Advertisement

ಕಳೆಗುಂದಿದ ಬೈಲವಾಡ: ಸರಿದ ಕಾರ್ಮೋಡ

06:52 PM Feb 18, 2021 | Team Udayavani |

ಬೈಲಹೊಂಗಲ: ತಾಲೂಕಿನ ಬೈಲವಾಡದಲ್ಲಿ ಫೆ.20 ರಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮವನ್ನು ಮದುವಣಗಿತ್ತಿಯಂತೆ ಶೃಂಗರಿಸಲಾಗುತ್ತಿದೆ.

Advertisement

ಗ್ರಾಮದ ಕನ್ನಡ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ, ಸರಕಾರಿ ಆಯುರ್ವೆದಿಕ್‌ ಆಸ್ಪತ್ರೆ, ನೀರಿನ ಟ್ಯಾಂಕ್‌ಗಳು, ಸಾರ್ವಜನಿಕ ಸ್ಥಳಗಳಿಗೆ ಬಣ್ಣ ಬಳಿಯಲಾಗುತ್ತಿದೆ. ಗ್ರಾಮವಾಸ್ತವ್ಯಕ್ಕಾಗಿ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಬರುವುದರಿಂದ ಗ್ರಾಮದಲ್ಲಿರುವ ಸಮಸ್ಯೆಗಳ ಪಟ್ಟಿಯನ್ನು ತಯಾರು ಮಾಡುವಲ್ಲಿ ನಾಗರಿಕರು ನಿರತರಾಗಿ ಅಲ್ಲಲ್ಲಿ ಚರ್ಚೆ ಗಿಳಿದಿರುವುದು ಕಂಡು ಬರುತ್ತದೆ.

ಗ್ರಾ.ಪಂ ಕಚೇರಿ, ನೀರಿನ ಟ್ಯಾಂಕ್‌, ಪಂಪ ಹೌಸ್‌ಗಳಿಗೆ ಬಣ್ಣ ಬಳಿಯುವುದಲ್ಲದೇ ಗ್ರಾಮದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಗ್ರಾಮ ಸ್ವತ್ಛತೆಯಲ್ಲದೇ ಗ್ರಾಮ ವಾಸ್ತವ್ಯದ ಸಿದ್ಧತೆ ಭರದಿಂದ ನಡೆದಿದೆ ಎಂದು ಪಿಡಿಓ ಎಸ್‌.ಜಿ. ಪೂಜೇರಿ ತಿಳಿಸಿದರು.

ವಿವಿಧ ಇಲಾಖೆ ಅಧಿಕಾರಿಗಳು ನಾಗರಿಕರ ಪ್ರಶ್ನೆಗೆ ಉತ್ತರಿಸಲು ಪೂರಕ ದಾಖಲೆಗಳನ್ನು  ಸಿದ್ಧಪಡಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಒಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಗ್ರಾಮವಲ್ಲದೇ ಜಿಲ್ಲೆಯ ಜನರಲ್ಲೂ ಕುತೂಹಲ ಮೂಡಿಸಿದೆ. ಜಿಲ್ಲಾಧಿ ಕಾರಿಗಳ ಸ್ವಾಗತಕ್ಕೆ ಜನ ಕಾತರದಿಂದ ಎದುರು ನೋಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next