Advertisement

ಭಜನಾ ಸಂಕೀರ್ತನಾ ದಶಮಾನೋತ್ಸವ ಕಾರ್ಯಕ್ರಮ

06:00 AM Aug 07, 2017 | Harsha Rao |

ಕಾಸರಗೋಡು: ರಾಮಾಯಣ ಮಾಸಾಚರಣೆಯ ಅಂಗವಾಗಿ ಗುಡ್ಡೆ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ ಕೂಡ್ಲು ಇದರ ನೇತೃತ್ವದಲ್ಲಿ ನಡೆಯುವ ಭಜನಾ ಸಂಕೀರ್ತನೆಯ ದಶಮಾನೋತ್ಸವದ ಮನೆ ಮನೆ ಸರಣಿ ಕಾರ್ಯಕ್ರಮ ಯಶಸ್ವಿಯಾಗಿ ಮುಂದುವರಿಯುತ್ತಿದೆ.

Advertisement

ಕಳೆದ ಒಂಬತ್ತು ವರ್ಷಗಳಿಂದ ನಿರಂತರವಾಗಿ ಭಜನಾ ಸಂಕೀರ್ತನಾ ಕಾರ್ಯಕ್ರಮ ನಡೆಯುತ್ತಿದ್ದು ಪ್ರಸ್ತುತ ಹತ್ತನೇ ವರ್ಷದ ಸಂಭ್ರಮದಲ್ಲಿದೆ.

ಜುಲೈ 16ರಂದು ಕೋಟೆ ಶ್ರೀ ಆಂಜನೇಯ ದೇವಸ್ಥಾನದಿಂದ ಆರಂಭಗೊಂಡ ಅಭಿಯಾನ ಪ್ರತಿದಿನ ಸಂಜೆ 6ರಿಂದ ರಾತ್ರಿ ತನಕ ಮನೆ ಮನೆಗಳಲ್ಲಿ ಭಜನಾ ಸಂಕೀರ್ತನೆಯನ್ನು ನಡೆಸಲಾಗುತ್ತಿದೆ. 8ರಿಂದ 10 ಮಂದಿಯ ತಂಡಕ್ಕೆ ಮನೆ ಮಂದಿ ಪ್ರೀತಿಯಿಂದ ಸ್ವಾಗತಿಸಿ ಆತಿಥ್ಯವನ್ನು ನೀಡುತ್ತಿದ್ದಾರೆ. ಅಭಿಯಾನದ ಸಮಾರೋಪ ಸಮಾರಂಭ ಆ. 16ರಂದು ಸಂಜೆ 6 ಗಂಟೆಗೆ ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ.

ತಬಲದಲ್ಲಿ  ಶ್ರೀಧರ ರೈ, ಹಾರ್ಮೋ ನಿಯಂನಲ್ಲಿ ಕೆ.ಟಿ. ಬಾಬು ಸಹಕರಿಸು ತ್ತಿದ್ದಾರೆ. ಗಡಿನಾಡ ಕೋಗಿಲೆ ಖ್ಯಾತಿಯ ಗಾಯಕ ವಿಠಲ ಶೆಟ್ಟಿ ಸಕ್ರಿಯವಾಗಿ ಅಭಿಯಾನದಲ್ಲಿ ಭಾಗವಹಿಸುವ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next