Advertisement

ಭಗೀರಥರ ಆದರ್ಶ ಸಮಾಜಕ್ಕೆ ಮಾದರಿ

04:28 PM May 09, 2022 | Team Udayavani |

ಹಾಸನ: ಮಹಾಪುರುಷರ ಜಯಂತಿಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿ ತವಾಗಬಾರದು ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಡಾ.ಪುನೀತ್‌ ಅವರು ಭಗೀರಥ ಜಯಂತಿಯಲ್ಲಿ ಹೇಳಿದರು.

Advertisement

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಗೀರಥರ ಸಂದೇಶಗಳು ಇಂದಿಗೂ ಪ್ರಸ್ತುತ. ಅವರ ವಿಚಾರಗಳನ್ನು ಎಲ್ಲ ವರ್ಗಗಳ ಸಮುದಾಯದವರು ಅರಿತು, ಬಾಳಬೇಕಾ ಗಿದೆ. ನಾವು ನಮಗಾಗಿ ಬದುಕದೆ ಸಮಾಜಕ್ಕಾಗಿ ಬದುಕಬೇಕು ಎಂಬುದು ಭಗೀರಥರ ಮೂಲ ಉದ್ದೇಶವಾಗಿತ್ತು. ಅದಕ್ಕಾಗಿಯೇ ಅವರು ಭೂಮಿಗೆ ಗಂಗೆಯನ್ನು ತಂದಿದ್ದಾರೆ ಎಂದರು.

ಮಹಾನೀಯರ ತತ್ವ ಪಾಲಿಸಿ: ಕಾರ್ಯ ಕ್ರಮದಲ್ಲಿ ಉಪನ್ಯಾಸ ನೀಡಿದ ಪ್ರಾಧ್ಯಾಪಕ ಡಾ. ಸೀ.ಚ.ಯತೀಶ್ವರ ಅವರು, ಭಾರತೀಯ ಸಂಸ್ಕೃತಿ ಜಗತ್ತಿನಲ್ಲಿಯೇ ಶ್ರೇಷ್ಠ ಸಂಸ್ಕೃತಿ ಯಾಗಿದೆ. ಹಲವಾರು ಮಹಾಪುರುಷರ ಕೊಡುಗೆಯಿಂದಾಗಿ ಭಾರತ ವಿಶ್ವದಲ್ಲೇ ವಿಶಿಷ್ಟ ವಾದ ಸ್ಥಾನ ಪಡೆದುಕೊಂಡಿದೆ. ಮಹಾಪುರುಷ ರನ್ನು ಕೇವಲ ಪೂಜೆಗೆ ಮಾತ್ರ ಸೀಮಿತಗೊಳಿಸದೆ, ಅವರ ಆದರ್ಶಗಳನ್ನು ಜೀವನದಲ್ಲಿ ಸದಾ ಅಳವಡಿಸಿ ಕೊಳ್ಳಬೇಕು. ಅವರ ಜೀವನ ಮತ್ತು ಸಂದೇಶ ಅರ್ಥಮಾಡಿಕೊಂಡಾಗ ಮಾತ್ರ ಇಂತಹ ಆಚರಣೆಗಳಿಗೆ ಅರ್ಥ ಸಿಗುತ್ತದೆ ಎಂದರು.

ಭಗೀರಥರ ಆದರ್ಶವಿರಲಿ: ಯಾವುದೇ ಸಾಧನೆಗೆ ಶ್ರಮ ಅತ್ಯಗತ್ಯ. ಭಗೀರಥರು ಗಂಗೆ ಯನ್ನು ದೇವಲೋಕದಿಂದ ಭೂಮಿಗೆ ಇಳಿಸುವ ಅಸಾಧ್ಯವಾದದ್ದನ್ನು ಸಾಧಿಸಿದ ಮಹಾಪುರು ಷರು. ಆಧುನಿಕ ಜೀವನಕ್ಕೆ ಭಗೀರಥರ ಆದರ್ಶ ತುಂಬಾ ಮುಖ್ಯ. ಅವರಂತೆ ಮಾನಸಿಕವಾಗಿ, ದೈಹಿಕವಾಗಿ ಇಂದಿನ ಯುವ ಪೀಳಿಗೆ ಸದೃಢವಾಗಬೇಕಿದೆ. ಪಿತೃಗಳ ಸದ್ಗತಿಗಾಗಿ ಗಂಗೆಯನ್ನು ಭೂಮಿಗೆ ತಂದ, ಮಾನವ ಸಮುದಾಯಕ್ಕೆ ನೀರು ಒದಗಿಸಿದ ಕೀರ್ತಿಗೆ ಪಾತ್ರರಾದ ಭಗೀರಥರಂತೆ ನಾವು ಸಮಾಜಕ್ಕಾಗಿ ಬದುಕೋಣ ಎಂದು ಅಶಿಸಿದರು.

ಓದಿನ ಸಾರ ಅರಿಯಿರಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ. ಕೃಷ್ಣೇಗೌಡ ಅವರು ಮಾತನಾಡಿ, ಇಂದಿನ ಪೀಳಿಗೆಯ ಮಕ್ಕಳು ಪುಸ್ತಕಗಳನ್ನು ಒದುವುದರ ಮೂಲಕ ಉತ್ತಮ ಜ್ಞಾನ ಪಡೆದುಕೊಳ್ಳಬಹುದಾಗಿದೆ. ಭಗೀರಥರಂತಹ ಮಹನೀಯರ ಬಗ್ಗೆ ಓದಿ ಅರ್ಥೈಸಿಕೊಳ್ಳುವುದು ಬಹಳ ಮುಖ್ಯ ಎಂದರು.

Advertisement

ಮೆರಣಿಗೆಗೆ ಚಾಲನೆ: ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಭಗೀರಥ ಜಯಂತಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.

ಅಲ್ಲಿಂದ ಹೊರಟ ಮೆರವಣಿಗೆಯು ಕಲಾಕ್ಷೇತ್ರಕ್ಕೆ ತಲಪಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್‌, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಎಸ್‌.ಜೆ. ನೀಲಪ್ಪ, ನಗರಸಭೆ ಸದಸ್ಯ ಎಂ.ಚಂದ್ರೇಗೌಡ, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಂ.ಶಿವಣ್ಣ, ಸಣ್ಣ ಕೈಗಾರಿಕೆಗಳ ಜಿಲ್ಲಾ ಸಂಘದ ಅಧ್ಯಕ್ಷ ಮಹಾಂತಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next