ಭಾಲ್ಕಿ: ಮಹಿಳೆಯರು ಸ್ವಂತ ಉದ್ಯೋಗ ಕಂಡುಕೊಂಡು ಸ್ವಾವಲಂಬಿ ಜೀವನ ಸಾಗಿಸುವುದು ಅತ್ಯವಶ್ಯಕವಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ತರಬೇತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಸರ್ಕಾರದ ಉದ್ಯೋಗಿನಿ ಯೋಜನೆ ಸಹಕಾರಿಯಾಗಿದೆ. ಈ ಯೋಜನೆಯಡಿ 3 ಲಕ್ಷ ರೂ. ವರೆಗೆ ಸಾಲದ ಸೌಲಭ್ಯವಿದೆ. ಸಾಮಾನ್ಯ ವರ್ಗದವರಿಗೆ ಸರ್ಕಾರದಿಂದ ಶೇ.30 ಮತ್ತು ಎಸ್‌ಸಿ-ಎಸ್‌ಟಿ ಫಲಾನುಭವಿಗಳಿಗೆ ಶೇ.50 ಸಬ್ಸಿಡಿ ಇದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಜೀವನ ಸಾಗಿಸಲು ಮುಂದೆ ಬರಬೇಕು ಎಂದು ಕರೆ ನೀಡಿದರು. ಇದೇವೇಳೆ ಸುಮಾರು 40 ಫಲಾನುಭವಿಗಳಿಗೆ ತರಬೇತಿ ಪತ್ರ ವಿತರಿಸಿದರು.
ಫಲಾನುಭವಿಗಳು: ಕಮಲಾಬಾಯಿ ಅನೀಲಕುಮಾರ, ಮಹಾನಂದಾ ದಶರಥ, ಅರ್ಚನಾ ಸಂತೋಷ, ರೆಷ್ಮಾ ಶರಣು, ರಮಾಬಾಯಿ ರಾಜಕುಮಾರ, ಉಷಾ ದೀಪಕ, ಲಲಿತಾ ಜಗನ್ನಾಥ ಕಣಜೆ, ಕಾವೇರಿ ಸಂಗಮೇಶ ಬಿರಾದಾರ, ವಿಶಾಲಕ್ಷ್ಮೀ ಶಿವಾನಂದ ಬಿರಾದಾರ, ಸಂಗಮ್ಮ ಶಿವಕುಮಾರ ರಟಕಲೆ, ಜ್ಯೋತಿ ನಾಗಯ್ನಾ, ಮಹಾದೇವಿ ಅನೀಲ ಪಾಟೀಲ, ಮಹಾನಂದಾ ತಾನಾಜಿರಾವ್, ಸುಮನಬಾಯಿ ದೇವಿದಾಸ ಕಲಮೆ, ಸರೋಜಾ ಜ್ಞಾನೋಬಾ ಯಾದವ, ಲತಾ ಸಂಜುಕುಮಾರ ಲೋಖಂಡೆ, ಸಂಜೀವಿನಿ ಶಾಲಿವಾನ ಪಾಟೀಲ, ಜ್ಯೋತಿ ಶಿವರಾಜ ಪಂಚಾಳ, ರಾಖೀ ಬಾಲಾಜಿ, ವಿಜಯಲಕ್ಷ್ಮೀ ರಾಜಪ್ಪಾ, ವಿದ್ಯಾವತಿ ಶಿವಕುಮಾರ, ಗಂಗಮ್ಮಾ ಶಂಕ್ರೆಪ್ಪಾ ಮರೆ, ವಿದ್ಯಾವತಿ ಮಾರುತಿರಾವ್ ಪಾಟೀಲ, ಅಫಖಾನಬೀ ಜಮಾಲಸಾಬ, ಮಾಶ್ರೀತಬೇಗಂ ಶರೀಫಮಿಯ್ನಾ, ಶಬಾನಾಬೇಗಂ ಇಸಾಮಿಯ್ನಾ ಮುಜಾವರ, ಸಿದ್ದಿಕಿ ಅಬ್ಟಾಸ ಖಾನ್, ಕಲಾವತಿ ಶಾಲಿವಾನ, ಚಿತ್ರಾ ಬಸವರಾಜ ಸೈನೂರೆ, ಕವಿತಾ ಸಂಜೀವಕುಮಾರ, ಸುಶೀಲಮ್ಮಾ ಜಗನ್ನಾಥ, ರೇಖಾ ರಾಜಕುಮಾರ, ಜಗದೇವಿ ನಾಗಭೂಷಣ, ಕವಿತಾ ರೇವಪ್ಪಾ ಇವರು ಫಲಾನುಭವಿಗಳು. ಕಚೇರಿಯ ಸಿಬ್ಬಂದಿ ವರ್ಜಮಣಿ ಮತ್ತು ಯಲ್ಲಮ್ಮಾ, ಎಪಿಎಂಸಿ ಸದಸ್ಯರಾದ ಬನಸಿ ಉಪಸ್ಥಿತರಿದ್ದರು.