Advertisement
ಮಕ್ಕಳ ಮನಸ್ಸು ಹೂವಿನಂತೆ ಮೃದುವಾಗಿರುತ್ತದೆ. ನಾವು ನೂರು ಜನ ಮುದಕರಿಗೆ ಹೇಳುವ ಪ್ರವಚನ ಅವರ ಮುಂದಿನ ಜನ್ಮಕ್ಕೆ ಸಾರ್ಥಕವಾಗುವುದು. ಆದರೆ ಮೂರೇ ಜನ ವಿದ್ಯಾರ್ಥಿಗಳಿಗೆ ಹೇಳುವ ಮಾತು ಈ ಜನ್ಮದಲ್ಲಿಯೇ ಸಾರ್ಥಕ ಪಡೆಯುತ್ತದೆ. ಹೀಗಾಗಿ ವಿದ್ಯಾರ್ಥಿಗಳೊಂದಿಗೆ ನಡೆಸುವ ಸಂವಾದ ಸಾರ್ಥವಾಗುವುದು ಎಂದರು.
ವ್ಯಕ್ತಿ ಏನೂ ಸಾ ಧಿಸಲಾರ. ನಮ್ಮ ಅಂತರಂಗದಲ್ಲಿ ದೇವರು ಅದ್ಭುತ ಶಕ್ತಿ ಇಟ್ಟಿದ್ದಾನೆ. ನಾವು ಅದರ ಸದುಪಯೋಗ ಪಡೆದುಕೊಳ್ಳಬೇಕು. ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಾಗಿದ್ದೇವೆ.
ನಮ್ಮಲ್ಲಿ ಮಾನವೀಯ ಮೌಲ್ಯ ಬೆಳೆಯಬೇಕು. ದಯೆ ಕರುಣೆ, ಪ್ರೀತಿ ಈ ಶಿಬಿರದಿಂದ ಬೆಳೆಸಿಕೊಳ್ಳಬೇಕು. ಆಗ ಮಾತ್ರ ನೀವು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಕ್ಕೂ ಸಾರ್ಥಕವಾಗುವುದು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವಕುಮಾರ ಪಾಟೀಲ ಮಾತನಾಡಿ, ದೇವರು ಇರುವುದು ಮಕ್ಕಳ ಮನಸ್ಸಿನಲ್ಲಿ. ಬೀದರ ಜಿಲ್ಲೆಯ ಮಕ್ಕಳು ವೈಶಿಷ್ಟ್ಯ ಪೂರ್ಣ ವ್ಯಕ್ತಿತ್ವ ಹೊಂದಿದ್ದಾರೆ. ದೇಶದ ಭವಿಷ್ಯ ವಿದ್ಯಾರ್ಥಿಗಳ ಹತ್ತಿರವಿದೆ. ಕಾರಣ ವಿದ್ಯಾರ್ಥಿಗಳು ಉತ್ತಮವಾಗಿದ್ದರೆ ದೇಶದ ಭವಿಷ್ಯ ಉಜ್ವಲವಾಗುವುದು.
ಎಂಟು ದಿವಸಗಳ ಕಾಲ ನಡೆಯುವ ಈ ಶಿಬಿರದಲ್ಲಿ ಪಡೆದ ಉತ್ತಮ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
Related Articles
Advertisement
ಇದೇವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳನ್ನು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಪತ್ರಿಕಾ ಕ್ಷೇತ್ರದ ಸಾಧನೆಗೆ ಅಶೋಕ ರಾಜೋಳೆ ಮತ್ತು ಶಿಕ್ಷಣ ಕ್ಷೇತ್ರದ ಸಾಧನೆಗೆ ಜಯರಾಜ ದಾಬಶೆಟ್ಟಿ ಅವರನ್ನು ಸತ್ಕರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿ ಕಾರಿ ಸಿದ್ದವೀರಯ್ನಾ ರುದನೂರ, ಸೋಮನಾಥಪ್ಪ ಅಸ್ಟೂರೆ, ತಾಪಂ ಸಹಾಯಕ ನಿರ್ದೇಶಕಿ ಶಿವಲೀಲಾ ತಳಗಾವೆ, ಆನಂದ ಸರ್ನಾಡ, ಗುಣವಾನ ವೈರಾಗೆ, ನಾಗನಾಥ ಪಾಟೀಲ, ರಾಮಶೆಟ್ಟಿ ಕೆಂಚಾ, ಶಿವಕುಮಾರ ಘಂಟೆ, ಸುಭಾಷಚಂದ್ರ ದಾಡಗೆ, ಮಂಜುಳಾ ಸುಭಾಷ, ಸಂಗಮೇಶ ಜವಾದಿ, ಪಾರ್ವತಿ ಚಂದ್ರಕಾಂತ, ಮಲ್ಲಮ್ಮಾ ಪಾಟೀಲ, ರಮೇಶ ಸಲಗರ್ ಉಪಸ್ಥಿತರಿದ್ದರು.ಕ.ಕ.ಪ್ರ. ತಾಲೂಕು ಅಧ್ಯಕ್ಷ ಶಿವಾಜಿರಾವ್ ಮಾನೆ ಸ್ವಾಗತಿಸಿದರು. ಹಣಮಂತ ಕಾರಾಮುಂಗೆ ನಿರೂಪಿಸಿದರು. ಮಂಜುನಾಥ ಬೆಳಕೇರೆ ವಂದಿಸಿದರು.