Advertisement
ಪಟ್ಟಣದ ಬಾಲಾಜಿ ಮಂದಿರ ಹತ್ತಿರದ ಹನುಮಾನ ದೇವಾಲಯದ ಆವರಣದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಭಾಲ್ಕಿ ಘಟಕ ಆಯೋಜಿಸಿದ್ದ ತಂಬಾಕು ರಹಿತದಿನ ಮತ್ತು ವ್ಯಸನ ಮುಕ್ತ ಅಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರಾಜಯೋಗದ ನಿಯಮಿತ ಅಭ್ಯಾಸದಿಂದ ವ್ಯಸನ ಮುಕ್ತರಾಗಬಹುದು ಎಂದು ಹೇಳಿದರು.
Related Articles
Advertisement
ವ್ಯಸನ ಮುಕ್ತಿಗೆ ಧ್ಯಾನವೇ ಮದ್ದು. ನಿಯಮಿತ ಧ್ಯಾನ ಪದ್ಧತಿ ಅಳವಡಿಸಿಕೊಳ್ಳುವುದರಿಂದ ವ್ಯಸನಮುಕ್ತರಾಗಲು ಸಾಧ್ಯ ಎಂದು ಬೀದರ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹೋದರಿ ಗುರುದೇವಿತಾಯಿ ಹೇಳಿದರು.
ಪಟ್ಟಣದ ಬಾಲಾಜಿ ಮಂದಿರ ಹತ್ತಿರದ ಹನುಮಾನ ದೇವಾಲಯದ ಆವರಣದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಭಾಲ್ಕಿ ಘಟಕ ಆಯೋಜಿಸಿದ್ದ ತಂಬಾಕು ರಹಿತದಿನ ಮತ್ತು ವ್ಯಸನ ಮುಕ್ತ ಅಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರಾಜಯೋಗದ ನಿಯಮಿತ ಅಭ್ಯಾಸದಿಂದ ವ್ಯಸನ ಮುಕ್ತರಾಗಬಹುದು ಎಂದು ಹೇಳಿದರು.
ಆರೋಗ್ಯಾಧಿಕಾರಿ ಡಾ| ಸಂತೋಷ ಕಾಳೆ ಮಾತನಾಡಿ, ಮಾನವನಿಗೆ ವ್ಯಸನಗಳು ವಿವಿಧ ರೂಪಗಳಲ್ಲಿ ಆವರಿಸಕೊಳ್ಳುತ್ತವೆ. ಒಂದು ಸಲ ಚಟಕ್ಕೆ ಬಿದ್ದ ವ್ಯಕ್ತಿ ತನ್ನ ಜೀವನ ನಷ್ಟವಾದರೂ ಆ ಚಟದಿಂದ ಹೊರಬರಲು ಬಯಸುವುದಿಲ್ಲ. ವೈದ್ಯ ಪದ್ಧತಿಯಲ್ಲಿ ಚಟಗಳನ್ನು ಬಿಡಿಸುವ ಹಲವಾರು ರೀತಿಗಳಿವೆ. ಆದರೆ ಇದರಿಂದ ಕೆಲವು ಸಲ ಹಾನಿಯಾಗುವ ಸಂಭವ ಉಂಟು. ಹೀಗಾಗಿ ಅಧ್ಯಾತ್ಮ ಮಾರ್ಗದಲ್ಲಿ ನಡೆದು, ರಾಜಯೋಗ ಪದ್ಧತಿ ಅನುಸರಿಸಿದ ಹಲವಾರು ವ್ಯಕ್ತಿಗಳು ವ್ಯಸನ ಮುಕ್ತರಾಗಿರುವ ಬಗ್ಗೆ ಉದಾಹರಣೆಗಳಿವೆ. ಕಾರಣ ರಾಜಯೋಗ ಧ್ಯಾನದಿಂದ ವ್ಯಸನಮುಕ್ತ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಡಾ| ಉದ್ಧವರಾವ್ ಕನಸೆ ಮಾತನಾಡಿ, ಯಾವ ಪ್ರಾಣಿಯೂ ಮುಟ್ಟದ ತಂಬಾಕು ಮನುಷ್ಯನನ್ನು ಆವರಿಸಿಕೊಂಡಿದೆ. ತಂಬಾಕು ಬೆಳೆದ ಹೊಲಕ್ಕೆ ಬೇಲಿ ಇರುವುದಿಲ್ಲ. ಕಾರಣ ಯಾವ ಪ್ರಾಣಿ, ಪಕ್ಷಿಗಳು ತಂಬಾಕು ಸೇವಿಸುವುದಿಲ್ಲ. ಆದರೆ ಮನುಷ್ಯ ಒಂದು ಸಲ ತಂಬಾಕಿನ ದಾಸನಾದರೆ ಸಾಯುವವರೆಗೆ ಬಿಡುವುದಿಲ್ಲ. ಇದಕ್ಕೆ ಕಾರಣ ಇದರಲ್ಲಿರುವ ನಿಕೋಟಿನ್ ಎನ್ನುವ ವಿಷಪದಾರ್ಥ ಮನುಷ್ಯನ ಗ್ರಂಥಿಯನ್ನು ಆವರಿಸಿಕೊಳ್ಳುತ್ತದೆ ಎಂದು ಹೇಳಿದರು.
ಡಾ| ಸುಪ್ರಿಯಾ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಭ್ಯಾಸಿಗಳಿಂದ ವ್ಯಸನಮುಕ್ತ ಜೀವನ ಜಾಗೃತಿ ಕುರಿತ ನೃತ್ಯ ಮತ್ತು ನಾಟಕ ಪ್ರದರ್ಶಿಸಲಾಯಿತು. ನ್ಯಾಯವಾದಿ ಬಾಬುರಾವ್ ಗಾಮಾ, ಸಿದ್ರಾಮಪ್ಪ ವಂಕೆ, ಸುಭಾಷ ಕಾರಾಮುಂಗೆ, ಸಹೋದರ ಸಿದ್ರಾಮ, ಮಲ್ಲಿಕಾರ್ಜುನ ನುಚ್ಚಾ, ದಿಲೀಪ ಘಂಟೆ ಉಪಸ್ಥಿತರಿದ್ದರು. ಸಹೋದರಿ ರಾಧಾ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು