Advertisement

ಭೈರತಿ ಬಸವರಾಜ್ ಪ್ರಕರಣ; ಕಾಂಗ್ರೆಸ್ ನವರ ಷಡ್ಯಂತ್ರ: ಡಾ. ಸುಧಾಕರ್

03:22 PM Dec 17, 2021 | Team Udayavani |

ಬೆಂಗಳೂರು : ಸಚಿವ ಭೈರತಿ ಬಸವರಾಜ್ ಮೇಲೆ ಹಗರಣ ಆರೋಪ  ಕಾಂಗ್ರೆಸ್ ನವರ ಷಡ್ಯಂತ್ರ ಎಂದು ಸಚಿವ ಡಾ. ಸುಧಾಕರ್ ಶುಕ್ರವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಸಿದ್ದರಾಮಯ್ಯ ಜೊತೆ ಸಂಧಾನ ಮಾಡಲು ಹೋದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸದನದಲ್ಲಿ ನಿರ್ಣಯ ಆಗಿತ್ತು, ಎಲ್ಲರೂ ಒಪ್ಪಿಕೊಳ್ಳಬೇಕು. 13 ವರ್ಷದ ಹಿಂದೆ ಟ್ರಯಲ್ ಕೇಸ್‌ನಲ್ಲಿ, ಭೈರತಿ ಪರವಾಗಿ ಬಂದಿತ್ತು.ಹೈಕೋರ್ಟ್ ನಲ್ಲಿ ಬಾಕಿ ಉಳಿದು ಕೊಂಡಿತ್ತು ಚುನಾಯಿತ ಪ್ರತಿನಿಧಿಗಳ ಕೋರ್ಟಿಗೆ ಕೇಸ್ ಆಗಿದೆ.ಕಾಗ್ನಿಜಂಟ್ ಹಾಕಿ ಚರ್ಚೆಗೆ ಅವಕಾಶ ನೀಡಬೇಕೆಂದು ವಿಪಕ್ಷ ನಾಯಕರು ಪ್ರಸ್ತಾಪಿಸಿದ್ದರು.ಹಾಗೆ ಮಾಡಲು ಬರುವುದಿಲ್ಲ.ಇಲ್ಲಿ ಕಾಂಗ್ರೆಸ್ ನವರು ಷಡ್ಯಂತ್ರ ಮಾಡುತ್ತಿರಬಹುದು ಎಂದರು.

ನಕಲಿ ದಾಖಲೆ ಸೃಷ್ಟಿಸಿ ಜಮೀನು ವರ್ಗಾವಣೆ ಮಾಡಿರುವ ಆರೋಪ ಹೊತ್ತಿರುವ ಸಚಿವ ಭೈರತಿ ಬಸವರಾಜ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕಾಂಗ್ರೆಸ್ ಹೋರಾಟ ಆರಂಭಿಸಿದೆ.

ರಮೇಶ್ ಕುಮಾರ್ ಮುಖವಾಡ
ಎರಡು ಬಾರಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ನಿನ್ನೆ ಸದನದಲ್ಲಿ ಆಡಿದ ಮಾತು ಸರಿಯಲ್ಲ. ಅವರು ಮೌಲ್ಯಗಳಿಗೆ ರಾಯಬಾರಿ ಆಗಿದ್ದವರು. ನನಗೆ ವೈಯಕ್ತಿಕ ದ್ವೇಶ ಇಲ್ಲ.ಅವರು ಮುಖವಾಡ ಹಾಕಿಕೊಂಡು ಬದುಕುತ್ತಿರುವುದರಲ್ಲಿ ಅನುಮಾನವಿಲ್ಲ ಎಂದರು.

ಒಮಿಕ್ರಾನ್ ಬಗ್ಗೆ ಆತಂಕ ಇಲ್ಲ, ಎಚ್ಚರಿಕೆ ಬೇಕು
ಒಮಿಕ್ರಾನ್ ಬಗ್ಗೆ ಆತಂಕ ಇಲ್ಲ.ರಾಜ್ಯದಲ್ಲಿ 8 ಜನರಿಗೆ ಓಮಿಕ್ರಾನ್ ಪತ್ತೆಯಾಗಿದೆ. ಪರೀಕ್ಷೆ ಮಾಡಿ, ಅವರ ಮೂಲಕ ಬೇರೆಯವರಿಗೆ ಹರಡದಂತೆ ಕ್ರಮ ವಹಿಸಬೇಕಿದೆ. ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಲಿದ್ದೇವೆ. ಸಿಎಂ ಜೊತೆ ಕೂಡ ಚರ್ಚೆ ಮಾಡಲಿದ್ದೇವೆ. ಯಾವ ಕ್ರಮ ತೆಗೆದುಕೊಳ್ಳ ಬೇಕು ಅಂತ ಸಲಹೆ ಪಡೆಯುತ್ತೇವೆ.ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿದೆ. ಜನ ಎಚ್ಚರಿಕೆ ಇಂದ ಇರಬೇಕು ಎಂದು ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next