Advertisement

ಭಗವಾನ ಮಹಾವೀರ ಜಯಂತ್ಯುತ್ಸವ

01:16 PM Apr 10, 2017 | |

ಧಾರವಾಡ: ಬದುಕಿ, ಬದುಕಲು ಬಿಡಿ ಎಂಬ ಮಾರ್ಮಿಕ ಮಾತುಗಳಿಂದ ಸಮಾಜದ ಓರೆಕೋರೆಗಳನ್ನು ತಿದ್ದಿದ ಮಹಾವೀರರ ವಿಚಾರಗಳನ್ನು ಇಂದು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಹೇಳಿದರು. 

Advertisement

ನಗರದ ಕವಿಸಂನಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ಹಾಗೂ ಶ್ವೇತಾಂಬರ ಮತ್ತು ದಿಗಂಬರ ಜೈನ ಸಮಾಜಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭಗವಾನ ಮಹಾವೀರರ 2544ನೇ ಜಯಂತ್ಯುತ್ಸವ ಉದ್ಘಾಟಿಸಿ  ಮಾತನಾಡಿದರು.

ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಜೈನ ಧರ್ಮದ ಕೊಡುಗೆ ಅಪಾರವಾಗಿದೆ ಎಂದರು. ಸಮಾಜದಲ್ಲಿರುವ ಜೀವ ರಾಶಿಯ ಅಳಿವು ಉಳಿವಿಗಾಗಿ ಅಹಿಂಸಾ ಮಾರ್ಗದಲ್ಲಿ ನಿರಂತರ ಹೋರಾಡಿ ಪ್ರಾಣತ್ಯಾಗ ಮಾಡಿದ ಭಗವಾನ್‌ ಮಹಾವೀರರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ  ಅಳವಡಿಕೊಳ್ಳಬೇಕು ಎಂದರು. 

ಭಾರತ ಸೇರಿದಂತೆ ವಿಶ್ವಮಟ್ಟದಲ್ಲಿ ಭಯೋತ್ಪಾದನೆ ಪ್ರಮಾಣ ಹೆಚ್ಚಾಗುತ್ತಿರುವುದು ಮಹಾನ್‌ ನಾಯಕರು ಹಾಕಿಕೊಟ್ಟ ಸನ್ಮಾರ್ಗಕ್ಕೆ  ವಿರುದ್ಧವಾಗಿವೆ. ಯುವ ಜನಾಂಗ ಪರಿಶುದ್ಧವಾದ ಮನಸ್ಸಿನಿಂದ ಇಂತಹ ಭಯೋತ್ಪಾದಕ ಕೃತ್ಯಗಳನ್ನು ತಡೆಗಟ್ಟಲು ಮುಂದಾಗಬೇಕು ಎಂದರು. 

ಇದೇ ಸಂದರ್ಭದಲ್ಲಿ  ಬಿ.ಆರ್‌. ದರೂರ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ| ವಿ.ಎಸ್‌. ಮಾಳಿ ಅವರು, ಭಗವಾನ್‌ ಮಹಾವೀರರ ಸಿದ್ಧಾಂತಗಳ ಕುರಿತು ಉಪನ್ಯಾಸ ನೀಡಿದರು. ಕಪ್ಪತಗುಡ್ಡದ  ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಸ್ವಾಮೀಜಿ, ಎಸ್‌.ಕೆ. ರಂಗಣ್ಣವರ, ತಹಶೀಲ್ದಾರ ಆರ್‌.ವಿ. ಕಟ್ಟಿ,

Advertisement

ಡಾ| ಜಿನದತ್ತ ಹಡಗಲಿ, ಡಾ| ನಿರಂಜನಕುಮಾರ, ಡಾ|  ಅಜಿತಪ್ರಸಾದ, ಡಾ|ಎ.ಬಿ.ಖೋತ್‌, ದತ್ತಾ ಡೋರ್ಲೆ, ಫತೇಚಂದ ಸೋಲಂಕಿ, ಮೋಹನಲಾಲ ಓಸವಾಲ್‌, ಅಶೋಕ ಬಾಗಿ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಭಗವಾನ್‌ ಮಹಾವೀರರ ಭಾವಚಿತ್ರದ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next