವರು ಪಶು ಆಸ್ಪತ್ರೆ ವೈದ್ಯರ ಗಮನ ಸೆಳೆದಿದ್ದರು. ಗೂಳಿಯನ್ನು ಒಂದೆಡೆ ಹಿಡಿದು ಕಟ್ಟಿ ಹಾಕಿದರೆ ಚಿಕಿತ್ಸೆ ನೀಡುವುದಾಗಿ ಪಶು ಆಸ್ಪತ್ರೆಯವರು ತಿಳಿಸಿದ್ದರು. ಘಟನೆ ನಡೆದು ಬರೋಬ್ಬರಿ ಎಂಟು ದಿನಗಳ ಬಳಿಕ ಯುವಕರ ಗುಂಪು, ಗುರುವಾರ
ದೊಡ್ಡಕೆರೆ ವ್ಯಾಪ್ತಿಯಲ್ಲಿ ಸುತ್ತಾಡುತ್ತಿದ್ದ ಗೂಳಿಯನ್ನು ಸೆರೆ ಹಿಡಿದು ಪಶು ಆಸ್ಪತ್ರೆಗೆ ಕರೆ ತಂದು ಸೂಕ್ತ ಚಿಕಿತ್ಸೆ ಕೊಡಿಸಿತು.

ಗೂಳಿ ಸೆರೆ ಹಿಡಿಯುವ ಕೆಲಸ ಹಾಗೂ ಅದಕ್ಕೆ ಚಿಕಿತ್ಸೆ ದೊರಕಿಸುವಲ್ಲಿ ಶ್ರಮ ವಹಿಸಿದ ಹಿರಿಯ ಪಶು ಚಿಕಿತ್ಸಕರಾದ ಶಿವಗಾ ನಾಯ್ಕ ಮತ್ತು ಗೋವಿಂದರಾಜು ಅವರನ್ನು ಯುವಕತು ಹೂವಿನ ಹಾರ ಹಾಕಿ ಸನ್ಮಾನಿಸಿದರು.

ಕೆ.ಪಿ. ಹರೀಶ್‌, ಎಚ್‌.ಎನ್‌. ಪ್ರವೀಣ್‌, ಜಿಮ್‌ ಶ್ರೀನಿವಾಸ್‌, ಒ. ರುದ್ರೇಶ್‌, ರಾಜು, ಎನ್‌.ಕೆ. ಸಂತೋಷ್‌, ಸೂರಪ್ಪ, ಮಡಿವಾಳ ಚಂದ್ರಪ್ಪ, ಗಜ, ರಾಹುಲ್‌, ಕಲ್ಕಿ ಮಲ್ಟಿ ಜಿಮ್‌ನ ಯುವಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next