Advertisement

ಮೋದಿ ಸಂಪುಟ ಪುನರ್ ರಚನೆ : ಭಗವಂತ ಗುರುಬಸಪ್ಪ ಖೂಬಾ ಪ್ರಮಾಣ ವಚನ ಸ್ವೀಕಾರ

07:56 PM Jul 07, 2021 | Team Udayavani |

ನವ ದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಚಿವ ಸಂಪುಟಕ್ಕೆ ಸಚಿವರಾಗಿ ಇಂದು 43 ಮಂದಿ ನಾಯಕರು ಆಯ್ಕೆಯಾಗಿದ್ದು, ಆ ಪೈಕಿ ರಾಜ್ಯದ ಬಿಜೆಪಿ ನಾಯಕ ಭಗವಂತ್ ಖೂಬಾ ಕೂಡ ಒಬ್ಬರು. ಭಗವಂತ್ ಖೂಬಾ ಅವರು ಇಂದು(ಬುಧವಾರ, ಜುಲೈ 7) ಮೋದಿ ನೇತೃತ್ವದ ನೂತನ ಸಚಿವ ಸಂಪುಟಕ್ಕೆ  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೋಧಿಸಿದ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿ ಸೇರ್ಪಡೆಗೊಂಡಿದ್ದಾರೆ.

Advertisement

ಭಗವಂತ ಗುರುಬಸಪ್ಪ ಖೂಬಾ ರಾಜ್ಯದ ಸಕ್ರಿಯ ರಾಜಕಾರಣಿ. ಬೀದರ್ ಲೋಕಸಭಾ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ಖೂಬಾ, ವೃತ್ತಿಯಲ್ಲಿ ಇಂಜಿನೀಯರ್. ಆರಂಭಿಕ ದಿನಗಳಿಂದ ಭಾರತೀಯ ಜನತಾ ಪಕ್ಷದೊಂದಿಗೆ ತನ್ನನ್ನು ತಾನು ಗುರುತಿಸಿಕೊಂಡು ಬಂದ ಅವರು ಇಂದು ಮೋದಿ ಸಂಪುಟಕ್ಕೆ ಸೇರಿದ್ದಾರೆ.

ಇದನ್ನೂ ಓದಿ : ಮೋದಿ ಸಂಪುಟ ಪುನರ್ ರಚನೆ : ಚಿತ್ರದುರ್ಗ ಸಂಸದ ಎ. ನಾರಾಯಣ ಸ್ವಾಮಿ ಪ್ರಮಾಣ ವಚನ ಸ್ವೀಕಾರ   

ಭಗವಂತ ಗುರುಬಸಪ್ಪ ಖೂಬಾ ಅವರ ರಾಜಕೀಯ ನಡೆ

2014 ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರನ್ನು ಒಂದುವರೆ ಲಕ್ಷ ಮತಗಳ ಅಂತರದಿಂದ ಸೋಲಿಸಿದ ಖೂಬಾ ಸಂಸದರಾಗಿ ಆಯ್ಕೆಯಾಗಿದ್ದರು. 2014 ಸಪ್ಟೆಂಬರ್ 15 ರಲ್ಲಿ ಲೋಕಸಭಾ ಸದಸ್ಯರಿಗೆ ಕಂಪ್ಯೂಟರ್ ನೀಡಲು ಪರಾಮರ್ಶೆ ಸಮಿತಿಯ ಸದಸ್ಯರಾಗಿದ್ದರು.

Advertisement

2016 ರ ಅಕ್ಟೋಬರ್ 19 ರಂದು ಆಹಾರ, ಗ್ರಾಹಕ ವ್ಯವಹಾರ ಹಾಗೂ ಪಡಿತರ ಸರಬರಾಜು ಸ್ಥಾಯಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇನ್ನು, ಸಪ್ಟೆಂಬರ್ 15, 2014 ರಲ್ಲಿ ರೈಲ್ವೇ ಖಾತೆ ಸಲಹಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ ಅವರು ಏಪ್ರಿಲ್ 3, 2018 ರಲ್ಲಿ  ಯೋಜನೆ ಹಾಗೂ ಆರ್ಕಿಟೆಕ್ಚರ್ ಶಿಕ್ಷಣ ಪರಿಷತ್ತಿನ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಇದನ್ನೂ ಓದಿ :   ಮೋದಿ ಸಂಪುಟ ಪುನರ್ ರಚನೆ : ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕಂರಂದ್ಲಾಜೆ ಪ್ರಮಾಣ ವಚನ

Advertisement

Udayavani is now on Telegram. Click here to join our channel and stay updated with the latest news.

Next