Advertisement

5 ವರ್ಷ ಬಳಿಕ ಕೆ. ಬಳೇಕಟ್ಟೆ ಕೆರೆಗೆ ಹರಿಯಿತು ನೀರು

04:16 PM Oct 03, 2019 | Team Udayavani |

ಭರಮಸಾಗರ: ಹಸ್ತಾ ಚಿತ್ತಾ ಮಳೆಯಿಂದ ಸಮೀಪದ ಕೆ.ಬಳ್ಳೇಕಟ್ಟೆ ಕೆರೆಗೆ ಪ್ರಮುಖ ಎರಡು ಹಳ್ಳಗಳಿಂದ ಕಳೆದ ಐದು ವರ್ಷಗಳ ಬಳಿಕ ನೀರು ಹರಿದು ಬರುತ್ತಿದೆ.

Advertisement

ಲಕ್ಷ್ಮೀಸಾಗರ, ಕ್ಯಾಸಾಪುರ, ಸಾದರಹಳ್ಳಿ ಭಾಗಗಳಿಂದ ಒಂದು ಹಳ್ಳ ಮತ್ತು ಸೊಂಡೆಕೊಳ, ಅನ್ನೇಹಾಳ್‌ ಭಾಗಗಳಿಂದ ಮತ್ತೂಂದು ಹಳ್ಳದ ಮೂಲಕ ಮಂಗಳವಾರದ ಮಳೆಯಿಂದ ಕೆರೆಗೆ ನೀರು ಹರಿದು ಬರುತ್ತಿದೆ. ಕಳೆದ ಕೆಲವು ವರ್ಷಗಳಿಂದ ಕೆರೆ ವ್ಯಾಪ್ತಿಯಲ್ಲಿ ತೆಗೆದಿದ್ದ ಹೂಳಿನ ಮಣ್ಣಿನಿಂದ ಉಂಟಾದ ದೊಡ್ಡ ಗುಂಡಿಗಳು ತುಂಬಿ ಇದೀಗ ಕೆರೆಯಲ್ಲಿ ಹತ್ತಾರು ಅಡಿ ನೀರು ನಿಂತಿದೆ.

ಕೆರೆಗೆ ಹೊಂದಿಕೊಂಡ ಕೆ. ಬಳ್ಳೇಕಟ್ಟೆ ಗ್ರಾಮ ಹಾಗೂ ಸುತ್ತಮುತ್ತಲ ಜಮೀನುಗಳಿಂದ ಹರಿದುಬರುವ ನೀರಿನಿಂದ ಕೆರೆಗೆ ಹೊಂದಿಕೊಂಡಿರುವ ದೊಡ್ಡ ಗೋಕಟ್ಟೆ ತುಂಬಿದೆ. ಇದರಿಂದ ಗ್ರಾಮಕ್ಕೆ ಕುಡಿಯುವ ಪೂರೈಕೆ ಮಾಡುತ್ತಿದ್ದ ಬತ್ತಿ ಹೋಗಿದ್ದ ಕೊಳವೆಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಇದರಿಂದ ಕುಡಿಯುವ ನೀರಿನ ಬವಣೆ ತಪ್ಪಬಹುದು ಎಂಬುದು ಗ್ರಾಮಸ್ಥರ ಅಂಬೋಣ.

ಕೆರೆ ಏರಿ ಮತ್ತು ಕೆರೆಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ರಸ್ತೆ ಇಕ್ಕೆಲಗಳಲ್ಲಿನ ಜಂಗಲ್‌ ಕಟಾವು ಮಾಡದೇ ಇರುವದರಿಂದ ಕೆರೆ ನೀರಿನ ಸಂಗ್ರಹಕ್ಕೆ ಸಮಸ್ಯೆಯಾಗಬಹುದು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಕೆರೆ ಮಧ್ಯೆ ಹಾದು ಹೋಗಿರುವ ರಸ್ತೆ ಇಕ್ಕೆಲಗಳಲ್ಲಿ ದೊಡ್ಡ ಪ್ರಮಾಣದ ಮಣ್ಣನ್ನು ಸಂಗ್ರಹ ಮಾಡಲಾಗಿದೆ. ಈ ಮಣ್ಣು ಕೆರೆಗೆ ಹರಿದು ಬರುತ್ತಿರುವ ನೀರಿನ ಜೊತೆ ಕೆರೆಗೆ ಸೇರುತ್ತಿರುವದರಿಂದ ಹೂಳಿನ ಪ್ರಮಾಣವನ್ನು ಹೆಚ್ಚಿಸಬಹುದು ಎಂಬ ಭೀತಿ ಕೂಡ ಇದೆ.

Advertisement

Udayavani is now on Telegram. Click here to join our channel and stay updated with the latest news.

Next