Advertisement

ನೆಲಕ್ಕುರುಳಿದ “ಚೌಡಮ್ಮ ನ ಬೇವಿನ ಮರ’

01:36 PM Dec 22, 2019 | Naveen |

ಭರಮಸಾಗರ: ರಾಷ್ಟ್ರೀಯ ಹೆದ್ದಾರಿ 4ರ ಕೊಳಹಾಳು ಚೌಡಮ್ಮ ದೇಗುಲವನ್ನು ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ನೆಲಸಮಗೊಳಿಸಲಾಗಿದೆ. ಇದರ ಬೆನ್ನಲ್ಲೇ ಸುಮಾರು 120 ವರ್ಷಗಳಷ್ಟು ಹಳೆಯದಾದ ಹಾಗೂ ದೇಗುಲಕ್ಕೆ ಹೊಂದಿಕೊಂಡಿದ್ದ “ಚೌಡಮ್ಮನ ಮರ’ ಎಂದೇ ಪ್ರಸಿದ್ಧಿ ಪಡೆದಿದ್ದ ಬೇವಿನ ಮರವನ್ನು ಶನಿವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೆಲಕ್ಕುರುಳಿಸಿತು.

Advertisement

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಚಿತ್ರದುರ್ಗದಿಂದ ದಾವಣಗೆರೆವರೆಗಿನ ಮರಗಳನ್ನು ಕಡಿದು ಉರುಳಿಸಲಾಗಿತ್ತು. ಹೀಗೆ ನೆಲಕ್ಕುರುಳಿದ ಸುಮಾರು 100 ವರ್ಷಗಳ ಹಳೆಯದಾದ ಮರಗಳ ಸಂಖ್ಯೆ ನೂರರ ಗಡಿ ದಾಟಿತ್ತು. ಇದೇ ವೇಳೆ ಕೊಳಹಾಳು ಚೌಡಮ್ಮ ದೇಗುಲಕ್ಕೆ ಹೊಂದಿಕೊಂಡ ಬೇವಿನ ಮರವನ್ನು ಕೂಡ ಕಡಿಯಲು ಉದ್ದೇಶಿಸಲಾಗಿತ್ತು. ಆದರೆ ಗುತ್ತಿಗೆದಾರರು ದೇವಿ ಮಹಿಮೆಗೋ ಅಥವಾ ದೇವಿಯ ಕೃಪೆಗಾಗಿಯೋ ಇಲ್ಲಿನ ಮರಗಳನ್ನು ಕಡಿಯದೆ ದೇಗುಲಕ್ಕೆ ಐದು ಸಾವಿರ ರೂ. ಕಾಣಿಕೆ ನೀಡಿ ಮರ ಕಡಿಯುವುದಿಲ್ಲ ಎಂದು ತಿಳಿಸಿ ದೇವಿ ಆರ್ಶೀವಾದ ಪಡೆದು ಹೋಗಿದ್ದನ್ನು ಕೊಳಹಾಳು ಗ್ರಾಮದ ತಿಪ್ಪೇಸ್ವಾಮಿ ನೆನಪಿಸಿಕೊಂಡರು.

ಹೆದ್ದಾರಿ ಉದ್ದಗಲಕ್ಕೂ ಇದ್ದ ಮರಗಳ ಮಾರಣಹೋಮವೇ ನಡೆದು ಹೋದರೂ ಚೌಡಮ್ಮ ದೇಗುಲದ ಬೇವಿನ ಮರ ಮಾತ್ರ ಉಳಿದಿತ್ತು. ಹೀಗಾಗಿ ಕಳೆದ 15 ವರ್ಷಗಳ ಹಿಂದೆಯೇ ಕಡಿತಲೆಗೆ ಆಹುತಿ ಆಗಬೇಕಿದ್ದ ಈ ಬೇವಿನ ಮರದ ಸಾವಿನ ಅವಧಿ 15 ವರ್ಷಗಳಿಗೆ ವಿಸ್ತರಣೆ ಆಗಿತ್ತು. ಖ್ಯಾತ ಜ್ಯೋತಿಷಿಗಳ ಮೊರೆ ಹೋಗಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಆಗಬಹುದಾದ ಅಡ್ಡಿ ಆತಂಕಗಳನ್ನು ಪೂಜೆ, ಹೋಮ ಹವನಗಳನ್ನು ನಡೆಸಿ ನಿವಾರಿಸಿಕೊಂಡು ದೇಗುಲ ಸ್ಥಳಾಂತರಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದರು. ಶನಿವಾರ ಅಂತಿಮವಾಗಿ ಬೇವಿನಮರವನ್ನು ನೆಲಕ್ಕೆ ಉರುಳಿಸಿದ್ದಾರೆ.

ಇಡೀ ದೇಗುಲವನ್ನು ಕೆಡವಿದ ಬಳಿಕ ಬೇವಿನ ಮರ ಅನಾಥವಾದಂತೆ ತೋರುತ್ತಿತ್ತು. ಜೆಸಿಬಿ ಬಳಸಿ ಮರದ ಎಲ್ಲಾ ಕೊಂಬೆಗಳನ್ನು ಒಂದೊಂದಾಗಿ ಉರುಳಿಸಲಾಯಿತು. ಸಂಜೆ ವೇಳೆಗೆ ಇಡೀ ಮರ ನೆಲಕ್ಕೆ ಬಿತ್ತು.

Advertisement

Udayavani is now on Telegram. Click here to join our channel and stay updated with the latest news.

Next