ಭಾಲ್ಕಿ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮಾತನಾಡಿ, ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿವೆ. ಕಾಂಗ್ರೆಸ್ ನಾಯಕರ ಮೇಲೆ ಉದ್ದೇಶ ಪೂರ್ವಕ ಕೇಂದ್ರದ ತನಿಖಾ ಸಂಸ್ಥೆಗಳ ಮೂಲಕ ವಿಚಾರಣೆ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಇಡಿ, ಸಿಬಿಐ ಮತ್ತು ಐಟಿ ಸಂಸ್ಥೆಗಳನ್ನು ದುರ್ಬಳಕ್ಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಪ್ರಭಾವಿ ಕಾಂಗ್ರೆಸ್ ನಾಯಕರನ್ನು ಮಣಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಡಿ.ಕೆ. ಶಿವಕುಮಾರ ಬಿಜೆಪಿಗೆ ಬರಬೇಕು. ಬಾರದೇ ಇದ್ದರೆ ನಿಮ್ಮ ರಾಜಕೀಯ ಜೀವನ ನಾವು ಮುಗಿಸುತ್ತೇವೆ ಎಂದು ಧಮಕಿ ಹಾಕುತ್ತಿದ್ದಾರೆ. ಆದರೆ, ಡಿಕೆಶಿ ನನಗೆ ಎಷ್ಟೇ ಕಷ್ಟ ಬಂದರು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ಸತ್ತರು ಜೈಲಿನಲ್ಲಿ ಸಾಯುತ್ತೇನೆ ಎಂದು ಹೇಳಿದ್ದಾರೆ. ಡಿ.ಕೆ. ಶಿವಕುಮಾರ ಅವರನ್ನು ಮಣಿಸಲು ಬಂಧಿಸಿ ಜೈಲಿಗೆ ಹಾಕುತ್ತಿರುವುದು ಖಂಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಮುಖಂಡರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಸೀರ್ ಅಹ್ಮದ್, ಯುವ ಕಾಂಗ್ರೆಸ್ ಅಧ್ಯಕ್ಷ ಮಹಾದೇವ ಸ್ವಾಮಿ, ಎಪಿಎಂಸಿ ಅಧ್ಯಕ್ಷ ಬಾಬುರಾವ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ವಿಶಾಲ ಪೂರಿ, ಅನೀಲ ಲೋಖಂಡೆ, ಪ್ರಕಾಶ ಮಾಶಟ್ಟೆ, ಅಶೋಕ ಮಡ್ಡೆ, ಶೇಖರ ವಂಕೆ, ರಮೇಶ ಲೋಖಂಡೆ, ವಿಲಾಸ ಮೋರೆ, ಸುಭಾಷ ಕಾರಾಮುಂಗೆ, ಅನೀಲ ಸುಂಟೆ, ವಿಜಯಕುಮಾರ ರಾಜಭವನ, ಸಂತೋಷ ಬಿ.ಜಿ.ಪಾಟೀಲ, ಶಿವಕುಮಾರ ದೇಶಮುಖ, ಶಾಲಿವಾನ ಪಾಟೀಲ, ಸಂಗಮೇಶ ವಾಲೆ, ಕಪೀಲ ಕಲ್ಯಾಣೆ, ಅಶೋಕ ಬಾವಗೆ, ಮಾಣಿಕಪ್ಪ ರೇಷ್ಮೆ, ಖಾಜಾ ಮಿರ್ದೇ, ಓಂಕಾರ ಮೋರೆ, ನಿಜಾಮೊದ್ದಿನ್, ಕೆ.ಡಿ. ಗಣೇಶ, ಮಹಾದೇವ ಬೇಲುರೆ, ಬಸವರಾಜ ಕುಪ್ಪೆ, ಶಂಕರ ಭೋರಾಳೆ, ವಿಠuಲ ಪಾಟೀಲ, ಲಿಂಗರಾಜ ಖಂಡಾಳೆ, ಧೊಂಡಿಬಾ, ರಾಜಕುಮಾರ ಬೌಧೆ, ಜೈಪಾಲ, ಅಶೊಕ ಗಾಯಕವಾಡ, ಪಂಚಶೀಲ ಪಾಟೀಲ, ಶಿವ ಪೆದ್ದೆ, ಧರ್ಮು ವಂಕೆ, ಶೇಖ್ ಲಿಯಾಖತ್, ಮಹೇಬಬ್ ನಕೀಬ್, ಎಲ್.ಜಿ. ಗುಪ್ತಾ, ರಾಜಕುಮಾರ ಪಾಟೀಲ, ಬಾಲಾಜಿ, ನಿತ್ಯಾನಂದ, ಶಿವ ಮಡಿವಾಳ, ಓಂಕಾರ ಭಾತಂಬ್ರಾ, ಮುಸ್ತಾಕ್, ಟಿಂಕು ರಾಜಭವನ, ಪ್ರಶಾಂತ, ಬುದ್ದಾನಂದ, ಫಯುಮ್ ಚೌದ್ರಿ, ಸಿದ್ರಾಮ ಭೂರೆ, ಸತೀಶ ಬಿರಾದಾರ, ಪಂಢರಿ ಮೇತ್ರೆ, ಜಲೀಲ್ ಚೌದ್ರಿ ಇದ್ದರು.