ವಾಡಿ: ಬಂಜಾರಾ ಜನಾಂಗವನ್ನು ತುಳಿಯುವ ಷಡ್ಯಂತ್ರ ನೆಡೆಯುತ್ತಿದೆ. ಅನ್ಯಾಯದ ವಿರುದ್ಧ ಹೋರಾಡಲು ಲಂಬಾಣಿಗರು ಪಕ್ಷ ಬೇಧ ಮರೆತು ಸಂಘಟಿತರಾಗಬೇಕು ಎಂದು ಅಖೀಲ ಭಾರತ ಬಂಜಾರಾ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಾಬುರಾವ ಚವ್ಹಾಣ ಕರೆ ನೀಡಿದರು. ಪಟ್ಟಣದ ಸಾಹೇಬ್ ಫಂಕ್ಷನ್ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಬಂಜಾರಾ ಸೇವಾ ಸಂಘ ವಾಡಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಬಂಜಾರಾ ಜನಾಂಗದವರು ಯಾವುದೇ ರಾಜಕೀಯ ಪಕ್ಷದಲ್ಲಿರಲಿ. ವಿವಿಧ ಸಂಘ ಸಂಸ್ಥೆಗಳಲ್ಲಿರಲಿ. ಸಮಾಜದ ಏಕತೆಗೆ ಧಕ್ಕೆಯಾದಾಗ ಮತ್ತು ವಿವಿಧ ನಗರಗಳಲ್ಲಿ ವಾಸಿಸುವವರ ಮೇಲೆ ದಾಳಿಗಳು ನಡೆದಾಗ ಒಗ್ಗಟ್ಟಿನಿಂದ ಹೋರಾಟ ಮಾಡಲು ಮುಂದಾಗಬೇಕು ಎಂದು ಹೇಳಿದರು. ಲಂಬಾಣಿ ಜನರ ಕುಟುಂಬದಲ್ಲಿ ಕಲಹಗಳು ನಡೆದಾಗ ಹಣ ಪಡೆಯದೆ ನ್ಯಾಯ ದೊರಕಿಸಿಕೊಡಬೇಕು. ಸಂಘಟನೆ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಸರಕಾರದ ಯೋಜನೆಗಳನ್ನು ನಮ್ಮ ಸಮುದಾಯದವರ ಮನೆ ಬಾಗಿಲಿಗೆ ಮುಟ್ಟಿಸುವ ಕಾರ್ಯ ಮಾಡಬೇಕು. ಬಂಜಾರಾ ಸಂಘ ಜನ ಕಲ್ಯಾಣಕ್ಕೆ ಬಳಕೆಯಾಗಬೇಕು ಎಂದು ಕಿವಿಮಾತು ಹೇಳಿದರು. ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿ, ಸಮಾಜ ಸೇವೆಯೇ ಮುಖ್ಯ ಎಂಬ ನಿಲುವು ಹೊಂದುವ ಮೂಲಕ ಸಾರ್ವಜನಿಕ ಜಾಗೃತಿಗಾಗಿ ಸಂಘ ಕೆಲಸ ಮಾಡಬೇಕು ಎಂದು ಹೇಳಿದರು. ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ, ಪೋಮು ರಾಠೊಡ, ಶ್ರೀನಿವಾಸ ಸಗರ, ಭಾವಸಿಂಗ್ ಚವ್ಹಾಣ ಮಾತನಾಡಿದರು.
ಶ್ರೀಜೇಮಸಿಂಗ್ ಮಹಾರಾಜ ಹಾಗೂ ಶ್ರೀಬಳಿರಾಮ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಬಂಜಾರಾ ಸೇವಾ ಸಂಘದ ಅಧ್ಯಕ್ಷ ಶಂಕರ ಜಾಧವ, ತಾಪಂ ಸದಸ್ಯೆ ವಿಜಯಲಕ್ಷ್ಮೀ ರಾಠೊಡ, ಶಾಂತಾ ಯಾಕಾಪುರ, ಪುರಸಭೆ ಸದಸ್ಯರಾದ ದೇವಿಂದ್ರ ಕರದಳ್ಳಿ, ಪ್ರಕಾಶ ನಾಯಕ, ರಾಜೇಶ ಅಗರವಾಲ, ಶರಣು ನಾಟೀಕಾರ, ಮುಖಂಡರಾದ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಬಸವರಾಜ ಪಂಚಾಳ,
ಇಬ್ರಾಹಿಂ ಪಟೇಲ, ಈರಣ್ಣ ಮಲಕಂಡಿ, ಸಾಬಣ್ಣ ಆನೇಮಿ, ಮರಿಗೌಡ ಪಾಟೀಲ, ರಾಮಚಂದ್ರ ರಾಠೊಡ, ದಿಲೀಪ ನಾಯಕ, ವಿಠuಲ ಚವ್ಹಾಣ, ಕಿಶನ ನಾಯಕ ಪಾಲ್ಗೊಂಡಿದ್ದರು. ಶಾಂತಕುಮಾರ ಎಣ್ಣಿ ನಿರೂಪಿಸಿ, ವಂದಿಸಿದರು. ಇದಕ್ಕೂ ಮೊದಲು ಸೇವಾಲಾಲ ನಗರ ತಾಂಡಾದಿಂದ ಲಂಬಾಣಿ ಮಹಿಳೆಯರ ರ್ಯಾಲಿ ನಡೆಯಿತು.