Advertisement

ದೇವಗಂಗೆ ಭೂಮಿಗೆ ತಂದ ಮಹಾಪುರುಷ ಭಗೀರಥ

12:00 PM May 25, 2019 | pallavi |

ಮಹಾಲಿಂಗಪುರ: ದೇವಗಂಗೆಯನ್ನು ತನ್ನ ತಪಶಕ್ತಿಯಿಂದ ಮನುಕುಲದ ಉದ್ದಾರಕ್ಕಾಗಿ ಭೂಮಿಗೆ ತಂದ ಮಹಾಪುರುಷ ಭಗೀರಥ ಮಹರ್ಷಿ ಎಂದು ಚಿಕ್ಕನಂದಿಯ ಸಿದ್ಧಾರೂಢ ದರ್ಶನ ಪೀಠದ ಪೀಠಾಧ್ಯಕ್ಷ ಸಹಜಾನಂದ ಶ್ರೀಗಳು ಹೇಳಿದರು.

Advertisement

ಭಗೀರಥ ಸಮಾಜ ಸೇವಾ ಸಂಘ ಹಾಗೂ ಯುವಕ ಸಂಘದ ಆಶ್ರಯದಲ್ಲಿ ಶುಕ್ರವಾರ ನಡೆದ ಭಗೀರಥ ಜಾತ್ರೆ ಹಾಗೂ 9ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ದೇವಗಂಗೆಯನ್ನು ಭೂಮಿಗೆ ತಂದು ಮಹಾನ್‌ ಪುರುಷ ಭಗೀರಥ ಇಂಥ ಮಹಾತ್ಮರ ತತ್ವಾದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ಜಯಂತಿ ಉತ್ಸವಕ್ಕೆ ಒಂದು ಅರ್ಥ ಬರುತ್ತದೆ ಎಂದರು.

ಇವತ್ತು ಮಕ್ಕಳಿಗೆ ಬರೀ ವಿದ್ಯೆ ಕಲಿಸುವುದರಲ್ಲಿಯೇ ಮಗ್ನರಾಗಿದ್ದೇವೆ ಹೊರತು ಸಂಸ್ಕೃತಿ ಕಲಿಸುತ್ತಿಲ್ಲ. ಸಂಸ್ಕೃತಿ ಇಲ್ಲದ ವಿದ್ಯೆಗೆ ಯಾವ ಬೆಲೆಯೂ ಇಲ್ಲ. ಯಾರು ಯಾವ ತರಹದ ವಾತಾವರಣದಲ್ಲಿ ಬೆಳೆಯುತ್ತಾರೋ ಅವರಿಗೆ ಅದೇ ಸಂಸ್ಕೃತಿ ಬರುತ್ತದೆ. ಕಾರಣ ಎಲ್ಲರಿಗೂ ನರ ಜನ್ಮವನ್ನು ತಳೆದು ಹರ ಜನ್ಮವನ್ನು ನೀಡುವ ಕೆಲಸ ಮಹಾತ್ಮರು ಮಾಡಬೇಕಾಗಿದೆ. ನಮ್ಮ ಸಂಸ್ಕೃತಿ ಉಳಿಸಿ-ಬೆಳೆಸುವ ಕೆಲಸ ಎಲ್ಲರೂ ಮಾಡಿದಾಗ ಮಾತ್ರ ಒಂದು ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಮಾತನಾಡಿ, ಯಾವುದೇ ಒಂದು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಆ ಸಮಾಜದ ಯುವಕರಿಗೆ ಶಿಕ್ಷಣ ಮತ್ತು ಸಂಸ್ಕೃತಿ ಎರಡನ್ನು ಒದಗಿಸುವ ಕೆಲಸವನ್ನು ನಾವೇಲ್ಲರೂ ಮಾಡಬೇಕು ಎಂದರು.

ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಸಣ್ಣ ಲಿಂಗಣ್ಣವರ, ನ್ಯಾಯವಾದಿ ಎನ್‌.ಆರ್‌. ಲಾತೂರ ಮಾತನಾಡಿ, ನಮ್ಮದು ಚಿಕ್ಕದಾದ ಸಮಾಜ ಇಲ್ಲಿರುವ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸುವ ಮೂಲಕ ನಾವು ಮುಖ್ಯವಾಹಿನಿಗೆ ಬರಬೇಕಾಗಿದೆ. ನಮ್ಮ ಹಿಂದೂಳಿದ ಸಮಾಜಕ್ಕೆ ಸರ್ಕಾರ ಸಹಾಯ ಹಸ್ತ ಅನಿವಾರ್ಯವಾಗಿದೆ. ನಮ್ಮ ಸಮಾಜದ ಎಲ್ಲ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣ ವಂತರಾಗುವುದರ ಜೊತೆಗೆ ಸಂಸ್ಕಾರ ಕಲಿಯಬೇಕು. ಅಂದಾಗ ಮಾತ್ರ ನಾವು ಕೂಡಾ ಎಲ್ಲ ಸಮಾಜಗಳಂತೆ ಆರ್ಥಿಕವಾಗಿ ಮುಂದೆ ಬರಲು ಸಾಧ್ಯ ಎಂದರು.

Advertisement

ಜಮಖಂಡಿಯ ಚಿಕ್ಕಲಕಿ ಕ್ರಾಸಿನ ಶಿವಾನಂದ ಸ್ವಾಮಿಗಳು, ಉಪ್ಪಾರಟ್ಟಿಯ ಸಿದ್ಧಾರೂಢ ಮಠದ ನಾಗೇಶ್ವರ ಚೇತನ ಸ್ವಾಮಿಗಳು ಮಾತನಾಡಿದರು. ಜಗದ್ಗುರು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಮತ್ತು ಶಾಸಕ ಸಿದ್ದು ಸವದಿ ಅವರು ಸಮಾರಂಭ ಉದ್ಘಾಟಿದರು. ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.

ಸವದತ್ತಿಯ ಭಾರ್ಗವಾನಂದ ಸ್ವಾಮೀಜಿ, ರನ್ನಬೆಳಗಲಿಯ ಸಿದ್ದರಾಮ ಶಿವಯೋಗಿ, ಸುರೇಶ ಲಾತೂರ, ಮಲ್ಲಪ್ಪ ಸಿಂಗಾಡಿ, ಮಾರುತಿ ಶರಣರು, ದುಂಡಪ್ಪ ಜಾಧವ, ಭೀಮಶಿ ಸಸಾಲಟ್ಟಿ, ಎಚ್.ಸಿ ನೀರಾವರಿ, ಬಿ.ಈಶ್ವರಪ್ಪ, ಶ್ರೀಕಾಂತ ರಾವ. ಮಹಾಲಿಂಗಪ್ಪ ಕೋಳಿಗುಡ್ಡ, ಸಂಗಪ್ಪ ಹಲ್ಲಿ, ಪರಪ್ಪ ಬ್ಯಾಕೋಡ, ಸದಾಶಿವ ಲೋನಾರಿ, ಅಶೋಕ ಸಿದ್ದಾಪುರ, ಮಹಾಲಿಂಗಪ್ಪ ಕುಳ್ಳೋಳ್ಳಿ, ಮಲಿಕಪ್ಪ ಮಸರಕಲ್, ಮುತ್ತಪ್ಪ ಲಾತೂರ, ಬಿ.ವೈ. ಪೂಜಾರಿ, ಮಲ್ಲಪ್ಪ ಮುದಕಪ್ಪಗೋಳ, ಲಕ್ಷ್ತ್ರಣ ಮುಗಳಖೋಡ, ರಾಜು ಮುದಕಪ್ಪಗೋಳ, ಮಹಾಲಿಂಗಪ್ಪ ಲಾತೂರ, ವಿಷ್ಣು ಲಾತೂರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next