Advertisement

ಮಾ.15ಕ್ಕೆ ಭಜರಂಗಿ 2 ಲಿರಿಕಲ್‌ ವಿಡಿಯೋ ರಿಲೀಸ್

08:27 AM Mar 14, 2021 | Team Udayavani |

ಶಿವರಾಜಕುಮಾರ್‌ ಅಭಿನಯದ “ಭಜರಂಗಿ’ ಯಶಸ್ಸು ಕಂಡಿದ್ದು ಗೊತ್ತೇ ಇದೆ. ಅದಾದ ಬಳಿಕ “ಭಜರಂಗಿ 2′ ಚಿತ್ರ ಅನೌನ್ಸ್‌ ಆಗಿದ್ದೂ ಗೊತ್ತು. ಈಗಾಗಲೇ “ಭಜರಂಗಿ 2′ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ಚಿತ್ರದ ಬಿಡುಗಡೆ ದಿನಾಂಕ ಕೂಡಾ ಅಂತಿಮವಾಗಿದೆ.

Advertisement

ಮೇ 14ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಮೊದಲ ಹಂತವಾಗಿ ಚಿತ್ರದ ಮೊದಲ ಲಿರಿಕಲ್‌ ವಿಡಿಯೋ ಮಾರ್ಚ್‌ 15ರಂದು ಸಂಜೆ ಬಿಡುಗಡೆಯಾಗಲಿದೆ. “ಭಜರೇ ಭಜರೇ ಭಜರಂಗಿ…’ ಎಂಬ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಸಿನಿಮಾ ಪ್ರಮೋಶನ್‌ಗೆ ಅಡಿ ಇಡುತ್ತಿದೆ.

ಇದನ್ನೂ ಓದಿ:ನಟ ರೂಪೇಶ್ ಶೆಟ್ಟಿ ಸಂದರ್ಶನ | ಗಮ್ಜಾಲ್-ಕಮಾಲ್

ಎ.ಹರ್ಷ ನಿರ್ದೇಶನದ ಈ ಚಿತ್ರವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. “ಭಜರಂಗಿ’ ಕ®ಡ ‌° ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಪಡೆದಿತ್ತು. ಅದೇ ಯಶಸ್ಸಿನ ಬಳಿಕ ನಿರ್ದೇಶಕ ಹರ್ಷ ಅವರು “ಭಜರಂಗಿ 2′ ಮಾಡುತ್ತಿದ್ದಾರೆ.

ಈಗಾಗಲೇ ಚಿತ್ರದ ಪೋಸ್ಟರ್‌, ಟೀಸರ್‌ ನೋಡಿದವರಿಗೆ ಇಲ್ಲೂ ಹೊಸದೊಂದು ಕಥೆ ಬಿಚ್ಚಿಕೊಳ್ಳುವ ನಿರೀಕ್ಷೆ ಹೆಚ್ಚಿದೆ. ಅದೇನೆ ಇರಲಿ, “ಭಜರಂಗಿ’ ಮೂಲಕ ಶಿವರಾಜಕುಮಾರ್‌ ಹೊಸ ವಿಷಯ ಹೇಳಿದ್ದರು. ಈ ಬಾರಿ “ಭಜರಂಗಿ 2′ ಮೂಲಕವೂ ಹೊಸತನ ಕಟ್ಟಿಕೊಡುತ್ತಾರೆ ಎಂಬ ನಂಬಿಕೆ ಅವರ ಅಭಿಮಾನಿಗಳಲ್ಲಿದೆ.

Advertisement

ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತವಿದೆ. ಸ್ವಾಮಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ದೀಪು ಎಸ್‌.ಕುಮಾರ್‌ ಸಂಕಲನ ಮಾಡಿದರೆ, ರವಿ ಸಂತೆಹೈಕ್ಲು ಕಲಾನಿರ್ದೇಶನವಿದೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ರವಿವರ್ಮ ಅವರ ಸಾಹಸ ನಿರ್ದೇಶನವಿದೆ.

Advertisement

Udayavani is now on Telegram. Click here to join our channel and stay updated with the latest news.

Next