Advertisement

ಕೇಜ್ರಿವಾಲ್‌ ಕ್ಷಮೆ: ಪಂಜಾಬ್‌ ಆಪ್‌ ಮುಖ್ಯಸ್ಥ ರಾಜೀನಾಮೆ

11:57 AM Mar 16, 2018 | Team Udayavani |

ಹೊಸದಿಲ್ಲಿ : ಮಾನಹಾನಿ ದಾವೆಯಲ್ಲಿ ಪಂಜಾಬ್‌ ಮಾಜಿ ಕಂದಾಯ ಸಚಿವ ಬಿಕ್ರಂ ಸಿಂಗ್‌ ಮಜೀತಿಯ ಅವರಲ್ಲಿ  ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ಆಮ್‌ ಆದ್ಮಿ ಪಕ್ಷದ ಪಂಜಾಬ್‌ ಘಟಕದ ಅಧ್ಯಕ್ಷ ಭಗವಂತ ಮಾನ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

Advertisement

ತಮ್ಮ ರಾಜೀನಾಮೆಯನ್ನು ಟ್ವಿಟರ್‌ ಮೂಲಕ ದೃಢೀಕರಿಸಿರುವ ಭಗವಂತ ಮಾನ್‌, “ಆಪ್‌ ಪಂಜಾಬ್‌ ಅಧ್ಯಕ್ಷ ಪದಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಪಂಜಾಬಿನ ಆಮ್‌ ಆದ್ಮಿ ಆಗಿರುವ ನಾನು ರಾಜ್ಯದಲ್ಲಿನ ಡ್ರಗ್‌ ಮಾಫಿಯ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಬರೆದಿದ್ದಾರೆ. 

ಪಂಜಾಬ್‌ ಮಾಜಿ ಕಂದಾಯ ಸಚಿವರು ತಮ್ಮ ವಿರುದ್ಧ ಹೂಡಿದ್ದ ಮಾನನಷ್ಟ ದಾವೆಯನ್ನು ಅರವಿಂದ ಕೇಜ್ರಿವಾಲ್‌ ನಿನ್ನೆ ಗುರುವಾರ ಕ್ಷಮೆ ಯಾಚನೆ ಮೂಲಕ ಇತ್ಯರ್ಥಪಡಿಸಿಕೊಂಡಿದ್ದರು.

ಮಾಜಿ ಕಂದಾಯ ಸಚಿವರ ವಿರುದ್ಧ ನಾನು ಮಾಡಿದ್ದ ಎಲ್ಲ ಆಪಾದನೆಗಳು ಆಧಾರರಹಿತವಾದವುಗಳೆಂದು ನಾನು ಕಂಡುಕೊಂಡಿರುವುದರಿಂದ ಆ ಎಲ್ಲ ಆಪಾದನೆಗಳನ್ನು ನಾನು ಹಿಂದೆಗೆದುಕೊಳ್ಳುತ್ತೇನೆ ಮತ್ತು ನಿಮ್ಮಲ್ಲಿ ನಾನು ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ’ ಎಂದು ಬರೆದ ಕ್ಷಮಾಪಣೆ ಕೋರಿಕೆಯ ಹೇಳಿಕೆಯನ್ನು ಕೇಜ್ರಿವಾಲ್‌ ಕೋರ್ಟಿಗೆ ಸಲ್ಲಿಸುವ ಮೂಲಕ ಮಾನನಷ್ಟ ದಾವೆಯನ್ನು ಪರಿಹರಿಸಿಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next