Advertisement

ಫೈನಲ್‌ ತಲುಪಿದ್ದಕ್ಕೆ ಭಜ್ಜಿ ಸಂತಸ

07:00 AM May 26, 2018 | |

ಚೆನ್ನೈ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ ಫೈನಲ್‌ ತಲುಪಿದ್ದಕ್ಕೆ ಟರ್ಬನೇಟರ್‌ ಖ್ಯಾತಿಯ ಹರ್ಭಜನ್‌ ಸಿಂಗ್‌ ಸಂತೋಷ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ, ಇದು ಭಜ್ಜಿ ಕಾಣುತ್ತಿರುವ 4ನೇ ಐಪಿಎಲ್‌ ಫೈನಲ್‌ ಎಂಬುದು.

Advertisement

ಕಳೆದ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್‌ ತಂಡದಿಂದ ಬಿಡುಗಡೆಗೊಂಡಿದ್ದ ಹರ್ಭಜನ್‌ ಸಿಂಗ್‌ ಚೆನ್ನೈ ತೆಕ್ಕೆಗೆ ಜಾರಿದ್ದರು. ಈವರೆಗಿನ 15 ಪಂದ್ಯಗಳ ಪೈಕಿ 13ರಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ರವಿವಾರದ ಪ್ರಶಸ್ತಿ ಸಮರದಲ್ಲೂ ಆಡುವ ನಿರೀಕ್ಷೆ ಹರ್ಭಜನ್‌ ಅವರದು.

ಈವರೆಗಿನ ಮೂರೂ ಐಪಿಎಲ್‌ ಫೈನಲ್‌ಗ‌ಳಲ್ಲಿ ಹರ್ಭಜನ್‌ ಪ್ರತಿನಿಧಿಸಿದ ತಂಡ ಚಾಂಪಿಯನ್‌ ಆದ್ದರಿಂದ 38ರ ಹರೆಯದ ಈ ಆಫ್ಸ್ಪಿನ್ನರ್‌ “ಲಕ್ಕಿ ಪ್ಲೇಯರ್‌’ ಎಂದೇ ಸಾಬೀತಾಗಿದ್ದಾರೆ. ರವಿವಾರವೂ ಚೆನ್ನೈ ಗೆದ್ದು ಬಂದರೆ ಹರ್ಭಜನ್‌ ಅತೀ ಹೆಚ್ಚು ಚಾಂಪಿಯನ್‌ ತಂಡಗಳನ್ನು ಪ್ರತಿನಿಧಿಸಿದ ರೋಹಿತ್‌ ಶರ್ಮ ಅವರ ದಾಖಲೆಯನ್ನು ಸರಿದೂಗಿಸಲಿದ್ದಾರೆ. ರೋಹಿತ್‌ ಶರ್ಮ 3 ಸಲ ಮುಂಬೈ ಇಂಡಿಯನ್ಸ್‌ಗೆ ಪ್ರಶಸ್ತಿ ತಂದಿತ್ತ ನಾಯಕನೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಒಮ್ಮೆ ಡೆಕ್ಕನ್‌ ಚಾರ್ಜರ್ ಪರ ಆಡುತ್ತಿದ್ದಾಗ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

“ಇದು ನನ್ನ 4ನೇ ಐಪಿಎಲ್‌ ಫೈನಲ್‌. ಇದೊಂದು ಅಮೋಘ ಪ್ರಯಾಣ. ನಾವು ಫೈನಲ್‌ ಮುಟ್ಟಿದ್ದು ಬಹಳ ಖುಷಿ ಕೊಡುವ ಸಂಗತಿ. ನಮ್ಮ ಎದುರಾಳಿ ಯಾರು ಎಂಬುದನ್ನು ಬಹಳ ಕಾತರದಿಂದ ನಿರೀಕ್ಷಿಸುತ್ತಿದ್ದೇವೆ’ ಎಂದು ಹರ್ಭಜನ್‌ ಸಿಂಗ್‌ ಶುಕ್ರವಾರ ಮಾಧ್ಯಮದವರಲ್ಲಿ ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next