Advertisement

ಸಂಕಷ್ಟ ಭಗವತ್‌ ದರ್ಶನಕ್ಕೆ ಸಹಕಾರಿ: ಶಂನಾಡಿಗ

02:14 PM Mar 09, 2017 | Team Udayavani |

ಕುಂಬಳೆ: ಸುಖ ಮತ್ತು ದುಃಖಗಳು ಮಾನವ  ಜೀವನದ ಅವಿಭಾಜ್ಯ ಅಂಗಗಳು.  ಮನುಷ್ಯ ಸುಖವನ್ನು ಮಾತ್ರವೇ ಬಯಸುತ್ತಾನೆ. ಆದರೆ ಸಂಕಷ್ಟಗಳು ಬಂದಾಗ ಬೇಡವೆನಿಸುತ್ತದೆ. ಕಷ್ಟಗಳೇ ಮನುಷ್ಯನಿಗೆ ಯೋಗ್ಯ ಸಂಸ್ಕಾರಕೊಟ್ಟು ಅವನನ್ನು ಪರಿಶುದ್ದಗೊಳಿಸಿ ಭಗವತ್‌ ದರ್ಶನಕ್ಕೆ ಸಹಕರಿಸುತ್ತವೆ ಎಂದು ಹರಿದಾಸ ಕಲಾರತ್ನ, ನ್ಯಾಯವಾದಿ ಶಂನಾಡಿಗ ಕುಂಬ್ಳೆ ಹೇಳಿದರು.

Advertisement

ಅವರು ಬೆದ್ರಡ್ಕ ಶ್ರೀಪೂಮಾಣಿ ಕಿನ್ನಿಮಾಣಿ ದೆ„ವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವದಲ್ಲಿ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಭಾಷಣ ಮಾಡಿದರು. ಕಷ್ಟ ಬಂದಾಗ ಮನುಷ್ಯನ ಆತ್ಮಮತಿ ಮೇಲೆದ್ದು ಬರುತ್ತದೆ. ಒಳಿತು ಕೆಡುಕುಗಳ ಅರಿವಾಗುತ್ತದೆ. ಜೀವನದ ಸತ್ಯ ತಿಳಿದು ಬರುತ್ತದೆ. ಆಗ ನಮ್ಮ ಮನಸ್ಸು ತಿಳಿಯಾಗಿ ದೇವರ ಸಾಕ್ಷಾತ್ಕಾರ ಸುಲಭವಾಗುತ್ತದೆ. ನಮ್ಮ ಪುರಾಣಗಳನ್ನು ಗಮನಿ ಸಿದರೆ ಸುಖ ಪಟ್ಟವರಿಗೆ ಎಂದೂ ದೇವರು ಸಿಕ್ಕಿದ್ದಿಲ್ಲ ಬದಲಾಗಿ ಯಾರು ಜೀವನದಲ್ಲಿ ಅತ್ಯಂತ  ಸಂಕಟ ಅನುಭವಿಸಿದ್ದಾರೋ ಅವರಿಗೆ ಮಾತ್ರ ದೇವರ ಅನುಗ್ರಹ ಲಭಿಸಿದೆ ಎಂದವರು ಹೇಳಿದರು.

ಸಭೆಯ  ಅಧ್ಯಕ್ಷತೆಯನ್ನು ಶ್ರೀಕ್ಷೇತ್ರದ ಮೊಕ್ತೇಸರ ಸೀತಾರಾಮ ಬಲ್ಲಾಳ್‌ ಚಿಪ್ಪಾರು ವಹಿಸಿದ್ದರು. ಮೋರಾ ಶ್ರೀ ಐವರ್‌ ಭಗವತೀ ಕ್ಷೇತ್ರದ ಅಧ್ಯಕ್ಷ ಜನಾರ್ದನನ್‌, ಉಮೇಶ   ಕೆ. ಕಡಪ್ಪರ, ಶುಭಾಸಂಶನೆ  ನಡೆಸಿದರು. 

ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಮಂಜುನಾಥ ರೈ ಕೋಟೆಕುಂಜ, ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೋಟೆಕುಂಜ ರವೀಂದ್ರ ಆಳ್ವ ಕಂಬಾರು, ಮಹಿಳಾ ಸಮಿತಿ ಅಧ್ಯಕ್ಷೆ ವಿದ್ಯಾ ಬಾಬು ಬೆದ್ರಡ್ಕ ಉಪಸ್ಥಿತರಿದ್ದರು.  ಮಹಿಳಾ ಸಮಿತಿಯ  ವಿದ್ಯಾಲಕ್ಷ್ಮೀ ಹೇರಳ ಉಡುಪ ಸ್ವಾಗತಿಸಿ,  ಗೀತಾ ಬಾಲಕೃಷ್ಣ ಬೆದ್ರಡ್ಕ ವಂದಿಸಿದರು.  ಭಾಗ್ಯಶ್ರೀ ಎಂ. ಯು. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಶ್ರದ್ಧಾ, ರಕ್ಷಿತಾ ಡಿ. ಪ್ರಾರ್ಥಿಸಿದರು.

ಮಾ. 8ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, ಭಜನೆ. ಅಪರಾಹ್ನ ಸರಸ್ವತೀ ಸಂಗೀತ ವಿದ್ಯಾಲಯದ ಜಯಭಾರತೀ ಪ್ರಕಾಶ ಕಾವು ಮಠ ಚೌಕಿ ಇವರ ಶಿಷ್ಯರಿಂದ ಸಂಗೀತಾರ್ಚನೆ ನಡೆಯಿತು., ಸಂಜೆ ಧಾರ್ಮಿಕ ಸಭೆ ನಡೆಯಿತು. ರಾತ್ರಿ ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯವೃಂದದಿಂದ ನೃತ್ಯ ಸಂಗಮ ನಾಟೊಲ್ಲಾಸಂ ಮನರಂಜಿಸಿತು.

Advertisement

ಮಾ. 9ರಂದು ಬೆಳಗ್ಗೆ 10.58ರ ವೃಷಭ ಲಗ್ನದಲ್ಲಿ ಶ್ರೀ ಪೂಮಾಣಿ ಕಿನ್ನಿಮಾಣಿ ದೆ„ವಗಳ ನೂತನ ಬಿಂಬ ಪ್ರತಿಷ್ಠೆ, ಶ್ರೀ ಬೀರಣ್ಣಾಳ್ವ ದೆ„ವದ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ.  ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಸಾನ್ನಿಧ್ಯ ವಹಿಸುವರು. ವಾದ್ಯ ಸಂಗೀತ ಸೇವೆಯನ್ನು ಅನಂತ ಪದ್ಮನಾಭ ಐಲ, ಅರುಣ್‌ ಕುಮಾರ್‌ ತ್ರಿಕ್ಕನ್ನಾಡು, ಬಾಲಕೃಷ್ಣ ಬೆದ್ರಡ್ಕ ನಡೆಸಲಿರುವರು. ಅಪರಾಹ್ನ ಗಂಟೆ 3.30ಕ್ಕೆ ನಡೆಯುವ ಬ್ರಹ್ಮಕಲಶೋತ್ಸವ ಸಮಾರೋಪ ಸಮಾರಂಭವನ್ನು ಶ್ರೀ ದಾನಮಾರ್ತಾಂಡ ವರ್ಮ ಯಾನೆ ರಾಮಂತರಸು ಮಾಯಿಪ್ಪಾಡಿ ಅರಮನೆ ಅವರು ಉದ್ಘಾಟಿಸುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅನುಗ್ರಹ ಭಾಷಣ ಮಾಡಲಿರುವರು. ವಿದ್ವಾನ್‌  ಪಂಜ ಭಾಸ್ಕರ ಭಟ್‌, ಮಹೋಪಾಧ್ಯಾಯರು, ಮುಕ್ಕ ಸುರತ್ಕಲ್‌ ಧಾರ್ಮಿಕ ಭಾಷಣ ಮಾಡಲಿರುವರು. 

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೋಟೆಕುಂಜ ರವೀಂದ್ರ ಆಳ್ವ ಕಂಬಾರು ವಹಿಸುವರು. ದ.ಕ.ಲೋಕ ಸಭಾ ಸದಸ್ಯ ನಳಿನ್‌ ಕುಮಾರ್‌ ಕಟೀಲ್‌ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಧೂರು ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು.ಟಿ. ಆಳ್ವ, ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಮಂಜುನಾಥ ರೈ ಕೋಟೆಕುಂಜ, ಕೋಡಿಂಗಾರು ದಾಸಣ್ಣ ಆಳ್ವ ಕುಳೂರು ಬೀಡು, ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮೇಶ ಕಾರಂತ ಬೆದ್ರಡ್ಕ, ಶ್ರೀ ಕ್ಷೇತ್ರದ ಮೊಕ್ತೇಸರ ಅನಂತ ವಿಷ್ಣು ಹೇರಳ, ಉಡುವ, ಸೀತಾರಾಮ ಬಲ್ಲಾಳ್‌, ಚಿಪ್ಪಾರು, ಶೀನ ಶೆಟ್ಟಿ ಪಂಜದ ಗುತು ¤ಸಮಾರಂಭದಲ್ಲಿ ಉಪಸ್ಥಿತರಿರುವರು. ಸಮಾರಂಭದಲ್ಲಿ  ದಾನಿಗಳಿಗೆ, ಸೇವಾಕರ್ತರಿಗೆ, ಸೇವಾನಿರತರಿಗೆ ಅಭಿನಂದನೆ ನಡೆಯಲಿದೆ. ಸಂಜೆ ವೀರ ತಂಬಿಲ ಕಾರ್ಯಕ್ರಮದೊಂದಿಗೆ ಸಂಪನ್ನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next