Advertisement

ಧಾರ್ಮಿಕ ಚಿಂತನೆಯಿಂದ ಸಾಮಾಜಿಕ ಸಮಾನತೆ: ಡಾ|ಹೆಗ್ಗಡೆ

02:10 AM Sep 20, 2019 | Team Udayavani |

ಬೆಳ್ತಂಗಡಿ: ಮನೆಮನೆ ಯಲ್ಲಿ ಭಜನೆ, ಊರಿನ ದೇವಸ್ಥಾನಗಳ ಅಭಿವೃದ್ಧಿಗೆ ಭಜನ ಮಂಡಳಿಗಳು ಶ್ರಮಿಸಬೇಕಿದ್ದು, ಮಂಡಳಿಗಳು ಸಮಾನತೆಯನ್ನು ಸಾರುವ ಪಾಠಶಾಲೆಗಳಾ ಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು. ಧರ್ಮಸ್ಥಳದ ಶ್ರೀ ಮಂಜುನಾಥೇ ಶ್ವರ ಭಜನ ಪರಿಷತ್‌ನ ಭಜನ ತರಬೇತಿ ಶಿಬಿರ  - ಸಾಂಸ್ಕೃತಿಕ ಸಂವರ್ಧನ ಕಾರ್ಯಾಗಾರದಲ್ಲಿ ಅವರು ಮಾರ್ಗದರ್ಶನ ನೀಡಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ ಸಮಾಜದ ಅಭಿವೃದ್ಧಿಗೆ, ಪರಿವರ್ತ ನೆಗೆ ಅನುದಾನ, ಸಹಕಾರದ ಮೂಲಕ ನಾನಾ ಕೊಡುಗೆ ನೀಡಿದೆ. ಧರ್ಮೋತ್ಥಾನ ಟ್ರಸ್ಟ್‌ನ ಮೂಲಕ 200 ಹಳೆಯ ದೇವಸ್ಥಾನಗಳ ಜೀರ್ಣೋದ್ಧಾರ ನಡೆದಿದೆ. ಭಜನ ಮಂಡಳಿಗಳ ಆರೋಗ್ಯ ರಕ್ಷಣೆ ಮಾಡಬೇಕಾಗಿದೆ. ಪರಿಷತ್‌ನ ಮೂಲಕ ಗ್ರಾಮ ಸುಭಿಕ್ಷೆ, ಬೌದ್ಧಿಕ ಪರಿವರ್ತನೆಯಾಗಬೇಕು ಎಂದರು. ಭಜನಾ ತರಬೇತಿ ಕಮ್ಮಟ ನಡೆಯುವ ಸಂದರ್ಭ ಪ್ರತಿ ವರ್ಷ ಭಜನ ಪರಿಷತ್‌ನ ವಾರ್ಷಿಕ ಸಭೆಯನ್ನು ಸಂಘ ಟಿಸುವಂತೆ ಅವರು ಸೂಚಿಸಿದರು.

ಹೇಮಾವತಿ ವೀ. ಹೆಗ್ಗಡೆ ಮಾತ ನಾಡಿ, ಸ್ವಸ್ಥ ಸಮಾಜದ ನಿರ್ಮಾಣ ಕೆಲಸ ಪರಿಷತ್‌ನ ಮೂಲಕ ಆಗ ಬೇಕಾಗಿದೆ. ಪರಿಷತ್‌ ಎಂಬ ರಥ ಎಳೆದೊಯ್ಯುವ ಜವಾಬ್ದಾರಿ
ಪರಿಷತ್‌ ಪದಾಧಿಕಾರಿಗಳದು ಎಂದು ಹೇಳಿದರು.

ಭಜನೆಯು ಸಮಾಜಿಕ ಅಸಮಾ ನತೆಯನ್ನು ಹೋಗಲಾಡಿಸಿದೆ ಎಂದು ಮಾಣಿಲ ಶ್ರೀ ಧಾಮದ ಶ್ರೀ ಮೋಹನ ದಾಸ ಸ್ವಾಮೀಜಿ ಹೇಳಿದರು.

ಭಜನ ಪರಿಷತ್‌ನಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಶಿವಮೊಗ್ಗದ ತೀರ್ಥ ಹಳ್ಳಿ, ಚಿಕ್ಕಮಗಳೂರಿನ ಕೊಪ್ಪ, ಶೃಂಗೇರಿ ತಾಲೂಕಿನ ಒಟ್ಟು 14 ಭಜನ
ಮಂಡಳಿಗಳ ಅಧ್ಯಕ್ಷರು, ಪದಾಧಿಕಾರಿ ಗಳು ಭಾಗವಹಿಸಿದ್ದರು.

Advertisement

ಭಜನ ಪರಿಷತ್‌ನ ಅಧ್ಯಕ್ಷರಾದ ಬಾಲಕೃಷ್ಣ ಪಂಜ, ಭಜನ ತರಬೇತಿ ಶಿಬಿರದ ಸದಸ್ಯರು ಉಪಸ್ಥಿತರಿದ್ದರು. ರಾಜ್ಯ ಪರಿಷತ್‌ನ ಕಾರ್ಯದರ್ಶಿ ಬಿ. ಜಯರಾಮ ನೆಲ್ಲಿತ್ತಾಯ ಕಾರ್ಯಕ್ರಮ ಸಂಘಟಿಸಿದರು. ಭಜನ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್‌ ಅವರು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next