Advertisement

ಕೋನಮೇಳಕುಂದಾದಲ್ಲಿ ಕಡಲೆ ಖರೀದಿ ಕೇಂದ್ರ ಉದ್ಘಾಟನೆ

04:49 PM Mar 20, 2020 | Naveen |

ಭಾಲ್ಕಿ: ತಾಲೂಕಿನ ಕೋನಮೇಳಕುಂದಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬೆಂಬಲ ಬೆಲೆ ಕಡಲೆ ಖರೀದಿ ಕೇಂದ್ರವನ್ನು ಪಿಕೆಪಿಎಸ್‌ ಅಧ್ಯಕ್ಷ ರಾಜಕುಮಾರ ಬಿರಾದಾರ್‌ ಉದ್ಘಾಟಿಸಿದರು.

Advertisement

ಈ ವೇಳೆ ಮಾತನಾಡಿದ ಅವರು, ಕಡಲೆ ಬೆಳೆಗೆ ಸರಕಾರ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರದ ಮೂಲಕ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತಿದ್ದು, ರೈತರು ಬೆಳೆದ ಕಡಲೆ ಬೆಳೆಯನ್ನು ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡದೇ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಿಕೆಪಿಎಸ್‌ ಉಪಾಧ್ಯಕ್ಷ ಸಲೀಂ ಮುಜಾವರ್‌, ನಿರ್ದೇಶಕರಾದ ಸುವರ್ಣ ಧನರಾಜ, ರಾಜೇಂದ್ರ ದೇವಣೆ, ಸ್ವಾಮಿದಾಸ ಶರಣಪ್ಪ, ರಾಜಕುಮಾರ ಪಾಟೀಲ, ಸೂರ್ಯಕಾಂತ ಬಿರಾದಾರ್‌, ಸುಧಾಕರ ಪಾಟೀಲ, ಶಾರದಾಬಾಯಿ ಗುಂಡಪ್ಪ, ಶಶಿಕಲಾ ಶಿವನಾಥ, ವಿದ್ಯಾವತಿ ವೀರಶೆಟ್ಟಿ, ರಘುನಾಥ ವಿಠಲರಾವ್‌, ಮುಖಂಡ ವೈಜನಾಥ ವಡ್ಡೆ, ಕಾರ್ಯದರ್ಶಿ ಸಂಗ್ರಾಮ್‌, ಮಲ್ಲಿಕಾರ್ಜುನ ಕನಶೆಟ್ಟೆ, ಪ್ರವೀಣ ಬಿರಾದಾರ್‌, ಶಿರೋಮಣಿ ಹಲಗೆ, ಸೂರ್ಯಕಾಂತ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next