Advertisement
ಎ. 2ರಿಂದ ಆರಂಭಗೊಂಡ ಈ ಮನೆಮನೆ ಭಜನೆ-ಗ್ರಾಮ ಭಜನೆಯು ಎ. 23ರ ವರೆಗೆ ನಡೆಯಲಿದೆ. ನಾರಾಯಣಿ, ಶಾಂಭವಿ, ಭೈರವಿ, ಪಾರ್ವತಿ, ಕಾತ್ಯಾಯಿನಿ ಎಂಬ ಐದು ತಂಡಗಳು ದಿನಕ್ಕೆ ಒಟ್ಟು 75 ಮನೆಗಳನ್ನು ಸಂದರ್ಶಿಸಿ ಭಜನೆಗಳನ್ನು ಹಾಡುತ್ತಿವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಪ್ರತೀ ತಂಡದಲ್ಲಿ 55ರಿಂದ 80 ವರ್ಷದವರೆಗಿನ ಭಜನ ಕಲಾವಿದರು ಇದ್ದಾರೆ. ಒಟ್ಟು 2,000 ಮನೆಗಳ ಗುರಿ ಇದ್ದು ಶುಕ್ರವಾರದವರೆಗೆ ಅರ್ಧಾಂಶದಷ್ಟು ಅಂದರೆ 1,084 ಮನೆಗಳಲ್ಲಿ ಭಜನ ಸೇವೆ ನಡೆದಿದೆ. ಮನೆಗಳಲ್ಲಿ ಈ ಕಾರ್ಯಕ್ರಮಕ್ಕೆ ತುಂಬು ಉತ್ಸಾಹ ಕಂಡುಬಂದಿದೆ. ಉಡಿ ತುಂಬುವುದು, ಹೂವು ಸಮರ್ಪಣೆ, ಬಟ್ಟೆ ವಿತರಣೆ, ಸಾಂಪ್ರದಾಯಿಕ ತಿನಿಸು ವಿತರಣೆ ನಡೆಯುತ್ತಿದೆ. ಭಕ್ತಿಭಾವದಿಂದ ಭಜನ ತಂಡದವರನ್ನು ಮನೆಯವರು ಸ್ವಾಗತಿಸುತ್ತಿದ್ದಾರೆ. ಒಟ್ಟಾರೆ ಭಜನ ತಂಡ ದವರು ಮನೆಗಳಿಗೆ ಭೇಟಿ ನೀಡಿ ಹಾಡುವುದು ಹಬ್ಬದ ವಾತಾವರಣ ಸೃಷ್ಟಿಸಿದೆ.
Related Articles
Advertisement
ಗ್ರಾಮ ಭಜನ ಮಂಗಲೋತ್ಸವದ ಪೋಸ್ಟರ್‌ನ್ನು ಶನಿವಾರ ಬಿಗ್ ಬಾಸ್ ಪ್ರಸಿದ್ಧಿಯ ಹೆಸರಾಂತ ಬೈಕ್ ರೇಸರ್, ಕಡಿಯಾಳಿ ದೇವಸ್ಥಾನದ ಅರ್ಚಕ ಕುಟುಂಬದ ಸದಸ್ಯ ಅರವಿಂದ ಕೆ.ಪಿ. ಬಿಡುಗಡೆಗೊಳಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್ ಹೆಗ್ಡೆ, ಪ್ರ.ಕಾರ್ಯ ದರ್ಶಿ ಕೆ.ರಾಘವೇಂದ್ರ ಕಿಣಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ|ರವಿರಾಜ ಆಚಾರ್ಯ, ಭಜನ ತಂಡಗಳ ಮುಖ್ಯಸ್ಥರು ಉಪಸ್ಥಿತರಿದ್ದರು.