Advertisement

ರಂಜಿಸಿದ ಭಂಡಾರಿ ಸೇವಾ ಸಮಿತಿಯ ಸಾಂಸ್ಕೃತಿಕ ವೈಭವ

04:49 PM Jan 03, 2017 | Team Udayavani |

ನಗರದ  ಪ್ರತಿಷ್ಠಿತ ಜಾತಿಯ  ಸಂಘಟನೆಗಳಲ್ಲಿ  ಭಂಡಾರಿ  ಸೇವಾ ಸಮಿತಿಯೂ ಒಂದು. ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ವಾರ್ಷಿಕ ಭಂಡಾರಿ ಸ್ನೇಹ ಸಮ್ಮಿಲನವು ಡಿ. 25ರಂದು ದಿನಪೂರ್ತಿ ಥಾಣೆ ವಾಗ್ಲೆà ಎಸ್ಟೇಟ್‌ನ ಡಿ’ಸೋಜಾವಾಡಿಯ ಸೈಂಟ್‌ ಲಾರೆನ್ಸ್‌ ಶಾಲಾ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆದು ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಮೇಳೈಸಿತು.  ಕಚ್ಚಾರು ನಾಗೇಶ್ವರ ಕುಲದೇವರ‌‌ನ್ನು ಸ್ತುತಿಸಿ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಾಂಸ್ಕೃತಿಕ ವೈಭವವು ಸೇವಾ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಶೇಖರ್‌ ಎಸ್‌. ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.

Advertisement

ಮುಂಬಯಿ ಮಹಾನಗರ ಸೇರಿದಂತೆ ಇನ್ನಿತರ ಉಪನಗರಗಳಲ್ಲಿ ನೆಲೆಯಾಗಿರುವ ಭಂಡಾರಿ ಸಮಾಜ ಬಾಂಧವರು ಒಮ್ಮತದಿಂದ ಒಂದೇ ವೇದಿಕೆಯ ಅಡಿಯಲ್ಲಿ ನೆರೆದು ದಿನವಿಡೀ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಸಮಾಜದ ಪ್ರತಿಭಾವಂತ ಮಕ್ಕಳಿಂದ, ಮಹಿಳೆಯರಿಂದ ಹಾಗೂ ಸದಸ್ಯರಿಂದ ಜಾನಪದ, ಶಾಸ್ತ್ರೀಯ ನೃತ್ಯಗಳು ಪ್ರದರ್ಶನಗೊಂಡು ಸಮಾರಂಭಕ್ಕೆ ಮೆರುಗು ನೀಡಿತು. ಎಳವೆಯ ಮಕ್ಕಳಿಂದ ಹಿಡಿದು ಹಿರಿಯವರೆಗೆ ವೇದಿಕೆಯನ್ನು ಹಂಚಿಕೊಂಡಿರುವುದು ವಿಶೇಷತೆಯಾಗಿತ್ತು. ಉಡುಪಿಯ ಜಯಶೀಲ ಭಂಡಾರಿ ಮತ್ತು ಬಳಗದಿಂದ  “ಮಾಯದ ದೈವ’ ಹಾಸ್ಯ ಪ್ರಹಸನ ಕಾರ್ಯಕ್ರಮವು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಯುವಪೀಳಿಗೆಗೆ ದೈವಾರಾಧನೆಯ ಬಗ್ಗೆ ಈ ಪ್ರಹಸನವು ತಿಳಿಹೇಳುವ ಪ್ರಯತ್ನವನ್ನು ಮಾಡಿತು.

ಮುಂಬಯಿಯಲ್ಲಿ ನೆಲೆಯಾಗಿರುವ ಭಂಡಾರಿ ಸಮಾಜ ಬಾಂಧವರಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಭರತನಾಟ್ಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ರಂಗಗಳಲ್ಲಿ ಇಲ್ಲಿನ ಸಮಾಜ ಬಾಂಧವರು ಸಾಧನೆ ಅಪಾರವಾಗಿದೆ. ರಂಗಭೂಮಿಯ ಕಡೆಗೂ ವಿಶೇಷ ಒಲವನ್ನು ಹೊಂದಿರುವ ಭಂಡಾರಿ ಸಮಾಜವು ಹಲವಾರು ಪ್ರತಿಭಾವಂತ ಕಲಾವಿದರನ್ನು ಹೊಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೇ ಸಂದರ್ಭದಲ್ಲಿ  ಸಂಸ್ಥೆಯ ಸದಸ್ಯರು “ಮಾಲ್ತಿನಕ್ಲು ತಿನೆ³àರ್‌’ ತುಳು ನಾಟಕ ಪ್ರದರ್ಶಿಸಿ ಮೆರುಗು ನೀಡಿದರು.

ಸಮಿತಿಯ ಉಪಾಧ್ಯಕ್ಷರಾದ ನ್ಯಾಯವಾದಿ ರಾಮಣ್ಣ ಎಂ. ಭಂಡಾರಿ ಮತ್ತು ಪ್ರಭಾಕರ್‌ ಪಿ. ಭಂಡಾರಿ ಥಾಣೆ, ಗೌರವ ಪ್ರಧಾನ ಕಾರ್ಯದರ್ಶಿ ವಿಜಯ ಆರ್‌.ಭಂಡಾರಿ, ಗೌರವ ಕೋಶಾಧಿಕಾರಿ ಕರುಣಾಕರ ಜಿ. ಭಂಡಾರಿ, ಜತೆ ಕಾರ್ಯದರ್ಶಿಗಳಾದ ಶಶಿಧರ್‌ ಡಿ. ಭಂಡಾರಿ ಮತ್ತು ಪುರುಷೋತ್ತಮ ಜಿ. ಭಂಡಾರಿ, ಜತೆ ಕೋಶಾಧಿಕಾರಿ ಪ್ರಕಾಶ್‌ ಭಂಡಾರಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಸುಂದರ್‌ ಜಿ. ಭಂಡಾರಿ, ಮಹಿಳಾ ವಿಭಾಗಾಧ್ಯಕ್ಷೆ ಶೋಭಾ ಸುರೇಶ್‌ ಭಂಡಾರಿ ಕಡಂದಲೆ, ಉಪ ಕಾರ್ಯಾಧ್ಯಕ್ಷೆಯರಾದ ಪಲ್ಲವಿ ರಂಜಿತ್‌ ಭಂಡಾರಿ ಮತ್ತು ಅನುಶ್ರೀ ಶಿವರಾಮ ಭಂಡಾರಿ, ಕಾರ್ಯದರ್ಶಿ ರೇಖಾ ಎ.ಭಂಡಾರಿ, ಕೋಶಾಧಿಕಾರಿ ಕು| ಕ್ಷಮಾ ಆರ್‌. ಭಂಡಾರಿ, ಜತೆ ಕಾರ್ಯದರ್ಶಿ ಸರಿತಾ ಬಂಗೇರ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದರು. ಒಟ್ಟಿನಲ್ಲಿ ಭಂಡಾರಿ ಸಮಾಜ ಬಾಂಧವರು ಆಯೋಜಿಸಿದ್ದ ಈ ಸಾಂಸ್ಕೃತಿಕ ವೈವಿಧ್ಯವು ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಯಿತು.

Advertisement

  ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next